ಬೆಳ್ತಂಗಡಿ (ಉಚ್ಚಾರಣೆːlisten :ಬೆಳ್ತಂಗಡಿ) ಇದು ದಕ್ಷಿಣ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ.ಇದು ಜಿಲ್ಲಾ ಕೇಂದ್ರ ಮಂಗಳೂರಿನಿಂದಸುಮಾರು ೬೦ ಕಿ.ಮೀ ಪೂರ್ವಕ್ಕೆ ಇದೆ.ಇದನ್ನು ತುಳುಭಾಷೆಯಲ್ಲಿ "ಬೋಲ್ತೇರ್” ಎಂದು ಕರೆಯುತ್ತಾರೆ. ಉತ್ತರ, ಈಶಾನ್ಯ ಮತ್ತು ಪೂರ್ವದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಆಗ್ನೇಯದಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಪಶ್ಚಿಮದಲ್ಲಿ ಕಾರ್ಕಳ ಮತ್ತು ಬಂಟ್ವಾಳ ತಾಲ್ಲುಕುಗಳೂ ದಕ್ಷಿಣದಲ್ಲಿ ಪುತ್ತೂರು ತಾಲ್ಲೂಕು ಸುತ್ತುವರೆದಿದೆ. 1954ರಲ್ಲಿ ರೂಪಿತವಾದ ಈ ತಾಲ್ಲೂಕಿನ ವೇಣೂರು, ಬೆಳ್ತಂಗಡಿ ಮತ್ತು ಕೊಕ್ಕಡ ಇವು ಮೂರು ಹೋಬಳಿಗಳೂ 84 ಗ್ರಾಮಗಳೂ ಇವೆ. ಒಟ್ಟು ವಿಸ್ತೀರ್ಣ 1,375 ಚಕಿಮೀ. ಜನಸಂಖ್ಯೆ 2,46,443 (2001) == ಇತಿಹಾಸ == ಈ ಸ್ಥಳಕ್ಕೆ ಇದರದೇ ಆದ ಇತಿಹಾಸವಿಲ್ಲದಿದ್ದರೂ ಸಮೀಪದಲ್ಲಿರುವ ಬಂಗಾಡಿಯಲ್ಲಿ ಆಳಿದ ಬಂಗ ಅರಸರು ಕಟ್ಟಿಸಿದ ಕೋಟೆಯ ಅವಶೇಷ,ಶಿಲೆಯಲ್ಲಿ ಕಟ್ಟಲಾದ ಸೋಮನಾಥ ದೇವಸ್ಥಾನ,ಒಂದು ಬಸದಿ ಇದೆ. ಸುಮಾರು ೬ ಕಿ.ಮೀ ದೂರದಲ್ಲಿರುವ ನಡ ಎಂಬಲ್ಲಿರುವ ದೊಡ್ಡ ಗುಡ್ಡದ ಮೇಲೆ ನರಸಿಂಹಗಡ ಎಂಬ ಕೋಟೆ ಇದೆ. ಇದನ್ನು ೧೭೯೪ರಲ್ಲಿ ಟಿಪ್ಪು ಸುಲ್ತಾನ ಪುನರ್‍ನಿರ್ಮಾಣ ಮಾಡಿ ತನ್ನ ತಾಯಿಯ ಹೆಸರಾದ ಜಮಾಲಾಬಿಯ ಹೆಸರಿನಿಂದ ಕರೆಯಲಾರಂಬಿಸಿದ ಬಳಿಕ ಅದು ಜಮಲಾಬಾದ್ ಎಂದಾಗಿದೆ. ಇಲ್ಲಿಯೇ ಬಳಿಯಲ್ಲಿ ಪೆರ್ಮಾಣು ಎಂಬಲ್ಲಿ ಜೈನ ಬಸದಿ ಇದೆ.