ಭೂಮನ್ಯು ಹಿಂದೂ ಸಾಹಿತ್ಯದಲ್ಲಿ ಚಂದ್ರವಂಶವೆಂಬ ರಾಜವಂಶದ ರಾಜ. ಭೂಮನ್ಯುವು ಭರತನ ಮಗ ಹಾಗೆಯೇ ದುಷ್ಯಂತನ ಮೊಮ್ಮಗ. ಭೂಮನ್ಯುವಿನ ವಂಶವು ಮಹಾಭಾರತದಲ್ಲಿ ಕಾಣಿಸಿಕೊಂಡಿದೆ. == ದಂತಕಥೆ == ಮಹಾಭಾರತವು ಭೂಮನ್ಯುವಿನ ಜನ್ಮದ ಎರಡು ವಿಭಿನ್ನ ಮೂಲಗಳನ್ನು ನೀಡುತ್ತದೆ: ಮೊದಲ ದಂತಕಥೆಯು ಭರತನು ಕಾಶಿ ಸಾಮ್ರಾಜ್ಯದ ರಾಜ ಸರ್ವಸೇನನ ಮಗಳು ಸುನಂದಾಳನ್ನು ವಿವಾಹವಾದನು ಮತ್ತು ಅವಳಿಂದ ಭೂಮನ್ಯು ಎಂಬ ಮಗನನ್ನು ಪಡೆದನು ಎಂದು ಹೇಳುತ್ತದೆ. ಇನ್ನೊಂದು ದಂತಕಥೆಯ ಪ್ರಕಾರ, ಭರದ್ವಾಜ ಋಷಿಯ ಸೂಚನೆಯ ಮೇರೆಗೆ ಭರತನು ಮಾಡಿದ ಯಜ್ಞದಿಂದ ಭೂಮನ್ಯು ಜನಿಸಿದನು. ಮಹಾಕಾವ್ಯದಲ್ಲಿ ಭೂಮನ್ಯು ಪ್ರಬುದ್ಧ ವಯಸನ್ನು ತಲುಪಿದ ನಂತರ ಅವನ ತಂದೆ ಭರತನು ಅವನ ರಾಜ್ಯದ ವ್ಯವಹಾರಗಳನ್ನು ಅವನಿಗೆ ವಹಿಸಿದನು. ಭೂಮನ್ಯು ಮತ್ತು ಹೆಂಡತಿ ಪುಷ್ಕರಿಣಿ ಇವರಿಗೆ ಆರು ಗಂಡು ಮಕ್ಕಳಿದ್ದರು. ಅವರೆಂದರೆ - ದಿವಿರತ, ಸುಹೋತ್ರ, ಸುಹೋತ, ಸುಕವಿ, ಸುಯಜು, ಮತ್ತು ಷಿಕ. ಭೂಮನ್ಯುವಿನ ನಂತರ ಅವನ ಮಗ ಸುಹೋತ್ರನು ಪಟ್ಟಾಭಿಷಿಕ್ತನಾದನು. == ಉಲ್ಲೇಖಗಳು ==