ಬಿ.ವಲರ್ಮತಿ ಒಬ್ಬ ಭಾರತೀಯ ರಾಜಕಾರಣಿ ಮತ್ತು ತಮಿಳುನಾಡು ವಿಧಾನಸಭೆಯ ಥೌಸಂಡ್ ಲೈಟ್ಸ್ ಕ್ಷೇತ್ರದಿಂದ ೧೪ನೇ ಸದಸ್ಯರಾಗಿದ್ದರು. ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಸದಸ್ಯೆಯಾಗಿ, ಅವರು ೧೯೮೪ ರಲ್ಲಿ ಮೈಲಾಪುರ್, ೨೦೦೧ರಲ್ಲಿ ಆಲಂದೂರು ಕ್ಷೇತ್ರದಿಂದ ಮತ್ತು ೨೦೧೧ರ ಚುನಾವಣೆಯಲ್ಲಿ ಥೌಸಂಡ್ ಲೈಟ್ಸ್‌ನಿಂದ ಆಯ್ಕೆಯಾದರು. ಅವರು ಪ್ರಸ್ತುತ ಎಐಎಡಿಎಂಕೆಯ ಮಹಿಳಾ ವಿಭಾಗದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಯಲಲಿತಾ ಸಂಪುಟದಲ್ಲಿ ಎರಡು ಬಾರಿ (ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ (೨೦೧೧-೨೦೦೬) ಮತ್ತು ಸಮಾಜ ಕಲ್ಯಾಣ (೨೦೧೧-೨೦೧೬)) ಸಚಿವೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. ೨೦೧೬ರ ಚುನಾವಣೆಯಲ್ಲಿ ಅವರ ಕ್ಷೇತ್ರವನ್ನು ಕು. ಕಾ. ಸೆಲ್ವಂ ಗೆದ್ದರು. ೨೦೧೬ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸೋತ ೧೩ ಹಾಲಿ ಎಡಿಎಂಕೆ ಸಚಿವರಲ್ಲಿ ಇವರೂ ಒಬ್ಬರು. ಜಯಲಲಿತಾ ಅವರ ಸಾವಿನ ನಂತರ, ಅವರು ೨೦೧೮ ರಲ್ಲಿ ಎಡಿಎಂಕೆ ಪಾಳೆಯಕ್ಕೆ ಮರಳುವ ಮೊದಲು ಶಶಿಕಲಾ ಬಣದೊಂದಿಗೆ ಹೊಂದಾಣಿಕೆ ಮಾಡಿಕೊಂಡರು. ಅವರು ೨೦೧೭ - ೨೦೨೧ರಿಂದ ತಮಿಳುನಾಡು ಪಠ್ಯಪುಸ್ತಕ ಸಂಘದ ಅಧ್ಯಕ್ಷರಾಗಿ ನೇಮಕಗೊಂಡರು. ಈ ಸ್ಥಾನವು ಕ್ಯಾಬಿನೆಟ್ ಮಂತ್ರಿಯ ಸಮಾನ ಶ್ರೇಣಿಯನ್ನು ಹೊಂದಿತ್ತು. ಎಡಿಎಂಕೆಯ ಕೆಲವೇ ಕೆಲವು ಪ್ರಮುಖ ಮಹಿಳಾ ನಾಯಕರಲ್ಲಿ ಇವರೂ ಒಬ್ಬರು. == ಸ್ಪರ್ಧಿಸಿದ ಚುನಾವಣೆಗಳು == == ಉಲ್ಲೇಖಗಳು ==