ಮೊದಲು ಇದು ಹೋಬಳಿ ಕೇಂದ್ರವಾಗಿತ್ತು. ೧೯೫೪ರಲ್ಲಿ ಇದನ್ನು ತಾಲೂಕು ಎಂದು ಘೋಷಿಸಲಾಯಿತು. == ಭೌಗೋಳಿಕ == ಬೆಳ್ತಂಗಡಿಯು 13.9833° 75.3°﻿ / 13.9833; 75.3. ಯಲ್ಲಿದ್ದು ಸರಾಸರಿ ಸಮುದ್ರ ಮಟ್ಟದಿಂದ 685 ಮೀಟರ್ (2247 ಅಡಿ)ಎತ್ತರದಲ್ಲಿದೆ. == ಬೆಳ್ತಂಗಡಿ ತಾಲೂಕಿನಲ್ಲಿರುವ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳು == ಬೆಳ್ತಂಗಡಿಯಿಂದ 12 ಕಿಮೀ ದೂರದಲ್ಲಿರುವ ಆಲ್ದಂಗಡಿಯಲ್ಲಿ ರಾಣಿ ಮದರಕ್ಕನ ಅರಮನೆ, ಅರ್ಧನಾರೀಶ್ವರ ಮತ್ತು ಸೋಮನಾಥ ದೇವಾಲಯಗಳು, ಒಂದು ಬಸದಿ ಇವೆ. ಬೆಳ್ತಂಗಡಿಗೆ 22 ಕಿಮೀ ದೂರದಲ್ಲಿರುವ ಬೈಲಂಗಡಿ ಎಂಬ ಸ್ಥಳದಲ್ಲಿ ರಾಣಿ ಸೋಮಲದೇವಿಯ ಮತ್ತು ಅವಳ ಗಂಡನ ಸಮಾಧಿಗಳಿವೆ. ಒಂದು ಬಸದಿಯೂ ಇದೆ. ಬೆಳ್ತಂಗಡಿಯ ಈಶಾನ್ಯಕ್ಕೆ 12 ಕಿಮೀ ದೂರದಲ್ಲಿರುವ ಬಂಗವಾಡಿ ಎಂಬುದು ಬಂಗರಸರ ರಾಜಧಾನಿಯಾಗಿತ್ತು. ಚಾರ್ಮಾಡಿ ಗ್ರಾಮ ಬೆಳ್ತಂಗಡಿಯ ಪೂರ್ವಕ್ಕೆ 19 ಕಿಮೀ ದೂರದಲ್ಲಿದೆ. ಉಜಿರೆ ಎಂಬಲ್ಲಿ ಕಾಲೇಜು, ಹೈಸ್ಕೂಲು, ಗುರುಕುಲಗಳಿವೆ. ಇದು ಧರ್ಮಸ್ಥಳದ ಬಾಗಿಲಿನಂತಿದೆ. ಧÀರ್ಮಸ್ಥಳ ಬೆಳ್ತಂಗಡಿಯಿಂದ 16 ಕಿಮೀ ದೂರದಲ್ಲಿರುವ ಒಂದು ಪುಣ್ಯಕ್ಷೇತ್ರ. ಇಲ್ಲಿ ಮಂಜುನಾಥ ದೇವಾಲಯವಿದೆ.ಬೆಳ್ತಂಗಡಿಯಿಂದ 25 ಕಿಮೀ ದೂರದಲ್ಲಿ ಒಂದು ಪುಣ್ಯಕ್ಷೇತ್ರ. ಶ್ರೀ ಕ್ಷೇತ್ರ ಕಾಟಾಜೆ. ಇಲ್ಲಿ ಅಣಿಯೂರು ಹೊಳೆ ಬದಿಯಲ್ಲಿ ದುರ್ಗಾಪರಮೇಶ್ವರಿ ದೇವಿಯ ಕ್ಷೇತ್ರ. ಬೆಳ್ತಂಗಡಿಯಿಂದ ಸುಮಾರು 5 ಕಿಮೀ ದೂರದಲ್ಲಿರುವ ಗಡಾಯಿಕಲ್ಲು