ಬೊಲೊಮೀಟರ್ ವಾಹಕದ ತಾಪ ಬದಲಾವಣೆಯೊಂದಿಗೆ ಅದರ ವಿದ್ಯುತ್‌ರೋಧವೂ ಬದಲಾಗುತ್ತದೆ ಎಂಬ ತತ್ತ್ವಾಧಾರಿತ ಉಪಕರಣ. ಇದು ಉಷ್ಣಾಂಶ ಅವಲಂಬಿತ ವಿದ್ಯುತ್ ರೋಧವನ್ನು ಹೊಂದಿರುವ ವಸ್ತುವಿನ ಮೂಲಕ ವಿಕಿರಣ ಉಷ್ಣವನ್ನು ಅಳೆಯುತ್ತದೆ. == ರಚನೆ, ಕಾರ್ಯ == ವೀಟ್ಸ್‌ಟನ್ ಬ್ರಿಡ್ಜ್ ಎಂಬುದು ನಾಲ್ಕು ರೋಧಗಳುಳ್ಳ ವ್ಯವಸ್ಥೆ. ಇದರಲ್ಲಿ ಎರಡು ಪ್ಲಾಟಿನಮ್ ಪಟ್ಟಿಗಳು ಎರಡು ರೋಧಗಳ ಪಾತ್ರ ನಿರ್ವಹಿಸುತ್ತವೆ. ಇವುಗಳ ಪೈಕಿ ಒಂದಕ್ಕೆ ಹಣತೆ ಕಪ್ಪು ಲೇಪಿಸಿದರೆ ಬೊಲೊಮೀಟರ್ ಸಿದ್ಧ. ಹಣತೆ ಕಪ್ಪು ಲೇಪಿಸಿದ ಪಟ್ಟಿಯ ಮೇಲೆ ವಿಕಿರಣ ಬಿದ್ದು ಬಿಸಿಯಾದಾಗ ವಿದ್ಯುತ್ ರೋಧವೂ ಬದಲಾಗುತ್ತದೆ. ಗಾಲ್ವನೊಮೀಟರ್ ನೆರವಿನಿಂದ ರೋಧದಲ್ಲಿ ಆದ ಬದಲಾವಣೆ ಅಳೆಯಬಹುದು. == ಉಲ್ಲೇಖಗಳು ==