ಮಧುಚ್ಛಂದ ಇವರನ್ನು ಮಧುಶ್ಚಂದಸ್ ವೈಶ್ವಾಮಿತ್ರ ಎಂದೂ ಕರೆಯಲಾಗುತ್ತದೆ. ಇವರು ಹಿಂದೂ ಸಾಹಿತ್ಯದಲ್ಲಿ ಉಲ್ಲೇಖಿಸಲಾದ ಋಷಿ. ಋಗ್ವೇದದ ಕಾಲದಲ್ಲಿ ಹಲವಾರು ಸ್ತೋತ್ರಗಳನ್ನು ರಚಿಸಿದ್ದಾರೆ . ಇವರು ವಿಶ್ವಾಮಿತ್ರ ಋಷಿಯ ಪುತ್ರರಲ್ಲಿ ಒಬ್ಬರಾಗಿದ್ದಾರೆ. ಮಧುಚ್ಛಂದ ಅವರು ವೈದಿಕ ಸಾಹಿತ್ಯದ ಮೇಲೆ ಪಾಂಡಿತ್ಯವನ್ನು ಹೊಂದಿದ್ದರು ಮತ್ತು ಶ್ರೇಷ್ಠ ಗಾಯಕರಾಗಿದ್ದರು ಎಂದು ಉಲ್ಲೇಖಿಸಲಾಗಿದೆ. == ಸಾಹಿತ್ಯ == === ಋಗ್ವೇದ === ಋಗ್ವೇದ ಪ್ರಾರಂಭವಾಗುವಾಗ ಅಗ್ನಿ ದೇವರಿಗೆ ಸ್ತುತಿಗೀತೆಯನ್ನು ರಚಿಸಿದವರು ಮಧುಚ್ಛಂದರು. ಇವರನ್ನು ಋಗ್ವೇದದ ಮಂಡಲ ೧ರಲ್ಲಿ ಮೊದಲ ಹತ್ತು ಸ್ತೋತ್ರಗಳ ಲೇಖಕನೆಂದು ಹೇಳಲಾಗಿದೆ. == ಉಲ್ಲೇಖಗಳು ==