ಎಂಬ ಕೋಟೆ ಇರುವ ಒಂದು ದೊಡ್ಡ ಕಲ್ಲುಬಂಡೆ ಇದೆ. ಈ ಸೀಮೆಯಲ್ಲಿ ಆಳಿದ ಬಲ್ಲಾಳರಾಜರಲ್ಲಿ ಒಬ್ಬನಾದ ನರಸಿಂಹವರ್ಮ ಈ ಬೆಟ್ಟದಲ್ಲಿ ಒಂದು ಕೋಟೆಯನ್ನು ಕಟ್ಟಿಸಿ ಅದರ ಸುತ್ತಲೂ ಒಂದು ಪಟ್ಟಣವನ್ನು ನಿರ್ಮಿಸಿದ. ಶ್ರೀರಂಗಪಟ್ಟಣದ ಯುದ್ಧದವರೆಗೆ ಒಳ್ಳೆಯ ಸ್ಥಿತಿಯಲ್ಲಿದ್ದ ಈ ಪಟ್ಟಣಕ್ಕೆ ನರಸಿಂಹಗಡವೆಂದು ಹೆಸರಾಯಿತು. ಟಿಪ್ಪುಸುಲ್ತಾನ ಕೋಟೆಯನ್ನು ಬಲಪಡಿಸಿ ತನ್ನ ತಾಯಿಯ ನೆನಪಾಗಿ ಈ ಸ್ಥಳಕ್ಕೆ ಜಮಾಲಾಬಾದ್ ಎಂಬ ಹೆಸರಿಟ್ಟ. ಬೆಳ್ತಂಗಡಿ ತಾಲ್ಲೂಕಿನ ಇನ್ನೊಂದು ಮುಖ್ಯಸ್ಥಳ ವೇಣೂರು (ಬೆಳ್ತಂಗಡಿಯಿಂದ 19 ಕಿಮೀ) ಒಂದು ಜೈನಕ್ಷೇತ್ರ. ಗುರುಪುರ (ಫಲ್ಗುಣ) ಹೊಳೆಯ ದಡದಲ್ಲಿರುವ ಈ ಪಟ್ಟಣ ಹಿಂದೆ ಜೈನ ಅರಸರ ರಾಜಧಾನಿಯಾಗಿತ್ತು. ಇಲ್ಲಿ ಸುಮಾರು 11 ಮಿ ಎತ್ತರದ ಗೋಮಟ ವಿಗ್ರಹವಿದೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನ, ಧರ್ಮಸ್ಥಳ ಶ್ರೀ ರಾಮ ದೇವಾಲಯ, ಕನ್ಯಾಡಿ 2020-09-22 ವೇಬ್ಯಾಕ್ ಮೆಷಿನ್ ನಲ್ಲಿ. ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ, ಸೌತಡ್ಕ. [೧] ಚಾರ್ಮಾಡಿ ಘಾಟಿ ಶ್ರೀ ಉಧ್ಭಾವಾ ರಾಧ್ರನಥೇಶ್ವರ ದೇವಸ್ಥಾನ, ನಡುಬೋಟ್ಟು, ಮದಂತ್ಯರ್ ಶಿಶಿಲೇಶ್ವರ ದೇವಾಲಯ, ಶಿಶಿಲ. ಶ್ರೀ ಜನಾರ್ಧನ ದೇವಸ್ಥಾನ, ಉಜಿರೆ ಸೇಂಟ್. ಆಂಟನಿ ಚರ್ಚ್, ಉಜಿರೆ ಚಂದಕುರ್ ದೇವಾಲಯ, ಬೆಳ್ತಂಗಡಿ ಕುತ್ಯಾರ ಸೋಮನಾಥೇಶ್ವರ ದೇವಸ್ಥಾನ, ಬೆಳ್ತಂಗಡಿ ಶ್ರೀ ಮಹಾದೇವಿ ಮಾರಿಗುಡಿ, ಬೆಳ್ತಂಗಡಿ ಶ್ರೀ ಅನಂತೇಶ್ವರ ದೇವಸ್ಥಾನ, ಬಲ್ಲಮಾಂಜ, ಬೆಳ್ತಂಗಡಿ ಶ್ರೀ ಒಡಿಲು ಮಹಾಲಿಂಗೇಶ್ವರ ದೇವಸ್ಥಾನ, ಒಡಿಲು, ಬೆಳ್ತಂಗಡಿ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ದಿಗಂಬರ ಜೈನ ದೇವಾಲಯ, ಬೆಳ್ತಂಗಡಿ ಮೋಸ್ಟ್ ಪ್ಯುರ್ ರಿಡೀಮರ್ ಚರ್ಚ್ (ಬೆಳ್ತಂಗಡಿ), ಸೇಂಟ್ ಲಾರೆನ್ಸ್ ಸಿರೋ ಮಲಬಾರ್ ಕ್ಯಾಥೋಲಿಕ್ ಕ್ಯಾಥೆಡ್ರಲ್ ಚರ್ಚ್ 2017-09-01 ವೇಬ್ಯಾಕ್ ಮೆಷಿನ್ ನಲ್ಲಿ., ಬೆಳ್ತಂಗಡಿ ಜಮಾಲಾಬಾದ್ ಕೋಟೆ, ಮಂಜೊತ್ತಿ, ಬೆಳ್ತಂಗಡಿ ಚರ್ಚ್ ಆಫ್ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್, ಮದಂತ್-ಯರ್ ಕಾಜುರ್ ದರ್ಗಾ ಶರೀಫ್, ಮಿಥಾಬಾಗಿಲು, ಬೆಳ್ತಂಗಡಿ ಹಜರತ್ ಹಯತುಲ್ ಜಮ್ಮಾ ಮಸೀದಿ, ಗುರುವಾಯಣಕೆರೆ ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನ, ಮುಂಡಾಜೆ ಗುಂಡಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ, ಮುಂಡಾಜೆ ಸುರ್ಯ ಸದಾಶಿವರುದ್ರ ದೇವಾಲಯ,ಸುರ್ಯ ಮೊಹಿದ್ದೀನ್ ಜುಮಾ ಮಸೀದಿ. ತಂಗಾಯಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ರಾಮ ಮಂದಿರ ಮಹಾಮಾಯಿ ಮಾರಿ ಗುಡಿ ಸೇಂಟ್ ಜಾರ್ಜ್ ಚರ್ಚ್ ನರಸಿಂಹ ಘಡ ಬಂಡಾಜೆ ಅಬ್ಬಿ ಜಲಪಾತ ದಿಡುಪೆ ಜಲಪಾತ ಎರಮಾಯಿ ಜಲಪಾತ ಎತ್ತಿನ ಭುಜ ಬೆಟ್ಟ ಶಿಶಿಲ ಬೆಟ್ಟ ವೇಣೂರು ಆರಂಬೋಡಿ ಆದಿನಾಥ ಸ್ವಾಮಿ ಬಸದಿ ನೆರಿಯ ಶ್ರೀ ಕ್ಷೇತ್ರ ಕಾಟಾಜೆ ದುರ್ಗಾಪರಮೇಶ್ವರಿ ದೇವಸ್ಥಾನ. ಅಣಿಯುರು ನೆರಿಯ == ಜನಸಂಖ್ಯೆ ಮತ್ತು ವಿಸ್ತಾರ == ೨೦೧೧ರ ಜನಗಣತಿಯಂತೆ ಇಲ್ಲಿಯ ಜನಸಂಖ್ಯೆ ೭,೬೩೫.