ಬೆಟ್ಟಕಣಿಗಲುಇದು ಏಷ್ಯಾಖಂಡದ ವೃಕ್ಷ.ಮುಖ್ಯವಾಗಿ ಭಾರತ,ಶ್ರೀಲಂಕಾ,ಇಂಡೋನೇಷ್ಯಾ ಮುಂತಾದ ದೇಶಗಳಲ್ಲಿ ಕಂಡು ಬರುತ್ತದೆ.ಕರ್ನಾಟಕದಲ್ಲಿ ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುವುದು.ತುಳು ಭಾಷೆಯಲ್ಲ ಇದನ್ನು ಮುಚ್ಛಿರು ಎಂದು ಕರೆಯುತ್ತಾರೆ. == ಸಸ್ಯಶಾಸ್ತ್ರೀಯ ವರ್ಗೀಕರಣ == ಇದು ದಿಲ್ಲೆನಿಯೇಸಿ()ಕುಟುಂಬದ ಮರ.ಸಸ್ಯಶಾಸ್ತ್ರೀಯ ಹೆಸರು:ದಿಲ್ಲೇನಿಯ ಇಂಡಿಕ( ).'ಗನಗಲು','ದೊಡ್ಡ ಕರಂಬಳ'ಕನ್ನಡದ ಇತರ ಹೆಸರುಗಳು. == ಸಸ್ಯದ ಗುಣಲಕ್ಷಣಗಳು == ಇದು ಮದ್ಯಮ ಪ್ರಮಾಣದ,ದುಂಡುಹಂದರದ,ಅಂದವಾದ ಹಸಿರೆಲೆಗಳ ನಿತ್ಯಹರಿದ್ವರ್ಣದ ಮರ.ದೊಡ್ಡಗಾತ್ರದ ಪರಿಮಳಯುಕ್ತ ಬಿಳಿಯ ಹೂವುಗಳು ಇವೆ.ದಾರುವು ಎಳೆಕಂದು ಬಣ್ಣದ್ದಾಗಿದ್ದು,ನಯವಾಗಿರುತ್ತದೆ. == ಉಪಯೋಗ == ಅಲಂಕಾರಕ್ಕೆ ಬೆಳೆಸಬಹುದು.ದಾರುವು ಬಂದೂಕಿನ ಹಿಡಿ ಮುಂತಾಗಿ ನಯವಾದ ಮರಗೆಲಸಕ್ಕೆ ಉಪಯುಕ್ತ. == ಆಧಾರ ಗ್ರಂಥಗಳು == ೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