ಭಾನುಪ್ರಿಯಾ ( ೧೫ ಜನವರಿ ೧೯೬೭) ಒಬ್ಬ ಭಾರತೀಯ ನಟಿ, ಕೂಚಿಪುಡಿ ನೃತ್ಯಗಾರ್ತಿ ಮತ್ತು ಧ್ವನಿ ಕಲಾವಿದೆ. ೪ ದಶಕಗಳ ಕಾಲದ ವೃತ್ತಿಜೀವನದಲ್ಲಿ, ಭಾನುಪ್ರಿಯಾ ೧೫೫ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಧಾನವಾಗಿ ಇವರು ಕಾಣಿಸಿಕೊಂಡ ಭಾಷೆಗಳು ತಮಿಳು , ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಭಾಗವಹಿಸಿದ್ದಾರೆ. ಅವರು ಸ್ಲ್ಯಾಪ್ಸ್ಟಿಕ್ ಹಾಸ್ಯದಿಂದ ಮಹಾಕಾವ್ಯದವರೆಗೆ ವಿವಿಧ ಪಾತ್ರಗಳಲ್ಲಿ ನಟಿಸಿದ್ದಾರೆ. == ಪ್ರಶಸ್ತಿಗಳು == ಮೂರು ರಾಜ್ಯದ ನಂದಿ ಪ್ರಶಸ್ತಿ, ಎರಡು ತಮಿಳುನಾಡು ರಾಜ್ಯದ ಚಲನಚಿತ್ರ ಪ್ರಶಸ್ತಿ, ಫಿಲ್ಮ್ ಫೇರ್ ಪ್ರಶಸ್ತಿ. ಎರಡು ಸಿನಿಮಾ ಎಕ್ಸ್ ಪ್ರೆಸ್ ಪ್ರಶಸ್ತಿಗಳನ್ನು ಪಡೆದ್ದಿದ್ದಾರೆ . == ಆರಂಭಿಕ ಜೀವನ == ಭಾನುಪ್ರಿಯಾ ಅವರು ೧೫ ಜನವರಿ ೧೯೬೭ ರಂದು ಆಂಧ್ರಪ್ರದೇಶದ ರಾಜಮಂಡ್ರಿಯ ಬಳಿಯ ರಂಗಂಪೇಟಾ ಗ್ರಾಮದಲ್ಲಿ ಜನಿಸಿದರು.ಇವರು ತೆಲುಗು ಮಾತನಾಡುವ ಕುಟುಂಬದಲ್ಲಿ ಪಾಂಡು ಬಾಬು ಮತ್ತು ರಾಗಮಾಲಿ ದಂಪತಿಗೆ ಜನಸಿದರು. ಆಕೆಗೆ ಆರಂಭಿಕದಲ್ಲಿ ಮಂಗಭಾನು ಎಂದು ಹೆಸರಿಟ್ಟರು. ಆಕೆಯ ಕುಟುಂಬ ನಂತರ ತಮಿಳುನಾಡಿನ ಚೆನ್ನೈಗೆ ಸ್ಥಳಾಂತರಗೊಂಡಿತು. ಇವರ ಹಿರಿಯ ಸಹೋದರ ಗೋಪಿಕೃಷ್ಣ ಮತ್ತು ತಂಗಿ ಶಾಂತಿಪ್ರಿಯಾ. ಇವರು ೧೯೯೦ ರ ದಶಕದಿಂದಲೂ ಚಲನಚಿತ್ರದಲ್ಲಿ ನಟಿಯಾಗಿದ್ದಾರೆ. == ವೃತ್ತಿ == ೧೯೮೩ ರಿಂದ ೧೯೯೫ ರವರೆಗೆ ಒಂದು ದಶಕಕ್ಕೂ ಹೆಚ್ಚು ಕಾಲ ಅವರು ಪ್ರಮುಖ ಮುಖ್ಯವಾಹಿನಿಯ ನಟಿಯರಲ್ಲಿ ಒಬ್ಬರಾಗಿದ್ದರು. ಅವರು ತಮಿಳು ಚಲನಚಿತ್ರ ಮೆಲ್ಲ ಪೆಸುಂಗಲ್ (೧೯೮೩) ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಅವರು ನಂತರ ತೆಲುಗು ಹಿಟ್ ಸಿತಾರಾದಲ್ಲಿ ಕಾಣಿಸಿಕೊಂಡರು. ಅವರು ಆ ವರ್ಷ ತೆಲುಗಿನಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ನಂತರ ಅವರು ೧೯೮೫ರ ರಹಸ್ಯ ಚಲನಚಿತ್ರ ಅನ್ವೇಷನಾದಲ್ಲಿ ಪಕ್ಷಿಶಾಸ್ತ್ರಜ್ಞರಾಗಿ ನಟಿಸಿದರು. ೧೯೮೬ರಲ್ಲಿ, ಅವರು ದೋಸ್ತಿ ದುಷ್ಮಣಿ ಚಿತ್ರದ ಮೂಲಕ ಹಿಂದಿ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ೧೯೮೮ರಲ್ಲಿ, ಅವರು ಸ್ವರ್ಣಕಮಲಂನಲ್ಲಿ ಕಾಣಿಸಿಕೊಂಡರು, ಇದನ್ನು ೧೯೮೮ರ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ ಮತ್ತು ಆನ್ ಆರ್ಬರ್ ಚಲನಚಿತ್ರೋತ್ಸವದ ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶಿಸಲಾಯಿತು. ಭಾನುಪ್ರಿಯಾ ಅತ್ಯುತ್ತಮ ನಟಿಗಾಗಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಶಸ್ತಿ, ಅತ್ಯುತ್ತಮ ನಟಿಗಾಗಿ ನಂದಿ ಪ್ರಶಸ್ತಿ ಮತ್ತು ಚಲನಚಿತ್ರದಲ್ಲಿನ ಅವರ ಅಭಿನಯಕ್ಕಾಗಿ ತೆಲುಗು - ಅತ್ಯುತ್ತಮ ನಟಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದರು. ೧೯೮೯ ಮತ್ತು ೧೯೯೧ರಲ್ಲಿ, ತಮಿಳು ಹಿಟ್‌ಗಳಾದ ಆರಾರೋ ಆರಿರಾರೋ ಮತ್ತು ಅಳಗನ್‌ನಲ್ಲಿ ಅವರಿಗೆ ಕ್ರಮವಾಗಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ವಿಶೇಷ ಬಹುಮಾನಗಳನ್ನು ತಂದುಕೊಟ್ಟಿತು. ದಕ್ಷಿಣ ಭಾರತದ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಜೆ ಎಫ್ ಡಬ್ಲು ದಿವಾಸ್ ಆಫ್ ಸೌತ್ ಇಂಡಿಯಾ ಪ್ರಶಸ್ತಿ, ದೂರದರ್ಶನದಲ್ಲಿ ಜೀವಮಾನದ ಸಾಧನೆಗಾಗಿ ಜೆಮಿನಿ ಟಿವಿ ಪುರಸ್ಕಾರ ಮತ್ತು ಇತರ ಹಲವಾರು ಗೌರವಗಳನ್ನು ಪಡೆದರು. == ವೈಯಕ್ತಿಕ ಜೀವನ == ಭಾನುಪ್ರಿಯಾ ೧೪ ಜೂನ್ ೧೯೯೮ ರಂದು ಕ್ಯಾಲಿಫೋರ್ನಿಯಾದ ಮಾಲಿಬುನಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಡಿಜಿಟಲ್ ಗ್ರಾಫಿಕ್ಸ್ ಇಂಜಿನಿಯರ್ ಆದರ್ಶ್ ಕೌಶಲ್ ಅವರನ್ನು ವಿವಾಹವಾದರು. ದಂಪತಿಗೆ ೨೦೦೨ರಲ್ಲಿ ಅಭಿನಯ ಎಂಬ ಮಗಳಿದ್ದಾಳೆ. ಮಗಳೊಂದಿಗೆ ಚೆನ್ನೈನಲ್ಲಿ ನೆಲೆಸಿದ್ದಾ ಇವರು ಭಾರತಕ್ಕೆ ಮರಳಿ ತಮ್ಮ ನಟನಾ ವೃತ್ತಿಯನ್ನು ಪುನರಾರಂಭಿಸಿದರು. ಕೌಶಲ್ ಹೃದಯ ಸ್ತಂಭನದಿಂದ ೨೦೧೮ ರಲ್ಲಿ ನಿಧನರಾದರು. == ಚಿತ್ರಕಥೆ == === ಚಲನಚಿತ್ರ === ==== ನಟನೆಯ ಪಾತ್ರಗಳು ==== ==== ಡಬ್ಬಿಂಗ್ ಕಲಾವಿದ ==== ಊರ್ಮಿಳಾ ಮಾತೋಂಡ್ಕರ್ - ಇಂಡಿಯನ್(೧೯೯೬ರ ಚಿತ್ರ) (ತಮಿಳು ಚಲನಚಿತ್ರ) (೧), ಸತ್ಯ (ತೆಲುಗು) (೯೯೮) ಪ್ರಿಯಾ ರಾಮನ್ - ಸೂರ್ಯವಂಶಂ (೧೯೯೭) ರಂಭಾ - ಅರುಣಾಚಲಂ (ತೆಲುಗು ಚಲನಚಿತ್ರ) (೧೯೯೭) ಕಾಜೋಲ್ - ಮೆರುಪು ಕಲಾಲು (೧೯೯೭) ನಿವೇದಿತಾ ಜೈನ್ - ಥಾಯಿನ್ ಮಣಿಕೋಡಿ (೧೯೯೮) == ಉಲ್ಲೇಖಗಳು ==