ತಾಲೂಕು ಪಂಚಾಯತಿಯ ೧೧ ವಾರ್ಡುಗಳಿದ್ದು ೮.೮೭ಚದರ ಕಿ.ಮೀ ವಿಸ್ತಾರವಿದೆ. == ವಾಣಿಜ್ಯ == ಇದು ಕೃಷಿ ಉತ್ಪನ್ನಗಳ ಒಂದು ಪ್ರಮುಖ ಮಾರುಕಟ್ಟೆ.ಮುಖ್ಯ ಉತ್ಪನ್ನಗಳು ಅಡಿಕೆ,ಕೊಕ್ಕೊ,ತೆಂಗು ಮತ್ತು ರಬ್ಬರು,ಭತ್ತ. == ತಾಲೂಕು == ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ವಿಸ್ತಾರವಾದ ತಾಲೂಕು. ಚಾರ್ಮಾಡಿಯಿಂದ ಪೂಂಜಾಲಕಟ್ಟೆಯವರೆಗೂ, ವೇಣೂರು ನಿಂದ ಉಪ್ಪಿನಂಗಡಿಯವರೆಗೂ ಬೆಳ್ತಂಗಡಿ ತಾಲೂಕು ಹರಡಿದೆ.ಇದರ ಪೂರ್ವ-ಉತ್ತರ ಭಾಗದಲ್ಲಿ ರಮಣೀಯವಾದ ಪಶ್ಚಿಮ ಘಟ್ಟವಿದೆ. ಈ ತಾಲೂಕಿನಲ್ಲಿ ಪ್ರಸಿದ್ದ ಯಾತ್ರಾಸ್ಥಳ ಧರ್ಮಸ್ಥಳ,ಶಿಕ್ಷಣ ಕೇಂದ್ರವಾದ ಉಜಿರೆ,ಪ್ರೇಕ್ಷಣೀಯ ಸ್ಥಳವಾದ ಜಮಲಾಬಾದ್ ಕೋಟೆಯೂ ಇದೆ. ಇದಲ್ಲದೆ ಬೆಳ್ತಂಗಡಿಯಲ್ಲಿ ಹಲವಾರು ಧಾರ್ಮಿಕ ಕ್ಷೇತ್ರಗಳೂ ಇವೆ. ಮುಖ್ಯವಾಗಿ ಕಾಜೂರಿನ ಮಸೀದಿ, ಬೆಳ್ತಂಗಡಿ ಚರ್ಚ್,ಮಡಂತ್ಯಾರ್ ಚರ್ಚ್, ನಡಿಬೆಟ್ಟು ಶ್ರೀ ರೌಧ್ರಾನಾಥೇಶ್ವರ ದೇವಸ್ಥಾನ, ಪಾರೆಂಕಿ ಶ್ರೀ ಮಹೀಷಮರ್ಧಿನಿ ದೇವಸ್ಥಾನ, ಕುತ್ಯಾರು ಸೋಮನಾಥೇಶ್ವರ ದೇವಸ್ಥಾನ, ಸುರ್ಯ ಗ್ರಾಮದ ಸದಾಶಿವರುದ್ರ ದೇವಸ್ಥಾನ, ನೇತ್ರಾವತಿ ನದಿ, ನೆರಿಯ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಾಟಾಜೆ,ಇತ್ಯಾದಿ. ಬೆಳ್ತಂಗಡಿಯಲ್ಲಿ ಎರಡು ಎಂಜಿನಿಯರಿಂಗ್ ಕಾಲೇಜುಗಳು ಸ್ಥಾಪನೆಯಾಗಿವೆ . ಸುದ್ದಿ ಬಿಡುಗಡೆ ಹಾಗೂ ಜೈ ಕನ್ನಡಮ್ಮ ಇಲ್ಲಿಯ ಪ್ರಾದೇಶಿಕ ಪತ್ರಿಕೆಗಳು. == ಉಲ್ಲೇಖಗಳು ==