'ಬಿ.ಎಂ.ಇದಿನಬ್ಬ' (ಸೆಪ್ಟೆಂಬರ್ 17, 1920 – ಎಪ್ರಿಲ್ 11, 2009) ಕನ್ನಡದ ಕವಿ, ಪತ್ರಕರ್ತ, ರಾಜಕಾರಣಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ. ಉಳ್ಳಾಲಕ್ಷೇತ್ರದಿಂದ ಮೂರು ಬಾರಿ ವಿದಾನಸಭೆಗೆ ಆಯ್ಕೆಯಾಗಿದ್ದರು. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ಹೋರಾಟಮಾಡಿದರಲ್ಲಿ ಪ್ರಮುಖರು. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಇವರು ಉಪ್ಪಿನಂಗಡಿಯಲ್ಲಿ ಜನಿಸಿ, ಪುತ್ತೂರಿನಲ್ಲಿ ಶಿಕ್ಷಣ ಪಡೆದು ಮಂಗಳೂರಿನಲ್ಲಿ ನೆಲೆಸಿದ್ದರು. ಏಪ್ರಿಲ್ ೧೧, ೨೦೦೯ ರಂದು ನಿಧನರಾದರು.