ಹೊನ್ನೇನಹಳ್ಳಿ ಶಿವಣ್ಣ ಮಂಜುಳ (೮ ನವೆಂಬರ್ ೧೯೫೪ - ೧೨ ಸೆಪ್ಟೆಂಬರ್ ೧೯೮೬) ಇವರು ತಮಿಳು ಭಾಷೆಯಲ್ಲಿ, ಕುಮಾರಿ ಮಂಜುಳಾ ಮತ್ತು ತೆಲುಗು ಭಾಷೆಯ ಚಲನಚಿತ್ರಗಳಲ್ಲಿ, ಕನ್ನಡ ಮಂಜುಳ ಎಂದು ಮನ್ನಣೆ ಪಡೆದಿದ್ದಾರೆ. ಇವರು ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ನಟಿಸಿದ ಭಾರತೀಯ ನಟಿ. ಅವರು ೧೯೭೦ ಮತ್ತು ೧೯೮೦ ರ ದಶಕದಲ್ಲಿ ಕನ್ನಡ ಚಲನಚಿತ್ರಗಳ ಅತ್ಯಂತ ಯಶಸ್ವಿ ಮತ್ತು ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದರು. ಅವರು ೧೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಅವರ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. == ವೈಯಕ್ತಿಕ ಜೀವನ == ಮಂಜುಳ ಅವರು ತುಮಕೂರು ಜಿಲ್ಲೆಯ, ಹೊನ್ನೇನಹಳ್ಳಿ ಎಂಬಲ್ಲಿ ಎಂ.ಎಚ್.ಶಿವಣ್ಣ ಮತ್ತು ದೇವಮ್ಮ ದಂಪತಿಗೆ ಮಗಳಾಗಿ ಜನಿಸಿದರು. ಅವರ ತಂದೆ ಶಿವಣ್ಣ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿದ್ದರು. ಅವರು ಚಲನಚಿತ್ರ ನಿರ್ದೇಶಕರಾದ ಅಮೃತಮ್ ಅವರನ್ನು ವಿವಾಹವಾದರು. ಅವರು ಅವರೊಂದಿಗೆ ಹುಡುಗಾಟದ ಹುಡುಗಿ ಮತ್ತು ಕನಸು ನನಸು ಹೀಗೆ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದರು. ಈ ದಂಪತಿಗೆ ಅಭಿಷೇಕ್ ಎಂಬ ಮಗನಿದ್ದಾನೆ. == ವೃತ್ತಿಜೀವನ == ಮಂಜುಳರವರು ೧೯೬೫ ರಲ್ಲಿ ಪ್ರಭಾತ್ ಕಲಾವಿದರು ಎಂಬ ನಾಟಕ ತಂಡದೊಂದಿಗೆ ತಮ್ಮ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ೧೯೬೬ ರಲ್ಲಿ ಮನೆಕಟ್ಟಿ ನೋಡು ಎಂಬ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕನ್ನಡ ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಿದರು. ೧೯೭೨ ರಲ್ಲಿ ತೆರೆಕಂಡ ಹಿರಿಯ ನಿರ್ದೇಶಕ ಎಂ.ಆರ್.ವಿಠಲ್ ನಿರ್ದೇಶನದ ಯಾರ ಸಾಕ್ಷಿ? ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ರಾಜ್ ಕುಮಾರ್, ವಿಷ್ಣುವರ್ಧನ್, ಶ್ರೀನಾಥ್, ಅಶೋಕ್ ಮತ್ತು ಶಂಕರ್ ನಾಗ್ ಸೇರಿದಂತೆ ಹೀಗೆ ಹಲವಾರು ಕನ್ನಡ ನಟರೊಂದಿಗೆ ಅವರು ತೆರೆ ಹಂಚಿಕೊಂಡಿದ್ದಾರೆ. ಅವರ ಅತ್ಯಂತ ಯಶಸ್ವಿ ಜೋಡಿಯಾದ ಶ್ರೀನಾಥ್ ಅವರೊಂದಿಗೆ ಮತ್ತು ಅವರು ಸುಮಾರು ೩೫ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಮಂಜುಳರವರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಬಾಸ್ ಟಾಂಬೋಯಿಶ್ ಹಳ್ಳಿ ಹುಡುಗಿಯ ಪಾತ್ರದಲ್ಲಿ ಪರಿಣತಿ ಪಡೆದರು. ಇದು ೧೯೭೦ ರ ದಶಕದ ಉತ್ತರಾರ್ಧದಲ್ಲಿ ಕನ್ನಡದ ಅಗ್ರ ನಾಯಕಿಯಾಗಿ ಭಾರಿ ಯಶಸ್ಸನ್ನು ತಂದುಕೊಟ್ಟಿತು. ಸಂಪತ್ತಿಗೆ ಸವಾಲ್, ಎರಡು ಕನಸು, ಸೊಸೆ ತಂದ ಸೌಭಾಗ್ಯ, ಬೆಸುಗೆ ಮತ್ತು ಸೀತಾರಾಮು ಇವೆಲ್ಲ ಚಲನಚಿತ್ರಗಳು ಅವರ ಗಮನಾರ್ಹ ಚಲನಚಿತ್ರಗಳಾಗಿವೆ. ಅವರು ರಾಮಕೃಷ್ಣ (ತೆಲುಗು), ಕಮಲ್ ಹಾಸನ್ ಮತ್ತು ರಜನಿಕಾಂತ್ (ತಮಿಳು) ನಂತಹ ಇತರ ಭಾಷೆಗಳಲ್ಲಿ ಪ್ರಸಿದ್ಧ ನಟರೊಂದಿಗೆ ನಟಿಸಿದ್ದಾರೆ. == ಮಂಜುಳರವರ ಅಭಿನಯದ ಚಿತ್ರಗಳು == === ಕನ್ನಡ === === ತಮಿಳು === === ತೆಲುಗು === == ಮರಣ == ೧೯೮೬ ರ ಸೆಪ್ಟೆಂಬರ್ ೯ ರಂದು ಅಡುಗೆಮನೆಯಲ್ಲಿ ಬೆಂಕಿಯ ಅಪಘಾತದಿಂದ ಮಂಜುಳರವರು ಮೃತಪಟ್ಟಿದ್ದರು. ಆರಂಭದಲ್ಲಿ ಅಪಘಾತ ಎಂದು ಪರಿಗಣಿಸಲಾಗಿದ್ದರೂ, ಟೈಮ್ಸ್ ಆಫ್ ಇಂಡಿಯ ಈ ಸಾವನ್ನು ಆತ್ಮಹತ್ಯೆ ಎಂದು ವರದಿ ಮಾಡಿದೆ. == ಬಾಹ್ಯ ಕೊಂಡಿಗಳು == ಮಂಜುಳ ಐ ಎಮ್ ಡಿ ಬಿನಲ್ಲಿ == ಉಲ್ಲೇಖಗಳು ==