ಬಲ್ಗೇರಿಯ (България, ಅಧಿಕೃತವಾಗಿ ಬಲ್ಗೇರಿಯ ಗಣರಾಜ್ಯ (Република България, ಪೂರ್ವ ಯುರೋಪ್ನ ಒಂದು ದೇಶ. ಇದರ ಉತ್ತರಕ್ಕೆ ರೊಮಾನಿಯ, ಪಶ್ಚಿಮಕ್ಕೆ ಸೆರ್ಬಿಯ ಮತ್ತು ಉತ್ತರ ಮ್ಯಾಸೆಡೊನಿಯ, ದಕ್ಷಿಣಕ್ಕೆ ಗ್ರೀಸ್ ಮತ್ತು ಟರ್ಕಿ ದೇಶಗಳಿವೆ. ಇದರ ಪೂರ್ವಕ್ಕೆ ಕಪ್ಪು ಸಮುದ್ರವಿದೆ. ಪ್ರಾಚೀನ ಕಾಲದ ಥ್ರಾಸ್, ಮೊಸಿಯ ಮತ್ತು ಮ್ಯಾಸೆಡೊನಿಯಗಳ ಪ್ರದೇಶದಲ್ಲಿ ಈಗ ಬಲ್ಗೇರಿಯ ಇದೆ.