ಬುದ್ಬುದ ಎಂದರೆ ಒಂದು ವಸ್ತುವಿನಲ್ಲಿ ಮತ್ತೊಂದು ವಸ್ತುವಿನ ಗೋಳಕಣ, ಸಾಮಾನ್ಯವಾಗಿ ದ್ರವದಲ್ಲಿ ಅನಿಲದ ಕಣ. ಮಾರಾಂಗೋನಿ ಪರಿಣಾಮದ ಕಾರಣ, ಬುದ್ಬುದಗಳು ಮುಳುಗಿದ ಪದಾರ್ಥದ ಮೇಲ್ಮೈಯನ್ನು ತಲುಪಿದಾಗಲೂ ಅಖಂಡವಾಗಿ ಉಳಿದಿರಬಹುದು. == ಸಾಮಾನ್ಯ ಉದಾಹರಣೆಗಳು == ದೈನಂದಿನ ಜೀವನದಲ್ಲಿ ಅನೇಕ ಸ್ಥಳಗಳಲ್ಲಿ ಬುದ್ಬುದಗಳು ಕಾಣುತ್ತವೆ, ಉದಾಹರಣೆಗೆ: ಅಮಾದಕ ಪಾನೀಯಗಳಲ್ಲಿ ಅಧಿಪರ್ಯಾಪ್ತವಾದ ಇಂಗಾಲದ ಡೈಆಕ್ಸೈಡ್‍ನ ಸಹಜ ಬೀಜೀಭವನವಾಗಿ ಕುದಿಯುತ್ತಿರುವ ನೀರಿನಲ್ಲಿ ಆವಿಯಾಗಿ ಕಲಕಿದ ನೀರಿನೊಳಗೆ ಮಿಶ್ರಣಗೊಂಡ ಗಾಳಿಯಾಗಿ, ಉದಾಹರಣೆಗೆ ಜಲಪಾತದ ಕೆಳಗೆ ಕಡಲನೊರೆಯಾಗಿ ಸಾಬೂನಿನ ಬುದ್ಬುದವಾಗಿ ರಾಸಾಯನಿಕ ಪ್ರಕ್ರಿಯೆಗಳಲ್ಲಿ ಉತ್ಸರ್ಜನವಾಗಿ, ಉದಾ. ಅಡುಗೆ ಸೋಡಾ + ವಿನಿಗರ್ ಗಾಜಿನ ತಯಾರಿ ವೇಳೆಯಲ್ಲಿ ಸಿಲುಕಿಕೊಂಡ ಅನಿಲವಾಗಿ ಫ಼್ಲಾರೆಸೀನ್ ಹಾಗೂ ನೀರಿನ (ಅಥವಾ ಆಲ್ಕೊಹಾಲ್) ದ್ರಾವಣದಲ್ಲಿ ಅನಿಲದ ಬುದ್ಬುದವು ರಸಮಟ್ಟದ ಅತ್ಯಗತ್ಯ ಭಾಗವಾಗಿದೆ == ಉಲ್ಲೇಖಗಳು ==