ಬಿ.ಸಿ.ಗೌರಿಶಂಕರ್ ರವರು ಕನ್ನಡ ಚಿತ್ರೋಧ್ಯಮದಲ್ಲಿದ್ದ ಒಬ್ಬ ಛಾಯಾಗ್ರಾಹಕ. ಇವರ ಪತ್ನಿ ಚಲನಚಿತ್ರ ನಟಿ ಮಮತಾರಾವ್ ಮತ್ತು ಇವರೀರ್ವರ ಪುತ್ರಿ ನಾಯಕ ನಟಿ ರಕ್ಷಿತಾ.ಇವರು ಛಾಯಾಗ್ರಾಹಣ ಮಾಡಿದ ಪ್ರಮುಖ ಚಲನಚಿತ್ರಗಳೆಂದರೆ ನಾಗಭರಣರವರ ನಾಗಮಂಡಲ, ಮೈಸೂರ ಮಲ್ಲಿಗೆ ಮುಂತಾದವು. == ಶಿಕ್ಶಣ ಮತ್ತು ವೃತ್ತಿ == ಬೆಂಗಳೂರಿನ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ನಲ್ಲಿ ಛಾಯಾಗ್ರಹಣದಲ್ಲಿ ಶಿಕ್ಷಣ ಪಡೆದ ಗೌರಿಶಂಕರ್‌, ಶೃಂಗಾರ ಮಾಸ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾಗಿ ಕೆಲಸ ಆರಂಭಿಸಿದ್ದರು. ಹೊಸಬೆಳಕು,ಚಲಿಸುವ ಮೋಡಗಳು,ಬೆಂಕಿಯ ಬಲೆ, ಆಲೆಮನೆ, ಚಿಗುರಿದ ಕನಸು, ಜನುಮದ ಜೋಡಿ, ಇವರ ಪ್ರಮುಖ ಚಿತ್ರಗಳು. == ಛಾಯಾಗ್ರಹಣದ ಚಿತ್ರಗಳು == == ಉಲ್ಲೇಖನಗಳು ==