ಬಾಗೇಶ್ವರ್ ಭಾರತದ ಉತ್ತರಾಖಂಡ ರಾಜ್ಯದ ಬಾಗೇಶ್ವರ್ ಜಿಲ್ಲೆಯಲ್ಲಿನ ಒಂದು ಪಟ್ಟಣ ಮತ್ತು ಪುರಸಭೆ ಮಂಡಳಿಯಾಗಿದೆ. ಬಾಗೇಶ್ವರ್ ರಮಣೀಯ ಪರಿಸರ, ಹಿಮನದಿಗಳು, ನದಿಗಳು ಮತ್ತು ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಇದು ಬಾಗೇಶ್ವರ ಜಿಲ್ಲೆಯ ಆಡಳಿತ ಕೇಂದ್ರವೂ ಆಗಿದೆ. ಬಾಗೇಶ್ವರ್ ಟಿಬೆಟ್ ಮತ್ತು ಕುಮಾವ್ಞು ನಡುವಿನ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು ಮತ್ತು ಭೋಟಿಯಾ ವ್ಯಾಪಾರಿಗಳು ಇಲ್ಲಿಗೆ ಆಗಾಗ್ಗೆ ಬಂದು ರತ್ನಗಂಬಳಿಗಳು ಮತ್ತು ಬಾಗೇಶ್ವರ್‌ನ ಇತರ ಸ್ಥಳೀಯ ಉತ್ಪನ್ನಗಳಿಗೆ ಬದಲಾಗಿ ಟಿಬೆಟಿಯನ್ ಸರಕುಗಳು, ಉಣ್ಣೆ, ಉಪ್ಪು ಮತ್ತು ಬೊರಾಕ್ಸ್ ಅನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ನಗರವು ಬಹಳ ಧಾರ್ಮಿಕ, ಐತಿಹಾಸಿಕ ಮತ್ತು ರಾಜಕೀಯ ಮಹತ್ವವನ್ನು ಹೊಂದಿದೆ. ಬಾಗೇಶ್ವರ್‌ವನ್ನು ವಿವಿಧ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಅವುಗಳಲ್ಲಿ ಇದನ್ನು ಶಿವನೊಂದಿಗೆ ಸಂಬಂಧಿಸಲಾಗಿದೆ. == ದೇವಾಲಯಗಳು == ಹಿಂದೂ ಧರ್ಮವು ಬಹುಪಾಲು ಜನರ ಧರ್ಮವಾಗಿರುವುದರಿಂದ ವಿವಿಧ ದೇವಾಲಯಗಳು ಬಾಗೇಶ್ವರ್‌ನಲ್ಲಿವೆ. ಪ್ರಮುಖವಾದದ್ದವೆಂದರೆ: ಬಾಗ್‍ನಾಥ್ ದೇವಸ್ಥಾನ ಗೋಮತಿ ಮತ್ತು ಸರ್ಜು ನದಿಗಳ ಸಂಗಮದಲ್ಲಿ ಶಂಕುವಿನಾಕಾರದ ಗೋಪುರವಿರುವ ದೊಡ್ಡ ದೇವಾಲಯ ನಿಂತಿದೆ. ಇಲ್ಲಿ ಶಿವನ ಗುಣವಾಚಕವಾದ "ಹುಲಿ ಪ್ರಭು" ಎಂದು ಕರೆಯಲ್ಪಡುವ, ಬಾಗೇಶ್ವರ್ ಅಥವಾ ವ್ಯಾಗ್ರೇಶ್ವರ್‌ನ ದೇಗುಲವಿದೆ. ಈ ದೇವಾಲಯವನ್ನು ಕ್ರಿ.ಶ 1450 ರಲ್ಲಿ ಕುಮಾವ್ಞು ರಾಜ ಲಕ್ಷ್ಮಿ ಚಂದ್ ನಿರ್ಮಿಸಿದನು. ಬೈಜ್‍ನಾಥ್ ದೇವಸ್ಥಾನ ಬೈಜ್‍ನಾಥ್ ದೇವಾಲಯವು ಗೋಮತಿ ನದಿಯ ಎಡದಂಡೆಯಲ್ಲಿದೆ. ಇದು ಶಿವನ ದೇವಾಲಯವಾಗಿದ್ದು, ಇದನ್ನು ಬ್ರಾಹ್ಮಣ ವಿಧವೆಯೊಬ್ಬಳು ನಿರ್ಮಿಸಿದಳು. ಚಂಡಿಕಾ ದೇವಸ್ಥಾನ ಚಂಡಿಕಾ ದೇವಿಗೆ ಸಮರ್ಪಿತವಾದ ದೇವಾಲಯವು ಬಾಗೇಶ್ವರ್‌ನಿಂದ ಅರ್ಧ ಕಿಲೋಮೀಟರ್ ದೂರದಲ್ಲಿದೆ. ಶ್ರೀಹಾರು ದೇವಸ್ಥಾನ ಮತ್ತೊಂದು ಪ್ರಮುಖ ದೇವಾಲಯವಾದ ಶ್ರೀಹಾರು ದೇವಸ್ಥಾನವು ಬಾಗೇಶ್ವರ್‌ನಿಂದ ಸುಮಾರು 5 ದೂರದಲ್ಲಿದೆ. ಗೌರಿ ಉಡಿಯಾರ್ ಇದು ಬಾಗೇಶ್ವರ್‌ನಿಂದ 8 ಕಿ.ಮಿ. ದೂರದಲ್ಲಿ. 20 ಮೀ. 95 ಮೀ. ಅಳತೆಯ ಒಂದು ದೊಡ್ಡ ಗುಹೆ ಇಲ್ಲಿ ಸ್ಥಿತವಾಗಿದ್ದು ಇದರಲ್ಲಿ ಶಿವನ ವಿಗ್ರಹಗಳಿವೆ. == ಹೊರಗಿನ ಕೊಂಡಿಗಳು == , == ಉಲ್ಲೇಖಗಳು ==