ಬೆನಿನ್, ಅಧಿಕೃತವಾಗಿ ಬೆನಿನ್ ಗಣರಾಜ್ಯ, ಪಶ್ಚಿಮ ಆಫ್ರಿಕಾದ ಒಂದು ದೇಶ. ಇದು ೧೯೭೫ರವರೆಗೆ ದಹೊಮೆ ಎಂದು ಕರೆಯಲಾಗುತ್ತಿತ್ತು. ಇದರ ಪಶ್ಚಿಮಕ್ಕೆ ಟೊಗೊ, ಪೂರ್ವಕ್ಕೆ ನೈಜೀರಿಯ, ಉತ್ತರಕ್ಕೆ ಬುರ್ಕೀನ ಫಾಸೊ ಮತ್ತು ನೈಜರ್ ದೇಶಗಳಿವೆ. ಇದರ ರಾಜಧಾನಿ ಪೋರ್ಟೊ ನೊವೊ ಆದರೆ ಸರ್ಕಾರದ ಕೇಂದ್ರ ಕೊಟೊನೌ ಆಗಿದೆ.