ಬಳೆ ಎಂದರೆ ವೃತ್ತಾಕಾರವಾದ ಒಂದು ವಸ್ತು. ಸಾಮಾನ್ಯವಾಗಿ ಹೆಂಗಸರು ತಮ್ಮ ಕೈಗಳಿಗೆ ಧರಿಸುತ್ತಾರೆ. ಬಳೆಗಳು ಸಣ್ಣಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರೂ ಧರಿಸುತ್ತಾರೆ. ಘಳಘಳ ಸದ್ದು ಮಾಡುತ್ತಾ ಎಲ್ಲರನ್ನು ತನ್ನತ್ತ ಸೆಳೆಯುವ ವಿಶಿಷ್ಟ ಗುಣ ಇದ್ದಕ್ಕಿದೆ. == ಬಳೆಗಳ ವಿಧಗಳು == ಗಾಜಿನ ಬಳೆಗಳು-ಮಣ್ಣಿನ ಬಳೆಗಳು ರಬ್ಬರ್ ಬಳೆಗಳು ಅಲ್ಯೂಮಿನಿಯಮ್ ಬಳೆಗಳು ಪ್ಲಾಸ್ಟಿಕ್ ಬಳೆಗಳು ಚಿನ್ನದ ಬಳೆಗಳು ಬೆಳ್ಳಿಯ ಬಳೆಗಳು ಇತರ ಲೋಹದ ಬಳೆಗಳು == ಗಾಜಿನ ಬಳೆಗಳು ಅಥವಾ ಮಣ್ಣಿನ ಬಳೆಗಳು: == ಗಾಜಿನ ಬಳೆಗಳು ಅಥವಾ ಮಣ್ಣಿನ ಬಳೆಗಳು:ವಿವಿಧ ಬಣ್ಣಗಳಿಂದ ಕೂಡಿದ್ದು ಬಡವರಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರು ಇದನ್ನು ಇಷ್ಟಪಡುತ್ತಾರೆ. ಅದರಲ್ಲಿಯೂ ಕೆಂಪು ಮತ್ತು ಹಸಿರು ಬಣ್ಣದ ಬಳೆಗಳು ಮುತೈದೆಯರ ಲಕ್ಷಣವಾಗಿದೆ.ಮಣ್ಣಿನ ಬಳೆಗಳು ಹೆಚ್ಚು ದಪ್ಪಗಿದ್ದು ವಿವಿಧ ಬಣ್ಣಗಳಿಂದ ಆಕಷಕವಾಗಿ ಕಾಣುತ್ತದೆ. == ಪ್ಲಾಸ್ಟಿಕ್ ಬಳೆಗಳು: == ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳೆಗಳು ಹೊಸ ಜನಾಂಗದ ಯುವತಿಯರನ್ನು ಹೆಚ್ಚು ಸೆಳೆಯುತ್ತದೆ. ಹೆಚ್ಚು ಬಾಳಿಕೆ ಬರುವ ಈ ಬಳೆಗಳು ಬೇರೆ ಬೇರೆ ಗಾತ್ರ ಮತ್ತು ಆಕಾರಗಳಲ್ಲಿಯೂ ದೊರೆಯುತ್ತದೆ. == ಚಿನ್ನದ ಬಳೆಗಳು: == ಹೆಚ್ಚಾಗಿ ಇದನ್ನು ಶ್ರೀಮಂತರು ಮಾತ್ರ ಧರಿಸುತ್ತಾರೆ.ಮದುವೆ ಮುಂತಾದ ಸಮಾರಂಭಗಳಲ್ಲಿ ಇದು ಹೆಚ್ಚು ಪ್ರಾಶಸ್ತ್ಯವನ್ನು ಹೊಂದಿದೆ. == ಬೆಳ್ಳಿಯ ಬಳೆಗಳು: == ಇದನ್ನು ಬಳಸುವುದು ಬಲು ವಿರಳ. ಆದರೂ ಬೆಳ್ಳಿಯ ಬಳೆಗೆ ಚಿನ್ನದ ಲೇಪನವನ್ನು ಹಾಕಿ ಬಳಸುವುದು ಇದೆ. == ಇತರ ಲೋಹದ ಬಳೆಗಳು: == ಲೋಹಗಳಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಹೊರತು ಪಡಿಸಿ ಇತರ ಲೋಹಗಳನ್ನು ಬಳಸುತ್ತಾರೆ. ಇವುಗಳಿಗೆ ಚಿನ್ನ ಅಥವಾ ಬೆಳ್ಳಿಯ ಲೇಪನ ನೀಡಿ ಹೊಳೆಯುವ ಹಾಗೆ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ "ಒನ್ ಗ್ರಾಂ ಗೋಲ್ಡ್" ( ) ಹೆಚ್ಚು ಪ್ರಚಲಿತದಲ್ಲಿದೆ. == ಉಲ್ಲೇಖಗಳು ==