ಬೆಂಡೆಮರ ಅಥವಾ ಕಿಡಿಯಾ ಕ್ಯಾಲಿಸಿನಾ ಎಂಬುದು ಭಾರತೀಯ ಉಪಖಂಡ, ದಕ್ಷಿಣ ಚೀನಾ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಡುಬರುವ ಕಿಡಿಯಾ ಕುಲದ ಹೂಬಿಡುವ ಸಸ್ಯವಾಗಿದೆ. ವೇಗವಾಗಿ ಬೆಳೆಯುವ, ಮಧ್ಯಮ ಗಾತ್ರದ ಮರ. ಇದನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತದೆ. ಇದು ಅಗ್ಗದ ಮರ ಮತ್ತು ಫೈಬರ್‌ಗಾಗಿ ಬೆಳೆಸಲಾಗುತ್ತದೆ. ಭಾರತದಲ್ಲಿ ಪಶ್ಚಿಮ ಘಟ್ಟ, ಪೂರ್ವ ಘಟ್ಟ, ಎಲೆ ಉದುರಿಸುವ ಶುಷ್ಕ ಕಾಡುಗಳಲ್ಲಿ ಕಂಡು ಬರುತ್ತದೆ. == ಹೆಸರುಗಳು == ಭಾರತದ ವಿವಿಧ ಪ್ರದೇಶಗಳಲ್ಲಿ ವಿವಿಧ ಭಾಷೆಗಳಲ್ಲಿ ಈ ಮರದ ಹೆಸರುಗಳು ಇಂತಿವೆ. ಅಸ್ಸಾಮಿ-ಬಾನ್-ಕೋಪಾಹಿ,ಕುಕುಹಾ,ಪಿಚೋಲಾ ಬೆಂಗಾಲಿ-ಪೋಲಾ ಪೋಲಾ ಚೈನೀಸ್-翅果麻 ಚಿ ಗುವೋ ಮಾ ಆಂಗ್ಲ-ಪುಲಾ,ರಾಕ್ಸ್‌ಬರ್ಗ್‌ನ ಕಿಡಿಯಾ ಗುಜರಾತಿ-ದೊಡ್ಡ ಹಿರ್ವಾನಿ, ಮೋತಿ ಹಿರ್ವಾನಿ ಹಿಂದಿ-ಪುಲಾ,ಪತ್ತ,ಪುಲಿಯಾ ಕನ್ನಡ-ಬೆಂದೆ, ಬೆಂಡೆಮರ ಕೊಂಕಣಿ -ವಾರಂಗ್ ಮಲಯಾಳಂ-ವೆಲ್ಲಚಡಚಿ,ವೆಲುಕ್ಕು,ವೆಲುಕ್ಕುವೆಂಟಾ, ಕಟ್ಟಾವನಕ್ಕ್, ವೆಲಲತಚ್ಚಿ. ಮಣಿಪುರಿ-ಖಾಬಿ ಮರಾಠಿ -ರಣ್ ಭೆಂಡಿ, ರಣಭೆಂಡಿ,ವಾರಂಗ್ ಒರಿಯಾ-ಬ್ಯಾಂಕೋಪಾಸಿಯಾ ಇತರೆ-ಬೆಂಡೈ,ಭೋತಿ,ಇಲ್ಯಾ,ಕುಬಿಂದೆ,ಕಿಡಿಯಾ,ವೆಲ್ಲಚಡಚಿ,ವೆಲ್ಲುಕು ವೆಂಟಾ,ಪುಲಿಯಾ ತಮಿಳು-ವಟ್ಟಕಣ್ಣು,ಪುಲಾ ತೆಲುಗು-ಪೊಟಾರಿ ಉರ್ದು-ಕಪಾಸಿಯಾ == ಸಸ್ಯ ವಿವರಣೆ == ಸುಮಾರು ೧೫ ಮೀಟರ್ ಎತ್ತರಕ್ಕೆ ಬೆಳೆಯುವ ಮರ. ತೊಗಟೆ ೫-೬ ಸೆ.ಮೀ ದಪ್ಪ ಇರುತ್ತದೆ.ಬಣ್ಣ ಬೂದು ಕಂದು.ಕಿರುಕೊಂಬೆಗಳು ದುಂಡಾಗಿದ್ದು, ನಕ್ಷತ್ರಾಕಾರದ ಮೃದುತುಪ್ಪಳದಿಂದ ಕೂಡಿರುತ್ತವೆ.ಎಲೆಗಳು ಸರಳವಾಗಿದ್ದು, ಪರ್ಯಾಯವಾಗಿರುತ್ತವೆ.ಅಕ್ಟೋಬರ್ -ಡಿಸೆಂಬರ್ ತಿಂಗಳಲ್ಲಿ ಹೂವು ಬಿಡುತ್ತದೆ. == ಉಪಯೋಗಗಳು == ಮರ ಉರುವಲಾಗಿ ಉಪಯೋಗವಾಗುತ್ತದೆ. ಎಲೆಗಳು ಆನೆಗಳಿಗೆ, ಜಿಂಕೆ ಮತ್ತು ಕಾಡುಕೋಣಗಳಿಗೆ ಉತ್ತಮ ಮೇವು. == ಉಲ್ಲೇಖಗಳು ==