ಭಕ್ತಿಯೋಗ ಹಿಂದೂಧರ್ಮದಲ್ಲಿ ಹೇಳಲ್ಪಟ್ಟ ನಾಲ್ಕು ಯೋಗಗಳಲ್ಲಿ ಒಂದು. ಭಕ್ತಿ ಎಂದರೆ ಪ್ರೀತಿ,ಸೇವೆ ಎಂದು ಅರ್ಥ. ದೇವರನ್ನು ಪ್ರೀತಿಸುತ್ತಾ, ಜೀವನದ ಸಕಲ ಕೆಲಸ ಕಾರ್ಯಗಳನ್ನು ದೇವರ ಸೇವೆ ಎಂದು ನಡೆಸಿ ಕೊನೆಗೆ ಪ್ರೀತಿಯ ಮೂಲಕವೇ ಭಗವಂತನನ್ನು ಸೇರಲು ಇರುವ ಸಾಧನಾ ಮಾರ್ಗವೇ ಭಕ್ತಿಯೋಗ. == ಭಕ್ತಿಯೋಗದ ಸಾಧಕನ ಗುಣಗಳು == == ಭಕ್ತರ ವರ್ಗೀಕರಣ == ಭಕ್ತರನ್ನು ನಾಲ್ಕು ವಿಧವಾಗಿ ವರ್ಗೀಕರಿಸಬಹುದು. ಆರ್ತ ಭಕ್ತರು. ಅರ್ಥಾರ್ಥಿ ಭಕ್ತರು ಜಿಜ್ಞಾಸು ಭಕ್ತರು ಜ್ಞಾನಿ ಭಕ್ತರು. === ಆರ್ತಭಕ್ತರು: === ನರಳುವಿಕೆ,ಕಷ್ಟ,ನಷ್ಟ ಇತ್ಯಾದಿ ಜೀವನದ ನೋವುಗಳಿಗೆ ತುತ್ತಾದವರು ದೇವರನ್ನು ತನ್ನ ಕಷ್ಟ ನಿವಾರಣೆಗಾಗಿ ಮೊರೆಹೋಗುತ್ತಾರೆ.ಈ ವಿಧದ ಭಕ್ತರನ್ನು ಆರ್ತ ಭಕ್ತರು ಎನ್ನಬಹುದು. ಅರ್ಥಾರ್ಥಿ ಭಕ್ತರು: ತನ್ನ ಲೌಕಿಕ ಸುಖಕ್ಕಾಗಿ ವಸ್ತು,ಧನ,ಕನಕಾದಿಗಳನ್ನು ಬಯಸಿ ದೇವರ ಮೊರೆಹೋಗುವವರನ್ನು ಅರ್ಥಾರ್ಥಿ ಭಕ್ತರು ಎನ್ನುತ್ತಾರೆ. ಜಿಜ್ಞಾಸು ಭಕ್ತರು* ಇವರು ಜೀವನದ ಗುರಿಯನ್ನು ಅರಸುವವರು.ಜೀವನದ ಪರಮಗುರಿಯೆಂದು ಭಗವಂತನನ್ನು ಇರಿಸಿಕೊಂಡು ಆತನ ಕುರಿತಾದ ಜ್ಞಾನವನ್ನು ಪಡೆಯಲು ಪ್ರಯತ್ನಿಸುವವರನ್ನು ಜಿಜ್ಞಾಸು ಭಕ್ತರು ಎನ್ನಬಹುದು. *ಜ್ಞಾನಿ ಭಕ್ತರು*: ಇವರೆಲ್ಲರಿಗಿಂತ ಮೇಲಿನವರು.ಜೀವನ-ಜಗತ್ತು,ಭಗವಂತ ಈ ಸಂಬಂಧದ ಸತ್ಯವಾದ ಪರಿಜ್ಞಾನವನ್ನು ಹೊಂದಿ,ಸರ್ವರಲ್ಲೂ,ಸರ್ವವಸ್ತುಗಳಲ್ಲೂ ಭಗವಂತನನ್ನು ಕಾಣುತ್ತಾ,ಯಾವ ಕಾಮನೆಗಳೂ ಇಲ್ಲದೆ ಭಗವಂತನನ್ನು ಪೂಜಿಸುತ್ತಾ ಇರುವವರನ್ನು ಜ್ಞಾನಿ ಭಕ್ತರು ಎಂದು ಹೇಳುತ್ತಾರೆ. == ಭಕ್ತಿಯ ವಿಧಗಳು == == ಬಾಹ್ಯ ಸಂಪರ್ಕಗಳು == : (-) 2006-02-06 ವೇಬ್ಯಾಕ್ ಮೆಷಿನ್ ನಲ್ಲಿ. == ಆಧಾರ ಗ್ರಂಥಗಳು == ೧.ಹಿಂದೂಧರ್ಮದ ಪರಿಚಯ: ಎದುರ್ಕಳ ಶಂಕರನಾರಾಯಣ ಭಟ್