ಬಾಲ್‍ಪಕ್ರಮ್ ಭಾರತದ ಮೇಘಾಲಯ ರಾಜ್ಯದಲ್ಲಿನ ದಕ್ಷಿಣ ಗಾರೊ ಗುಡ್ಡಗಳ ಜಿಲ್ಲೆಯಲ್ಲಿ ಸ್ಥಿತವಾಗಿದೆ. ಬಾಲ್‍ಪಕ್ರಮ್ ತನ್ನ ಅರಣ್ಯಾಚ್ಛಾದಿತ ಕಮರಿ ಮತ್ತು ಕಂದರಕ್ಕೆ ಪ್ರಸಿದ್ಧವಾಗಿದೆ. ಈಗ್ ಇದು ರಾಷ್ಟ್ರೀಯ ಉದ್ಯಾನದ ಭಾಗವಾಗಿದೆ. ಈ ಉದ್ಯಾನವು ಬಾಲ್‍ಪಕ್ರಮ್ ಪ್ರಸ್ಥಭೂಮಿ ಮತ್ತು ಪಕ್ಕದ ಕಾಡುಗಳನ್ನು ಕೂಡ ಒಳಗೊಳ್ಳುತ್ತದೆ. ಈ ಪ್ರದೇಶವು ಮೇಘಾಲಯದ ದಕ್ಷಿಣ ಭಾಗದಲ್ಲಿದೆ. ಈ ಪ್ರದೇಶದಲ್ಲಿ ವಾಸಿಸುತ್ತಿರುವ ಸ್ಥಳೀಯ ಬುಡಕಟ್ಟಾದ ಗಾರೋಗಳು ಈ ಗುಡ್ಡವು ಮೃತ ಆತ್ಮಗಳಿಗೆ ಒಂದು ಬಗೆಯ ವಿಶ್ರಾಂತಿ ಸ್ಥಳವಾಗಿದೆ ಎಂದು ನಂಬುತ್ತಾರೆ. ಈ ನಂಬಿಕೆಯು ಈ ಪ್ರದೇಶದಲ್ಲಿ ಕಂಡುಬರುವ ಅನೇಕ ವಿಚಿತ್ರ ಆದರೆ ನೈಸರ್ಗಿಕ ರಚನೆಗಳು, ಭೌತಿಕ ಹಾಗೂ ಜೈವಿಕ, ಇವುಗಳ ಕಾರಣದಿಂದಿದೆ. ಈ ಸ್ಥಳವು ಅಪರೂಪದ ಸಸ್ಯ ಹಾಗೂ ಪ್ರಾಣಿ ಜಾತಿಗಳು ಮತ್ತು ಕಡಲ ಪಳೆಯುಳಿಕೆಗಳಿಗೆ ಕೂಡ ಪರಿಚಿತವಾಗಿದೆ. ಬಾಲ್‍ಪಕ್ರಮ್ ಮೇಘಾಲಯದಲ್ಲಿ ಜೀವವೈವಿಧ್ಯದ ಅಪಾಯದ ಸ್ಥಳವಾಗಿದೆ. == ಉಲ್ಲೇಖಗಳು ==