ಬುರುಂಡಿ, ಅಧಿಕೃತವಾಗಿ ಬುರುಂಡಿ ಗಣರಾಜ್ಯ, ಪೂರ್ವ ಆಫ್ರಿಕಾದ ಮಹಾ ಸರೋವರಗಳ ಪ್ರದೇಶದಲ್ಲಿನ ಒಂದು ಚಿಕ್ಕ ದೇಶ. ಇದರ ಉತ್ತರಕ್ಕ ರ್ವಾಂಡ, ದಕ್ಷಿಣ ಮತ್ತು ಪೂರ್ವಕ್ಕೆ ತಾಂಜೇನಿಯ ಮತ್ತು ಪಶ್ಚಿಮಕ್ಕೆ ಕಾಂಗೊ ಪ್ರಜಾತಂತ್ರಾತ್ಮಕ ಗಣರಾಜ್ಯಗಳಿವೆ. ಇದರ ಪಶ್ಚಿಮ ಗಡಿಯ ಬಹುತೇಕ ಉದ್ದಕ್ಕೂ ಟ್ಯಾಂಗನೀಕ ಸರೋವರವಿದೆ. ಈ ದೇಶದ ಹೆಸರು ಇಲ್ಲಿನ ಬಂಟು ಭಾಷೆಯಾದ ಕಿರುಂಡಿ ಇಂದ ಬಂದಿರುವುದು.