ಬೈಜ್‍ನಾಥ್ ಭಾರತದ ಉತ್ತರಾಖಂಡ ರಾಜ್ಯದ ಕುಮಾವ್ಞೂ ವಿಭಾಗದ ಬಾಗೇಶ್ವರ್ ಜಿಲ್ಲೆಯ ಗೋಮತಿ ನದಿಯ ದಡದಲ್ಲಿರುವ ಒಂದು ಸಣ್ಣ ಪಟ್ಟಣ. ಈ ಸ್ಥಳವು ತನ್ನ ಪ್ರಾಚೀನ ದೇವಾಲಯಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ. ಇವುಗಳನ್ನು ಭಾರತದ ಪುರಾತತ್ವ ಸರ್ವೇಕ್ಷಣೆಯು ರಾಷ್ಟ್ರೀಯ ಮಹತ್ವದ ಸ್ಮಾರಕಗಳಾಗಿ ಗುರುತಿಸಿದೆ. ಭಾರತ ಸರ್ಕಾರದ ಸ್ವದೇಶ ದರ್ಶನ ಯೋಜನೆಯಡಿ ಕುಮಾವೂನ್‌ನಲ್ಲಿರುವ 'ಶಿವ ಹೆರಿಟೇಜ್ ಸರ್ಕ್ಯೂಟ್'ನಿಂದ ಜೋಡಿಸಲ್ಪಡುವ ನಾಲ್ಕು ಸ್ಥಳಗಳಲ್ಲಿ ಬೈಜ್‍ನಾಥ್ ಆಯ್ಕೆಯಾಗಿದೆ. ಆಗ ಕಾರ್ತಿಕೇಯಪುರ ಎಂದು ಕರೆಯಲ್ಪಡುತ್ತಿದ್ದ ಬೈಜ್‍ನಾಥ್ ಕತ್ಯೂರಿ ರಾಜರ ಪೀಠವಾಗಿತ್ತು. ಸುಮಾರು ಕ್ರಿ.ಶ 1150 ರಲ್ಲಿ ಕುಮಾವ್ಞೂದ ಕತ್ಯೂರಿ ರಾಜನು ನಿರ್ಮಿಸಿದನೆಂದು ಹೇಳಲಾಗುವ ನದಿಯ ದಡದಲ್ಲಿ ಪ್ರಸಿದ್ಧ ಬೈಜ್‍ನಾಥ್ (ಶಿವ) ದೇವಾಲಯವಿದೆ. ಇದು 12 ಮತ್ತು 13 ನೇ ಶತಮಾನದಲ್ಲಿ ಉತ್ತರಾಂಚಲವನ್ನು ಆಳಿದ ಕತ್ಯೂರಿ ರಾಜವಂಶದ ರಾಜಧಾನಿಯಾಗಿತ್ತು. ಹಿಂದೂ ಪುರಾಣಗಳ ಪ್ರಕಾರ, ಶಿವ ಮತ್ತು ಪಾರ್ವತಿಯರು ಗೋಮತಿ ಮತ್ತು ಗರೂರ್ ಗಂಗಾದ ಸಂಗಮದಲ್ಲಿ ವಿವಾಹವಾದರು. ಹಾಗಾಗಿ ಇದು ಮಹತ್ವ ಹೊಂದಿದೆ. ಈ ದೇವಾಲಯ ಸಂಕೀರ್ಣದಲ್ಲಿ ಶಿವ, ಗಣೇಶ, ಪಾರ್ವತಿ, ಚಂಡಿಕಾ, ಕುಬೇರ, ಸೂರ್ಯ ಮತ್ತು ಬ್ರಹ್ಮನ ವಿಗ್ರಹಗಳಿವೆ. ಈ ದೇವಾಲಯಗಳನ್ನು ಕಲ್ಲಿನಲ್ಲಿ ನಿರ್ಮಿಸಲಾಗಿದೆ. ಪಾರ್ವತಿಯ ಸುಂದರವಾದ ವಿಗ್ರಹವನ್ನು ಹೊಂದಿರುವ ಮುಖ್ಯ ದೇವಾಲಯವನ್ನು ಕಪ್ಪು ಕಲ್ಲಿನಲ್ಲಿ ಕೆತ್ತಲಾಗಿದೆ. == ಛಾಯಾಂಕಣ == == ಉಲ್ಲೇಖಗಳು == == ಹೊರಗಿನ ಕೊಂಡಿಗಳು ==