ಬಿತೋರಿಯಾ-ಗಾಸ್ತೇಯ್ಸ್ ೨೩೫,೬೬೧ ಜನಸಂಖ್ಯೆಯಿರುವ, ಉತ್ತರ ಸ್ಪೇನ್‍ನ ಆಲಾವಾ ಪ್ರಾಂತ್ಯ ಮತ್ತು ಪಾಯೀಜ಼್ ವಾಸ್ಕೊ ಸ್ವಾಯತ್ತ ಸಮುದಾಯದ ರಾಜಧಾನಿ. ಅದು ಎರಡನೇ ಅತಿ ದೊಡ್ಡ ಬ್ಯಾಸ್ಕ್ ನಗರ. ನಗರದ ನಿವಾಸಿಗಳನ್ನು "ಬಿತೊರಿಯಾನೊಗಳು" ಅಥವಾ "ಗಾಸ್ತೇಯ್ಸ್‍ತಾರಾಕ್" ಎಂದು ಕರೆಯಲಾದರೆ, ಸಾಂಪ್ರದಾಯಿಕವಾಗಿ ಅವರಿಗೆ "ಬಾಬಾಸೊರ್ರೊಗಳು" ಎಂಬ ಅಡ್ಡಹೆಸರಿದೆ (ಬ್ಯಾಸ್ಕ್ ಭಾಷೆಯಲ್ಲಿ ಅವರೆ ಭಕ್ಷಕರು).