ಬೊಗಳಾಟವು ಅತ್ಯಂತ ಸಾಮಾನ್ಯವಾಗಿ ನಾಯಿಗಳು ಮಾಡುವ ಶಬ್ದ. ನಾಯಿಗಳ ಬೊಗಳಾಟವು ತೋಳಗಳ ಬೊಗಳಾಟದಿಂದ ಭಿನ್ನವಾಗಿದೆ. ತೋಳಗಳ ಬೊಗಳಾಟವು ತೋಳಗಳ ಎಲ್ಲ ಧ್ವನಿಗಳ ಕೇವಲ ಶೇಕಡ ೨.೩ ರಷ್ಟನ್ನು ಪ್ರತಿನಿಧಿಸುತ್ತದೆ ಮತ್ತು ಇವನ್ನು ಅಪರೂಪದ ಘಟನೆಗಳೆಂದು ವರ್ಣಿಸಲಾಗುತ್ತದೆ. ಷಾಸ್‍ಬರ್ಗರ್ ಪ್ರಕಾರ, ತೋಳಗಳು ಕೇವಲ ಎಚ್ಚರಿಕೆಯಾಗಿ, ರಕ್ಷಣೆಗಾಗಿ, ಮತ್ತು ಪ್ರತಿಭಟನೆಗಾಗಿ ಬೊಗಳುತ್ತವೆ. ತದ್ವಿರುದ್ಧವಾಗಿ, ನಾಯಿಗಳು ವ್ಯಾಪಕ ಶ್ರೇಣಿಯ ಸಾಮಾಜಿಕ ಪರಿಸ್ಥಿತಿಗಳಲ್ಲಿ ಬೊಗಳುತ್ತವೆ. ನಾಯಿಗಳಲ್ಲಿನ ಶಬ್ದಸಂಬಂಧಿ ಸಂವಹನವು ಅತಿವೃದ್ಧಿ ಗುಣವುಳ್ಳದ್ದು ಎಂದು ವಿವರಿಸಲಾಗಿದೆ. ಹೆಚ್ಚುವರಿಯಾಗಿ, ತೋಳಗಳ ಬೊಗಳಾಟ ಲಘು ಹಾಗೂ ಪ್ರತ್ಯೇಕವಾಗಿರುವ ಪ್ರವೃತ್ತಿ ಹೊಂದಿರುತ್ತದೆ. ಆದರೆ, ವಯಸ್ಕ ನಾಯಿಗಳು ದೀರ್ಘ, ಲಯಬದ್ಧ ವೃತ್ತಗಳಲ್ಲಿ ಬೊಗಳುತ್ತವೆ. ನಾಯಿಗಳು ಗಂಟೆಗಟ್ಟಲೆ ಬೊಗಳುವುದು ತಿಳಿದುಬಂದಿದೆ. == ಉಲ್ಲೇಖಗಳು ==