ಬಿ.ಎಂ.ಪಾಟೀಲ(ಬಸನಗೌಡ ಮಲ್ಲನಗೌಡ ಪಾಟೀಲ)ರು ಬಬಲೇಶ್ವರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಬಿ.ಎಲ್.ಡಿ.ಈ.ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು, ಉದ್ಯಮಿಗಳು ಹಾಗೂ ರಾಜಕೀಯ ಧುರೀಣರು. == ಜನನ == ಬಿ.ಎಂ.ಪಾಟೀಲರು 1ನೇ ನವೆಂಬರ್, 1931ರಂದು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ತೊರವಿ ಗ್ರಾಮದಲ್ಲಿ ಜನಿಸಿದರು. == ಶಿಕ್ಷಣ == ಬೆಳಗಾವಿಯ ಪ್ರತಿಷ್ಟಿತ ಲಿಂಗರಾಜ ಮಹಾವಿದ್ಯಾಲಯದಿಂದ ಬಿ.ಎಸ್ಸಿ. ಪದವಿ ಹೊಂದಿದ್ದರು. == ರಾಜಕೀಯ == 1962ರಲ್ಲಿ ಬಿ.ಎಂ.ಪಾಟೀಲರು ಕಾಂಗ್ರೆಸ್ ಪಕ್ಷದಿಂದ ಮೊದಲ ಬಾರಿಗೆ ವಿಧಾನ ಸಭೆಯ ಸದಸ್ಯರಾಗಿ ಆಯ್ಕೆಯಾದರು. 1962ರಲ್ಲಿ ಶಾಸಕರಾಗಿದ್ದ ಬಿ.ಎಂ.ಪಾಟೀಲರನ್ನು 1983 ಚುನಾವಣೆ ಬಳಿಕ 1989ರವರೆಗೆ ನಡೆದ ಮೂರು ಚುನಾವಣೆಗಳಲ್ಲಿ ಬಿ.ಎಂ.ಪಾಟೀಲರನ್ನು ಗೆಲ್ಲಿಸಿ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗಳಿಸುವಂತೆ ಮಾಡಿತ್ತು. 1967 - 1971ವರೆಗೆ ಬಿ.ಎಂ.ಪಾಟೀಲರು ವಿರೇಂದ್ರ ಪಾಟೀಲ ಮಂತ್ರಿಮಂಡಳದಲ್ಲಿ ನಾಗರಿಕ ಆಡಳಿತ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದರು. 1976 - 1982ವರೆಗೆ ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. ಎಐಸಿಸಿ, ಕೆಪಿಸಿಸಿ ಸಮಿತಿಯ ಸದಸ್ಯರಾಗಿದ್ದರು. ವಿಜಯಪುರದ ಪತಿಷ್ಟಿತ ಶಿಕ್ಷಣ ಸಂಸ್ಥೆಯಾದ ಬಿ.ಎಲ್.ಡಿ.ಈ. ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು. == ಸಚಿವರು == 1967 - 1971ವರೆಗೆ ಬಿ.ಎಂ.ಪಾಟೀಲರು ವಿರೇಂದ್ರ ಪಾಟೀಲ ಮಂತ್ರಿಮಂಡಳದಲ್ಲಿ ನಾಗರಿಕ ಆಡಳಿತ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದರು. == ನಿಧನ == ಬಿ.ಎಂ.ಪಾಟೀಲರು 27ನೇ ಜುಲೈ 1990ರಲ್ಲಿ ನಿಧನರಾದರು. == ಉಲ್ಲೇಖಗಳು ==