ಚಿತ್ರ:. ಮನಸಾರೆ' (ಕನ್ನಡ:ಮನಸಾರೆ) ಭಾರತದ ಕನ್ನಡ ಭಾಷೆಯ ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್ ಹಾಗು ನಾಯಕ ಪಾತ್ರದಲ್ಲಿ ದಿಗಂತ್ ನಟಿಸಿದ್ದಾರೆ.[4] == ಕಥಾವಸ್ತು == ಮನೋಹರ (ದಿಗಂತ್) ಒಬ್ಬ ನಿರುದ್ಯೋಗಿ ಯುವಕ, ಯಾವಾಗಲು ಅವನ ಮನೆಯವರ ಚಿಮಾರಿಗೆ ಪಾತ್ರನಾಗುತ್ತಾನೆ.ಆದರೆ ಅವನ ಚಿಕ್ಕಪ್ಪ ಅವನಿಗೆ ಯಾವಾಗಲು ಪ್ರೋತ್ಸಾಹಿಸುತ್ತಿರುತ್ತಾರೆ. ಒಂದು ದಿನ ತನ್ನ ಅರ್ಹತೆಯನ್ನು ಸಾಬೀತುಪಡಿಸಲು ಹೋಗಿ ಪೋಲಿಸ್ ಠಾಣೆ ಸೇರುವ ಪರಿಸ್ಥಿತಿ ಬರುತ್ತದೆ. ಇದರ ನಂತರ ಎಲ್ಲರು ಮನೋಹರನನ್ನು ಮಾನಸಿಕವಾಗಿ ಅಸ್ವಸ್ಥಎಂದು ಭಾವಿಸುತ್ತಾರೆ. ಈತ ಕುಡಿದು ತನ್ನ ಗೆಳೆಯನೊಂದಿಗೆ ಜಗಳವಾಡಿ ಅಲ್ಲಿಂದ ಮನೆಗೆ ಹೋಗುವಾಗ ಅವನನ್ನು ತಪ್ಪಾಗಿ ಹುಚ್ಚಾಸ್ಪತ್ರೆಯವರು ಹಿಡಿದುಕೊಂಡು ಹೋಗುತ್ತಾರೆ. ಕೆಲ ವೈದ್ಯರು ಮನೋಹರನನ್ನು ಮಹೇಂದ್ರನಾಗಿ (ನಿಜವಾದ ಹುಚ್ಚ) ತಪ್ಪು ದಾಖಲೆಗಳನ್ನು ಮಾಡುತ್ತಾರೆ. ಇಲ್ಲಿಂದ ಮನೋಹರ ತಪ್ಪಿಸಿಕೊಂಡು ಹೋಗುವ ಯತ್ನ ನಡೆಸುತ್ತಿರುವಾಗ ಆಕಸ್ಮಿಕವಾಗಿ ದೇವಕಿ (ಐಂದ್ರಿತ ರೇ)ಯನ್ನು ನೋಡಿ ಅವನಲ್ಲಿ ಅವಳ ಪ್ರತಿ ಪ್ರೀತಿ ಮೂಡುತ್ತದೆ. ಅವನು ದೇವಕಿಯೊಂದಿಗೆ ಅಲ್ಲಿಂದ ತಪ್ಪಿಸಿಕೊಂಡು, ಅವಳೊಂದಿಗೆ ಮೂರು ನಾಲ್ಕು ದಿನ ಆಚೆ ಕಳೆಯುತ್ತಾನೆ. ಇಬ್ಬರ ನಡುವೆ ಪ್ರೀತಿ ಮೂಡಿ, ದೇವಕಿ ತನ್ನ ದುರಂತದ ಕಥೆಯನ್ನು ಅವನಲ್ಲಿ ಹೇಳಿಕೊಳ್ಳುತ್ತಾಳೆ. ಮನಸಾರೆ ಹಾಡುಗಳು ಕಿವಿಗಿಂಪಾಗಿದೆ. == ವಿಮರ್ಶಾ ಮನ್ನಣೆ == ವಿಮರ್ಶಕರು ಈ ಚಿತ್ರಕ್ಕೆ ಪೂರಕವಾಗಿ ಬರೆದರು ಹಾಗು ಇದು ಜನ ಸಾಮನ್ಯರಲ್ಲೂ ಹೆಸರು ಗಳಿಸಿತು. == ಪ್ರಮುಖ ಆಕರ್ಷಣೆಯು == ಚಿತ್ರದ ಕಥಾವಸ್ತುವನ್ನು ಪವನ್ ಕುಮಾರ್ ಬರೆದಿದ್ದರೆ, ಇವರು ಲಗೋರಿ ಚಿತ್ರದ ಕಥಾವಸ್ತು ಕೂಡ ಬರೆದಿದ್ದರೆ. ಇತ್ತೀಚೆಗೆ ಇವರು ಯೋಗರಾಜ್ ಭಟ್ರವರ ಹೊಸ ಚಲನಚಿತ್ರ ಪಂಚರಂಗಿಯಾ ಕಥಾವಸ್ತುವನ್ನು ಬರೆದಿದ್ದರೆ . ಪವನ್ ಮನಸಾರೆ ಚಿತ್ರದಲ್ಲಿ ಡಾಲರ್ ಪಾತ್ರವನ್ನು ಅಭಿನಯಿಸಿದ್ದಾರೆ. == ಗಲ್ಲಾ ಪೆಟ್ಟಿಗೆ == ಮನಸಾರೆ ೨೦೦೯ರ ಯಶಸ್ವೀ ಚಲನಚಿತ್ರ. == ಪ್ರಶಸ್ತಿಗಳು == === ಫಿಲ್ಮ್‌ಫೇರ್ ಪ್ರಶಸ್ತಿಗಳು === ಅತ್ಯುತ್ತಮ ಸಾಹಿತ್ಯ: ಜಯಂತ್ ಕಾಯ್ಕಿಣಿ (ಎಲ್ಲೋ ಮಳೆಯಾಗಿದೆಯಂದು - ಮನಸಾರೆ) === ಸೌತ್ ಸ್ಕೋಪ್ ಅವಾರ್ಡ್ಸ್ === ಉತ್ತಮ ಚಲನಚಿತ್ರ ಅತ್ಯುತ್ತಮ ನಿರ್ದೇಶಕ ಅತ್ಯುತ್ತಮ ನಟಿ ಅತ್ಯುತ್ತಮ ಗೀತಸಾಹಿತಿ == ೨೦೦೯-೨೦೧೦ನೇ ಸಾಲಿನ ರಾಜ್ಯ ಪ್ರಶಸ್ತಿ == ಎರಡನೇ ಅತ್ಯುತ್ತಮ ಚಲನಚಿತ್ರ . == ಧ್ವನಿಪಥ == ಚಿತ್ರದ ಹಾಡುಗಳು ಜನಪ್ರಿಯವಾಗಿದೆ. == ಉಲ್ಲೇಖಗಳು == ://..//2009//25/----. ://.////.