ಭರತ ಮುನಿ ಭಾರತದ ಖ್ಯಾತ ನಾಟ್ಯಶಾಸ್ತ್ರಜ್ಞ. ಇವರನ್ನು ಭಾರತದ ರಂಗಭೂಮಿಯ ಪಿತಾಮಹ ಎನ್ನಬಹುದು. ಇವರು ಬರೆದ ನಾಟ್ಯಶಾಸ್ತ್ರ ಎಂಬ ಗ್ರಂಥವು ಭಾರತದಲ್ಲಿ ನಾಟ್ಯ ಮತ್ತು ರಂಗಭೂಮಿಗೆ ಹೊಸ ದಿಶೆಯನ್ನು ತೋರಿದ ಗ್ರಂಥವಾಗಿದೆ. ನಾಟ್ಯಶಾಸ್ತ್ರ, ಕಾವ್ಯ ತತ್ವ ವಿವೇಚನೆಗೆ ಮಾತ್ರ ಸೀಮಿತವಾದ ಕೃತಿಯಲ್ಲ; ಇಡೀ ನಾಟಕ ಕಲೆಯ ಕುರಿತು ಒಂದು ಸಂಕ್ಷಿಪ್ತ ವಿಶ್ವಕೋಶವಾಗಿದೆ. ಈ ಗ್ರಂಥದಲ್ಲಿ ೩೬ ಅಧ್ಯಾಯಗಳಿದ್ದು, ಒಂದಕ್ಕಿಂತ ಹೆಚ್ಚು ವಿದ್ವಾಂಸರು ಬರೆದಿದ್ದಾರೆ ಎಂಬ ಸಂಶಯವಿದೆ. ಇದರ ಕಾಲ ಕ್ರಿ.ಪೂ ಮೂರನೇ ಶತಮಾನದಿಂದ ಕ್ರಿ.ಶ ಒಂದನೇ ಶತಮಾನವೆಂದು ಅಂದಾಜಿಸಲಾಗಿದೆ.. ಭರತ ತನ್ನ ನಾಟ್ಯಶಾಸ್ತ್ರದ ಆರನೇ ಅಧ್ಯಾಯದಲ್ಲಿ ಈ ರಸಸೂತ್ರವನ್ನು ಹೇಳುತ್ತಾನೆ. ಅಂದರೆ ವಿಭಾನುಭಾವವ್ಯಭಿಚಾರಿಸಂಯೋಗಾತ್ ರಸ ನಿಷ್ಪತ್ತಿಃ - ವಿಭಾವ, ಅನುಭಾವ ಮತ್ತು ವ್ಯಭಿಚಾರಿ ಅಥವಾ ಸಂಚಾರಿಭಾವಗಳ ಸಂಯೋಗದಿಂದ ರಸನಿಷ್ಪತ್ತಿ ಆಗುತ್ತದೆ. ಭರತ ಈ ನಾಲ್ಕು ಅಲಂಕಾರಗಳನ್ನು ಹೇಳುತ್ತಾನೆ - ಉಪಮಾ, ರೂಪಕ, ದೀಪಕ ಮತ್ತು ಯಮಕ ಅಲಂಕಾರಗಳು. ಅಲಂಕಾರಗಳ ನಂತರ ಕಾವ್ಯ ದೋಷಗಳನ್ನೂ ಗುಣಗಳನ್ನೂ ಎತ್ತಿಕೊಳ್ಳುತ್ತಾನೆ. ಭರತನ ನಾಟ್ಯಶಾಸ್ತ್ರ, ನಾಟಕವೆಂದರೇನೆಂಬುದನ್ನು ಕುರಿತು ಹೇಳುವ ಈ ಮಾತನ್ನು ಮೊದಲು ಗಮನಿಸಬಹುದು:- ನೈಕಾತ್ತತೊ:ತ್ರ ಭರತಾಂ ದೇವಾನಾಂ ಚಾತ್ರ ಭಾವನಂ|. ತ್ರೈಲೋಕಸ್ಯಾಸ್ಯ ಸರ್ವಸ್ಯ ನಾಟ್ಯಂ ಭಾವಾನುಕೀರ್ತನಂ||(1.೧೦೩) == ಎಂಟು ಸ್ಥಾಯಿ ಭಾವಗಳು == ರತಿ - ಶೃಂಗಾರರಸ ಹಾಸ್ಯ - ಹಾಸ್ಯ ಶೋಕ - ಕರುಣ ಕ್ರೋಧ - ರೌದ್ರ ಉತ್ಸಾಹ - ವೀರ ಭಯ - ಭಯಾನಕ ಜಿಗುಪ್ಸೆ - ಬೀಭತ್ಸ ವಿಸ್ಮಯ - ಅದ್ಭುತ == ಎಂಟು ಸಾತ್ವಿಕ ಭಾವಗಳು == ಮೈಮರೆಯುವಿಕೆ ಬೆವರುವುದು ರೋಮಚಕ ಸ್ವರಭೇದ ನಡುಕ ಮುಖದ ಬಣ್ಣ ಬದಲಾಗುವುದು ಕಂಬನಿ ಮೂರ್ಛೆ == ಸಂಚಾರಿ ಭಾವಗಳು == ಭರತ ತನ್ನ ನಾಟ್ಯಶಾಸ್ತ್ರದಲ್ಲಿ ಹೀಗೆ ನಿರ್ವೇದ, ಗ್ಲಾನಿ, ಶಂಕೆ, ಅಸೂಯೆ ಮೊದಲಾದ ೩೩ ಸಂಚಾರಿ ಭಾವಗಳನ್ನು ಹೇಳಿದ್ದಾನೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ; . (1951). " ( )". , .