ಭೂತಗನ್ನಡಿಯು ಒಂದು ವಸ್ತುವಿನ ವರ್ಧಿಸಿದ ಚಿತ್ರವನ್ನು ಸೃಷ್ಟಿಸಲು ಬಳಸಲಾದ ಪೀನ ಮಸೂರ. ಸಾಮಾನ್ಯವಾಗಿ ಮಸೂರವನ್ನು ಹಿಡಿಕೆಯಿರುವ ಚೌಕಟ್ಟಿನಲ್ಲಿ ಕೂರಿಸಲಾಗುತ್ತದೆ. ಬೆಳಕನ್ನು ಕೇಂದ್ರೀಕರಿಸಲು ಭೂತಕನ್ನಡಿಯನ್ನು ಬಳಸಬಹುದು, ಉದಾಹರಣೆಗೆ ಬೆಂಕಿಯನ್ನು ಹಚ್ಚಲು ಕೇಂದ್ರಬಿಂದುವಿನಲ್ಲಿ ಬಿಸಿ ಬಿಂದುವನ್ನು ಸೃಷ್ಟಿಸುವ ಸಲುವಾಗಿ ಸೂರ್ಯನ ವಿಕಿರಣವನ್ನು ಕೇಂದ್ರೀಕರಿಸಲು. == ಇತಿಹಾಸ == ಮಧ್ಯಪ್ರಾಚ್ಯ ಹಾಗೂ ಮೆಡಿಟರೇನಿಯನ್ ಜಲಾನಯನ ಪ್ರದೇಶದಾದ್ಯಂತ ಹಲವಾರು ಸಹಸ್ರಮಾನಗಳಿಂದ ಮಸೂರಗಳ ಬಳಕೆಯು ವ್ಯಾಪಕವಾಗಿತ್ತು ಎಂದು ಸಾಕ್ಷ್ಯವು ಸೂಚಿಸುತ್ತದೆ. ವರ್ಧಿಸುವ ಸಾಧನದ ಅತ್ಯಂತ ಮುಂಚಿನ ಸ್ಪಷ್ಟ ಲಿಖಿತ ಸಾಕ್ಷ್ಯವೆಂದರೆ ಅರಿಸ್ಟೋಫೆನೀಸ್‍ನ ಕ್ರಿ.ಪೂ. ೪೨೪ರ ದ ಕ್ಲೌಡ್ಸ್‌ನಲ್ಲಿನ ಒಂದು ಕುಚೋದ್ಯ. ಇದರಲ್ಲಿ ದೂದಿಗೆ ಬೆಂಕಿಹೊತ್ತಿಸಲು ಇರುವ ಭೂತಗನ್ನಡಿಗಳನ್ನು ಔಷಧಾಲಯಗಳಲ್ಲಿ ಮಾರಾಟಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ. ಮತ್ತೊಂದು ಸಾಕ್ಷ್ಯವೆಂದರೆ ಹಿರಿಯ ಪ್ಲೈನಿಯ "ಲೆನ್ಸ್" (ಇದು ಗಾಯಗಳಿಗೆ ಕಾವು ಕೊಡಲು ಬಳಸಲಾದ, ನೀರು ತುಂಬಿದ ಗಾಜಿನ ಗೋಳ). == ಉಲ್ಲೇಖಗಳು ==