ಭದ್ರಾಕ್ಷಿ ಸಾಮಾನ್ಯವಾಗಿ ವೆಸ್ಟ್ ಇಂಡಿಯನ್ ಎಲ್ಮ್ ಅಥವಾ ಬೇ ಸಿಡಾರ್ ಎಂದು ಕರೆಯಲ್ಪಡುತ್ತದೆ. ಗೌಜುಮಾ ಅಲ್ಮಿಫೋಲಿಯಾ ( .) ಅಥವಾ ಗೌಜುಮಾ ಟೊಮೆಂಟೋಸಾ ( . . .) ಎನ್ನುವುದು ಇದರ ವೈಜ್ಞಾನಿಕ ಹೆಸರು. ಇದು ಸಾಮಾನ್ಯವಾಗಿ ಹುಲ್ಲುಗಾವಲುಗಳು ಮತ್ತು ಕಾಡುಗಳಲ್ಲಿ ಕಂಡುಬರುವ ಮಧ್ಯಮ ಗಾತ್ರದ ಮರವಾಗಿದೆ. ಇದೊಂದು ಹೂಬಿಡುವ ಗಿಡವಾಗಿದ್ದು ೩೦ಮೀ ಎತ್ತರ ಬೆಳೆಯುತ್ತದೆ. ಭದ್ರಾಕ್ಷಿಯು ಮಾಲ್ವೇಸಿಯ ಸಸ್ಯ ಕುಟುಂಬಕ್ಕೆ ಸೇರಿದೆ. = ಸಾಮಾನ್ಯ ಹೆಸರುಗಳು = ಬಂಗಾಳಿ: ನಿಪ್ಪಲ್ತುಂತ್ ಇಂಗ್ಲೀಷ್: ಬಾಸ್ಟರ್ಡ್ ಸಿಡಾರ್, ಬೇ ಸಿಡಾರ್, ವೆಸ್ಟ್ ಇಂಡಿಯನ್ ಎಲ್ಮ್ ಫ್ರೆಂಚ್: ವುಡ್ ಎಲ್ಮ್ ಪೋರ್ಚುಗೀಸ್: ಎಲ್ಮ್, ಸ್ಪ್ಯಾನಿಷ್:ಕ್ಯಾಬಲೊ, ಟೊರೊ = ವಿವರಣೆ = ಈ ಮರದ ಕಾಯಿಗಳು ರುದ್ರಾಕ್ಷಿಯನ್ನು ಹೋಲುವುದರಿಂದ ಮತ್ತು ರುದ್ರಾಕ್ಷಿ ಮರದ ಕುಟುಂಬಕ್ಕೆ ಸೇರದೆ ಇರುವುದರಿಂದ ಭದ್ರಾಕ್ಷಿ ಎಂಬ ಹೆಸರಿನಿಂದ ಕರೆಯುತ್ತಾರೆ. ಭದ್ರಾಕ್ಷಿ ೩೦ ಮೀಟರ್ ಎತ್ತರ ಮತ್ತು ೩೦-೪೦ಸೆಂ.ಮೀ ವ್ಯಾಸದಲ್ಲಿ ಬೆಳೆಯುತ್ತದೆ. ಎಲೆಗಳು ಅಂಡಾಕಾರವಾಗಿರುತ್ತವೆ ಮತ್ತು ಸಾಮಾನ್ಯವಾಗಿ ಒರಟಾದ ರಚನೆಯನ್ನು ಹೊಂದಿರುತ್ತವೆ. ಈ ಜಾತಿಯ ಸಸ್ಯಗಳು ವರ್ಷದ ಉದ್ದಕ್ಕೂ ನಿರ್ದಿಷ್ಟವಾಗಿ ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ ಹೂಗಳನ್ನು ಉತ್ಪಾದಿಸುತ್ತವೆ. ಬೀಜಗಳನ್ನು ನೆಡುವುದಕ್ಕೆ ಮುಂಚಿತವಾಗಿ ಅದನ್ನು ಕುದಿಯುವ ನೀರಿನಲ್ಲಿ ೩೦ ಸೆಕೆಂಡುಗಳ ಕಾಲ ನೆನೆ ಹಾಕುತ್ತಾರೆ. ತಾಜಾ ಬೀಜಗಳನ್ನು ನೆಟ್ಟ ೭-೧೪ ದಿನಗಳ ನಂತರ ಸಸ್ಯ ಬೆಳವಣಿಗೆಯನ್ನು ಆರಂಭಿಸುತ್ತದೆ. = ಉಪಯೋಗ = ಭದ್ರಾಕ್ಷಿ ಮರವನ್ನು ಆಂತರಿಕ ಮರಗೆಲಸ, ಬೆಳಕಿನ ನಿರ್ಮಾಣ, ಪೆಟ್ಟಿಗೆಗಳು, ಕ್ರೇಟುಗಳು, ಶೂ ಕೊಂಬುಗಳು, ಉಪಕರಣದ ಹಿಡಿಕೆಗಳು ಮತ್ತು ಇದ್ದಿಲುಗಳಿಗಾಗಿ ಬಳಸಲಾಗುತ್ತದೆ. ಶುಷ್ಕ ಪ್ರದೇಶದ ಶುಷ್ಕ ಋತುವಿನ ಕೊನೆಯಲ್ಲಿ ಜಾನುವಾರುಗಳಿಗೆ ಭದ್ರಾಕ್ಷಿಯನ್ನು ಮೇವಾಗಿ ನೀಡುತ್ತಾರೆ. ಇದನ್ನು ಜಮೈಕಾದಲ್ಲಿ ಮೇವಾಗಿ ಬಳಸುತ್ತಾರೆ. ಹಣ್ಣುಗಳು ಮತ್ತು ಎಲೆಗಳನ್ನು ಕುದುರೆ ಹಾಗೂ ಜಾನುವಾರುಗಳಿಗೆ ಆಹಾರವಾಗಿ ನೀಡಲಾಗುತ್ತದೆ. ಪೋರ್ಟೊ ರಿಕೊದಲ್ಲಿ ಹಂದಿಗಳಿಗೆ ಇದರ ಹಣ್ಣುಗಳನ್ನು ನೀಡಲಾಗುತ್ತದೆ. = ಔಷಧೀಯ ಬಳಕೆ = ನೀರಿನಲ್ಲಿ ನೆನೆಸಿರುವ ಪುಡಿಮಾಡಿದ ಭದ್ರಾಕ್ಷಿ ಬೀಜಗಳ ಪಾನೀಯವನ್ನು ಅತಿಸಾರ ಭೇದಿ, ಶೀತ, ಕೆಮ್ಮು, ರಕ್ತಸ್ರಾವ ಮತ್ತು ವಿಷಪೂರಿತ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದನ್ನು ಮೂತ್ರವರ್ಧಕವಾಗಿಯೂ ಬಳಸುತ್ತಾರೆ. ಗಾಯದ ಮೇಲೆ ತೊಗಟೆಯ ಚೂರ್ಣವನ್ನು ಸಿಂಪಡಿಸಿದರೆ, ಆ ಗಾಯವು ಬೇಗ ವಾಸಿಯಾಗುತ್ತದೆ. ಟೀ ಮಾಡುವ ರೀತಿಯಲ್ಲಿ ಭದ್ರಾಕ್ಷಿ ಮರದ ಒಣಗಿದ ಎಲೆಗಳಿಂದ ಟೀ ತಯಾರಿಸಿ ದಿನಕ್ಕೆ ಎರಡು ಬಾರಿ ಕುಡಿದರೆ ಜ್ವರ ಕಡಿಮೆ ಆಗುತ್ತದೆ. = ಉಲ್ಲೇಖ =