ಬೇರಿಯಮ್ ಮೃದುವಾದ,ಭಾರವಾದ,ಬೆಳ್ಳಿಯ ಬಣ್ಣದ ಮೂಲಧಾತು ಲೋಹ.ಇದು ಬಹಳ ಸುಲಭವಾಗಿ ಬೇರೆ ವಸ್ತುಗಳೊಂದಿಗೆ ರಾಸಾಯನಿಕ ಕ್ರಿಯೆಗೆ ಒಳಗಾಗುವುದರಿಂದ ಶುದ್ಧ ರೂಪದಲ್ಲಿ ದೊರೆಯುವುದಿಲ್ಲ.ಇದನ್ನು ಶುದ್ಧರೂಪದಲ್ಲಿ ಪ್ಯಾರಾಫಿನ್ ನ ತಳಭಾಗದಲ್ಲಿ ಶೇಖರಿಸುತ್ತಾರೆ.ಇದು ಪ್ರಕೃತಿಯಲ್ಲಿ ಬೇರಿಯಮ್ ಸಲ್ಫೇಟ್ ನ ರೂಪದಲ್ಲಿ ದೊರೆಯುತ್ತದೆ.ಇದನ್ನು ೧೮೦೮ರಲ್ಲಿ ಇಂಗ್ಲೆಂಡ್ ನ ಸರ್ ಹಂಫ್ರಿ ಡೇವಿ ಯವರು ಬೇರ್ಪಡಿಸಿದರು.ಇದನ್ನು ಶುದ್ಧರೂಪದಲ್ಲಿ ಉಪಯೋಗಿಸುತ್ತಿಲ್ಲವಾದರೂ, ಸಂಯುಕ್ತ ವಸ್ತುವಾಗಿ ಗಾಜಿನ ತಯಾರಿಕೆಯಲ್ಲಿ,ಅಸ್ಪತ್ರೆಗಳಲ್ಲಿ ರೋಗ ಪತ್ತೆಗೆ, ಪ್ರಯೋಗಾಲಯಗಳಲ್ಲಿ ವ್ಯಾಪಕವಾಗಿ ಉಪಯೋಗದಲ್ಲಿದೆ.ಇದು ಒಂದು ವಿಷ ವಸ್ತು.