ಬೋಟ್ಸ್ವಾನ, ಅಧಿಕೃತವಾಗಿ ಬೋಟ್ಸ್ವಾನ ಗಣರಾಜ್ಯ ( ), ದಕ್ಷಿಣ ಆಫ್ರಿಕಾ ಪ್ರದೇಶದಲ್ಲಿರುವ ಒಂದು ಭೂಆವೃತ ದೇಶ. ಮುಂಚೆ ಬೆಚುಆನಲ್ಯಾಂಡ್ ಎಂದು ಯುನೈಟೆಡ್ ಕಿಂಗ್ಡಮ್ನ ವಸಾಹತು ಆಗಿದ್ದ ಈ ಪ್ರದೇಶ ಸೆಪ್ಟೆಂಬರ್ ೩೦, ೧೯೬೬ರಲ್ಲಿ ಸ್ವಾತಂತ್ರ್ಯ ಪಡೆದ ಮೇಲೆ ಪ್ರಸಕ್ತ ಹೆಸರನ್ನು ಪಡೆಯಿತು. ಇದರ ದಕ್ಷಿಣಕ್ಕೆ ದಕ್ಷಿಣ ಆಫ್ರಿಕಾ, ಪಶ್ಚಿಮಕ್ಕೆ ನಮೀಬಿಯ, ಉತ್ತರಕ್ಕೆ ಜಾಂಬಿಯ ಮತ್ತು ಈಶಾನ್ಯಕ್ಕೆ ಜಿಂಬಾಬ್ವೆ ದೇಶಗಳಿವೆ. ಇದರ ಆರ್ಥಿಕ ವ್ಯವಸ್ಥೆ ದಕ್ಷಿಣ ಅಫ್ರಿಕಾದ ವ್ಯವಸ್ಥೆಯನ್ನು ಅವಲಂಬಿಸುತ್ತದೆ. ಗಣಿಗಾರಿಗೆ (ಹೆಚ್ಚಾಗಿ ವಜ್ರಗಳ), ಪ್ರವಾಸೋದ್ಯಮ ಮತ್ತು ಹೈನುಗಾರಿಕೆ ಇಲ್ಲಿನ ಮುಖ್ಯ ಕಸುಬುಗಳು.