ಬೆಬಿಂಕಾ ಒಂದು ಬಗೆಯ ಪುಡಿಂಗ್ ಆಗಿದೆ ಮತ್ತು ಒಂದು ಸಾಂಪ್ರದಾಯಿಕ ಇಂಡೊ-ಪೋರ್ಚುಗೀಸ್ ಡಿಜ಼ರ್ಟ್ ಆಗಿದೆ. ಸಾಂಪ್ರದಾಯಿಕ ಬೆಬಿಂಕಾ ಆರು ಪದರಗಳನ್ನು ಹೊಂದಿರುತ್ತದೆ. ಘಟಕಾಂಶಗಳಲ್ಲಿ ಮೈದಾ ಹಿಟ್ಟು, ಸಕ್ಕರೆ, ತುಪ್ಪ, ಮೊಟ್ಟೆಯ ಹಳದಿ ಭಾಗ ಮತ್ತು ತೆಂಗಿನ ಹಾಲು ಸೇರಿವೆ. ಇದು ಗೋವಾದಲ್ಲಿ ಒಂದು ಸಾಂಪ್ರದಾಯಿಕ ಸಿಹಿ ತಿನಿಸಾಗಿದೆ, ಮತ್ತು ವಿಶಿಷ್ಟವಾಗಿ ಕ್ರಿಸ್ಮಸ್ ಹಬ್ಬದಲ್ಲಿ ಜನಪ್ರಿಯವಾಗಿದೆ. ಇದು ಸುಲಭವಾಗಿ ಲಭ್ಯವಿದ್ದು ಒಯ್ಯಲು ಮತ್ತು ದೀರ್ಘ ಸಮಯದವರೆಗೆ ಸಂರಕ್ಷಿಸಿಡಲು ಸುಲಭವಾಗಿದೆ ಅಥವಾ ತಾಜಾ ಆಗಿ ತಿನ್ನಲ್ಪಡಬಹುದು. ಬೆಬಿಂಕಾವನ್ನು ವಾಯವ್ಯ ಪೆಸಿಫಿಕ್ ಮಹಾಸಾಗರದಲ್ಲಿನ ಒಂದು ಚಂಡಮಾರುತದ ಹೆಸರಾಗಿ ಕೂಡ ಅಳವಡಿಸಿಕೊಳ್ಳಲಾಯಿತು. ಇದನ್ನು ಪೋರ್ಚುಗಲ್ ಮತ್ತು ಮೊಜಾಂಬಿಕ್‍ನಲ್ಲಿ ಕೂಡ ತಯಾರಿಸಲಾಗುತ್ತದೆ. ಆದರೆ ಸಾಂಪ್ರದಾಯಿಕವಾಗಿ ಇದು ಗೋವಾದ ಪದರಗಳಿರುವ ಕೇಕ ಆಗಿದೆ. == ಉಲ್ಲೇಖಗಳು ==