ಭಾರತರು ಋಗ್ವೇದದಲ್ಲಿ ಉಲ್ಲೇಖಿಸಲ್ಪಟ್ಟ ಒಂದು ಬುಡಕಟ್ಟಾಗಿದ್ದರು. ಇವರ ಉಲ್ಲೇಖ ವಿಶೇಷವಾಗಿ ಭಾರತ ಋಷಿಗಳಾದ ವಿಶ್ವಾಮಿತ್ರರಿಗೆ ಆರೋಪಿಸಲಾದ ಮಂಡಲ ೩ರಲ್ಲಿ ಆಗಿದೆ. ಭಾರತರು ಕ್ರಿ.ಪೂ. ಎರಡನೇ ಸಹಸ್ರಮಾನದಲ್ಲಿ ರಾವಿ ನದಿಯ ಸುತ್ತ ವಾಸಿಸುತ್ತಿದ್ದ ವೈದಿಕ ಬುಡಕಟ್ಟಾಗಿದ್ದರು ಎಂದು ವಿದ್ವಾಂಸರು ನಂಬುತ್ತಾರೆ. ಭಾರತ ಶಬ್ದವನ್ನು ಅಗ್ನಿ (ಅಕ್ಷರಶಃ, "ಕಾಪಾಡಬೇಕಾದುದು", ಅಂದರೆ ಮನುಷ್ಯರ ಆರೈಕೆಯಿಂದ ಜೀವಂತವಾಗಿರಿಸಬೇಕಾದ ಬೆಂಕಿ) ಮತ್ತು ಮಂಡಲ ೨ರಲ್ಲಿ ರುದ್ರನ ಒಂದು ಹೆಸರಾಗಿಯೂ ಬಳಸಲಾಗುತ್ತದೆ. ಮಂಡಲ ೭ (೭.೧೮ ಇತ್ಯಾದು) ಭಾರತರು ದಾಶರಾಜ್ಙ ಯುದ್ಧದಲ್ಲಿ ಭಾಗವಹಿಸಿದರು ಮತ್ತು ವಿಜಯಿಗಳಾದರು ಎಂದು ಉಲ್ಲೇಖಿಸುತ್ತದೆ. ಈ ಯುದ್ಧದಲ್ಲಿ ಭಾರತರ ಮುಖಂಡ ಸುದಾಸನ ವಿಜಯದ ಕಾರಣ, ಭಾರತರು ಕುರುಕ್ಷೇತ್ರ ಪ್ರದೇಶದಲ್ಲಿ ನೆಲೆಸಲು ಸಾಧ್ಯವಾಯಿತು. ವಿವಿಧ ವೈದಿಕ ಬುಡಕಟ್ಟುಗಳ ನಡುವಿನ ಮುಂಚಿನ ಅಧಿಕಾರ ಸಂಘರ್ಷಗಳಲ್ಲಿ ಇವರು ಯಶಸ್ವಿಯಾಗಿದ್ದರು ಎಂದು ತೋರುತ್ತದೆ. ಹಾಗಾಗಿ ವೈದಿಕೋತ್ತರ ಸಂಪ್ರದಾಯದಲ್ಲಿ (ಮಹಾಭಾರತ), ಸಂಪೂರ್ಣ ಭಾರತದ ಪ್ರಾಚೀನ ವಿಜೇತನಾದ, ನಾಮಸೂಚಕ ಪೂರ್ವಜನು ಸಾಮ್ರಾಟ ಭರತನಾಗುತ್ತಾನೆ. ಇವನ ರಾಜ್ಯವನ್ನು ಭಾರತ ಎಂದು ಕರೆಯಲಾಗುತ್ತದೆ. ನಂತರ ಭಾರತದ ಅರಸನು ಪುರು ಅರಸನೊಂದಿಗೆ ಮೈತ್ರಿ ಮಾಡಿ ಅವನನ್ನು ಕೂಡಿಕೊಂಡು ಕುರು ರಾಜ್ಯವನ್ನು ರಚಿಸಿದನು. ಇಂದು ಭಾರತ ಎಂಬುದು ನಮ್ಮ ದೇಶದ ಒಂದು ಅಧಿಕೃತ ಹೆಸರಾಗಿದೆ. == ಉಲ್ಲೇಖಗಳು ==