ಭೀಷ್ಮಕ್‍ನಗರ್ ಭಾರತದ ಅರುಣಾಚಲ ಪ್ರದೇಶ ರಾಜ್ಯದಲ್ಲಿರುವ ಒಂದು ಪುರಾತತ್ವ ಸ್ಥಳ. ಈ ಅವಶೇಷಗಳು ಸಾಮಾನ್ಯವಾಗಿ ಕ್ರಿ.ಶ. 11 ರಿಂದ 16 ನೇ ಶತಮಾನದವರೆಗೆ ಸಾದಿಯಾ ಪ್ರದೇಶವನ್ನು ಆಳಿದ ಬೋಡೋ-ಕಚಾರಿ (ಟಿಬೆಟೊ-ಬರ್ಮೀಸ್) ಜನಾಂಗೀಯ ಗುಂಪಾದ ಚೂಟಿಯಾಗಳ ಆಡಳಿತ ಕಾಲದ್ದೆಂದು ಹೇಳಲಾಗಿದೆ. == ಇತಿಹಾಸ == ಭೀಸ್ಮಕ್‍ನಗರವನ್ನು ಚೂಟಿಯಾ ಸಾಮ್ರಾಜ್ಯದ ರಾಜಕೀಯ ಕೇಂದ್ರವಾದ ಸಾಧಯಪುರಿ (ಅಥವಾ ಸ್ವಾಧಯಪುರಿ) ಯೊಂದಿಗೆ ಗುರುತಿಸಲಾಗಿದೆ. ಇಟ್ಟಿಗೆಗಳ ಮೇಲಿನ ಶಾಸನದ ಆಧಾರದ ಮೇಲೆ, ಇದು ಹದಿನೈದನೆಯ ಶತಮಾನದ ಚುಟಿಯಾ ರಾಜ ಲಕ್ಷ್ಮೀನಾರಾಯಣನ ರಾಜಧಾನಿ ಎಂದು ಊಹಿಸಲಾಗಿದೆ. ಶಾಸನದ ಬರಿಗೆಯರಿಮೆ ವಿಶ್ಲೇಷಣೆಯು ಈ ಕಾಲನಿರ್ಧಾರವನ್ನು ಬೆಂಬಲಿಸುತ್ತದೆ. == ವಾಸ್ತುಕಲೆ == ಅದರ ರಕ್ಷಣಾರಚನೆ ಮತ್ತು ಕಟ್ಟಡಗಳೊಂದಿಗೆ ಕೋಟೆಯನ್ನು ಬೆಂಕಿಯಲ್ಲಿ ಸುಟ್ಟ ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ. ಕೋಟೆನಗರವು 10 ಚದರ ಕಿ.ಮೀ ವಿಸ್ತೀರ್ಣದಲ್ಲಿ ಹರಡಿದೆ. ಗೋಡೆಯು 4.5 ಮೀಟರ್ ಎತ್ತರ ಮತ್ತು 6 ಮೀಟರ್ ಅಗಲವನ್ನು ಹೊಂದಿದೆ. ಇದನ್ನು ಗ್ರಾನೈಟ್ ಕಲ್ಲಿನಿಂದ ಮತ್ತು ಪೂರ್ವ, ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಇಟ್ಟಿಗೆಗಳನ್ನು ಬಳಸಿ ಮಾಡಲಾಗಿದೆ. ಉತ್ತರದಲ್ಲಿ, ಮಿಶ್ಮಿ ಬೆಟ್ಟಗಳು ನೈಸರ್ಗಿಕ ತಡೆಗೋಡೆಯನ್ನು ಒದಗಿಸಿದವು. ಅರುಣಾಚಲ ಸರ್ಕಾರವು ಅತ್ಯಂತ ಕಡಿಮೆ ಉತ್ಖನನವನ್ನು ನಡೆಸಿದ್ದರೂ, ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಮೂರು ಟ್ಯಾಂಕ್‌ಗಳು ಮತ್ತು ಎರಡು ಗೇಟ್‌ಗಳನ್ನು ಪ್ರಾಥಮಿಕ ಉತ್ಖನನಗಳು ಬಹಿರಂಗಪಡಿಸಿವೆ. == ಚಿತ್ರಸಂಪುಟ == == ಟಿಪ್ಪಣಿಗಳು == == ಉಲ್ಲೇಖಗಳು ==