ಭ್ರೂಣಹತ್ಯೆ ಎಂದರೆ ಭ್ರೂಣವನ್ನು ನಾಶಮಾಡುವ ಕ್ರಿಯೆ. == ಕಾನೂನುಬದ್ಧ ಗರ್ಭಪಾತದ ಅವಧಿಯಲ್ಲಿ ಬಳಕೆ == ವೈದ್ಯಕೀಯ ಬಳಕೆಯಲ್ಲಿ, "ಭ್ರೂಣಹತ್ಯೆ" ಶಬ್ದವನ್ನು ಸಾಮಾನ್ಯವಾಗಿ ಯಾವುದೋ ರೂಪದ ಗರ್ಭಪಾತದ ಮೊದಲು ಕೇವಲ ಭ್ರೂಣದ ಮರಣವನ್ನು ಉಂಟುಮಾಡುವುದು ಎಂಬ ಅರ್ಥಕೊಡಲು ಬಳಸಲಾಗುತ್ತದೆ. ಭ್ರೂಣಹತ್ಯೆಯನ್ನು "ಸಜೀವ ಜನನದ ಯಾವುದೇ ಅಪಾಯವಾಗದಿರುವುದನ್ನು ಖಚಿತಗೊಳಿಸಲು ವೈದ್ಯಕೀಯ ಗರ್ಭಪಾತದ ಮೊದಲು ಗರ್ಭಾವಸ್ಥೆಯ ೨೧ ವಾರ ಹಾಗೂ ೬ ದಿನಗಳ ನಂತರ" ಮಾಡಬೇಕು ಎಂದು ರಾಯಲ್ ಕಾಲೇಜ್ ಶಿಫಾರಸು ಮಾಡುತ್ತದೆ. ೨೦ ವಾರಗಳ ನಂತರದ ಗರ್ಭಪಾತಗಳಲ್ಲಿ, ಭ್ರೂಣಹತ್ಯೆಯನ್ನು ನೆರವೇರಿಸಲು ಭ್ರೂಣದ ಹೃದಯವನ್ನು ನಿಲ್ಲಿಸುವ ಸಲುವಾಗಿ ಭ್ರೂಣದ ಹೃದಯದೊಳಗೆ ಡಿಜಾಕ್ಸಿನ್ ಅಥವಾ ಪೊಟ್ಯಾಷಿಯಮ್ ಕ್ಲೋರೈಡ್‍ನ ಚುಚ್ಚುಮದ್ದನ್ನು ಬಳಸಬಹುದು. == ಉಲ್ಲೇಖಗಳು ==