ಬಿದರಕೋಟೆ, ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಒಂದು ಗ್ರಾಮ. ಮಂಡ್ಯ ಜಿಲ್ಲಾಕೇಂದ್ರದಿಂದ ೨೦ ಕಿಲೋಮೀಟರ್ ಹಾಗೂ ಮದ್ದೂರು ತಾಲೂಕು ಕೇಂದ್ರದಿಂದ ೨೦ ಕಿಲೋಮೀಟರ್ ದೂರದಲ್ಲಿದೆ. 'ಹೊಂಬಿನಾಯ್ಕ' ಎಂಬ ಪಾಳೇಗಾರ ಈ ಊರನ್ನು ಆಳಿದವರಲ್ಲಿ ಕೊನೆಯವನು. ದೇವೀರಮ್ಮ ಈ ಗ್ರಾಮದ ದೇವತೆ. 'ವರದರಾಜ ಸ್ವಾಮಿ' ಇನ್ನೊಂದು ಪ್ರಮುಖ ದೇವಸ್ಥಾನ. ಊರಿನ ಉತ್ತರಬಾಗದಲ್ಲಿರುವ ಕೆರೆಯ ಕೆಳಗೆ ಚೋಳರ ಕಾಲದ 'ಸೋಮೇಶ್ವರ' ದೇವಾಲಯವಿದೆ. ಈ ಗ್ರಾಮವು 'ಬಿದರಕೋಟೆ ಗ್ರಾಮ ಪಂಚಾಯಿತಿ'ಯ ಕೇಂದ್ರಸ್ಥಾನವೂ ಆಗಿದೆ.