ಮನಾಮ ಅರಬ್ಬಿ_ಭಾಷೆ: المنامة. ಅಥವಾ ಅಲ್-ಮನಾಮ, ಬಹ್ರೈನ್ ದೇಶದ ರಾಜಧಾನಿ ಹಾಗು ಅತಿದೊಡ್ದ ನಗರ. ಮನಾಮದ ಜನಸಂಖ್ಯೆ ಒಂದು ಅಂದಾಜಿನ ಪ್ರಕಾರ ೧,೫೫,೦೦೦. ಮನಾಮ [ಪರ್ಶಿಯನ್ನರ ಹಾಗು ಪೊರ್ತುಗಲ್ ಆಳ್ವಿಕೆಯ ಕಾಲದಲ್ಲಿ ಉನ್ನತಿ ಹೊಂದಿ ಬಹ್ರೈನ್ ದೇಶದ ರಾಜಧಾನಿ ಆಯಿತು. ಇಂದು ಮನಾಮ ಅಥ್ಯಾದುನಿಕ ನಗರ. ಇಸವಿ ೧೭೮೩ರಿಂದ ಮನಾಮ ಸೇರಿದಂತೆ ಬಹ್ರೈನ್ ದೇಶವು ಅಲ್-ಖಲಿಫಾ ರಾಜ ಮನೆತನದ ಆಡಳಿತದಲ್ಲಿದೆ. ಮನಾಮವು ೧೯೫೮ರಲ್ಲಿ ವಾಣಿಜ್ಯ ಬಂದರು ಆಯಿತು. ೧೯೭೧ನೆ ಇಸವಿಯಲ್ಲಿ ಸ್ವತಂತ್ರಬಹ್ರೈನ್ ದೇಶದ ರಾಜಧಾನಿ ಯೆಂದು ಕರೆಯಲ್ಪಟ್ಟಿತು.. == ಇತಿಹಾಸ == == ಆರ್ಥಿಕತೆ == ಮನಾಮ ಬಹ್ರೈನ್ ದೇಶದ ಮುಖ್ಯ ಆದಾಯ ತರುವ ನಗರ. ಪ್ರಮುಖ ಆದಾಯದ ಮೂಲಗಳೆಂದರೆ ಪ್ರವಾಸೋದ್ಯಮ, ಸ್ಥಿರಾಸ್ತಿ ಮಾರಾಟ ಉದ್ಯಮ ಮತ್ತು ಹಣಕಾಸು ಸೇವೆಗಳು. ಹಣಕಾಸು ಸೇವೆಗಳು ಬಹ್ರೈನ್ ದೇಶದ ಒಂದು ಪ್ರಮುಖ ಆದಾಯದ ಮೂಲಗಳಾದರೆ ದೇಶದ ಪ್ರಮುಖ ಹಣಕಾಸು ಸಂಸ್ಠೆಗಳು ಮನಾಮ ನಗರದಲ್ಲಿ ಹಾಗು ಮನಾಮ ನಗರದ ಸೆಂಟ್ರಲ್ ಬುಸಿನೆಸ್ಸ್ ಜಿಲ್ಲೆ , ಹಾಗು ದಿಪ್ಲೊಮಾಟಿಕ್ ಎರಿಯಾಗಳಲ್ಲಿವೆ. ಮನಾಮ ನಗರದ ಸೀಫ್ ಪ್ರದೇಶದಲ್ಲಿ ದೊಡ್ದ ಶೊಪ್ಪಿಂಗ್ ಮಾಲ್ಗಳು ಇವೆ. == ಭೂಗೋಳಶಾಸ್ತ್ರ == ಇತಿಹಾಸದಲ್ಲಿ ಮನಾಮ ನಗರವನ್ನು ಮನಾಮ ಸೌಖ್ಹ್ ಹಾಗು ಮನಾಮ ಫೊರ್ಟ್ ಎಂದು ವಿಂಗದಿಸಲಾಗಿತ. ಈಗ ನಗರವು ಬೆಳೆದಂತೆ ಉಪನಗರಗಳು ಬೆಳೆದವು. ಮನಾಮ ನಗರದ ಉಪನಗರಗಳು ಹಾಗು ನೆರೆಯ ನಗರಗಳು: ಮನಾಮ ಸೌಖ್ಹ್ * ಅವಧಿಯಾ * ಅದ್ಳಿಯಾ * ಬು ಅಶಿರಾ * ಬು ಘಾಲಿ * ದಿಪ್ಲೊಮಾಟಿಕ್ ಎರಿಯಾ * ಘುರೈಫಾ ಗುದೈಬಿಯಾ * ಗುಫೊಲ್ * ಹುರಾ * ಜುಫ್ಫೈರ್* ಮಾಹೊಙ್ * ನೊಐಮ್ * ರಾಸ್ ರೊಮಾನ್ * ಸೀಫ್ ಸೆಗಯಾ * ಸಲ್ಮಾನಿಯಾ * ಉಮ್ಮಲ್ಹಸ್ಸಮ್ * ಙಿನ್ಜ್. == ಆಡಳಿತ, ನ್ಯಾಯಾಲಯ ವ್ಯವಸ್ಥೆ ಮತ್ತು ರಾಜಕೀಯ == ಮನಾಮವು ಬಹ್ರೆನ್ ಆಡಳಿತ ವ್ಯವಸ್ಥೆಯ ೫ ಅಂಗಗಳಾದ ಕೆಪಿಟಲ್ ಗೊವೆರ್ನೊರೆನ ಒಂದು ಭಾಗವಾಗಿದೆ.೨೦೦೨ ನೆಯ ಇಸವಿಯ ವರೆಗೆ ಅಲ್-ಮನಾಮ ಮುನಿಸಿಪಾಲಿಟಿಯ ಒಂದು ಭಾಗವಾಗಿತು. == ಸಾರಿಗೆ == === ರಸ್ತೆ ಸಂಪರ್ಕ === ಮನಾಮ ನಗರವು ದೇಶದ ಪ್ರಮುಖ ಸಂಪರ್ಕ ಕೇಂದ್ರ. ಈಗ ದೇಶದ ಸಂಪರ್ಕ ವವಸ್ಥೆಯು ತನ್ನ ಅತುನ್ನತ ಅಭಿವ್ರದ್ಧಿ ಪಥದಲ್ಲಿದೆ. === ಸಾರ್ವಜನಿಕ ಬಸ್‌ ಸಾರಿಗೆ ವ್ಯವಸ್ಥೆ === ನಗರದ ಬಸ್‌ ಸಾರಿಗೆ ವ್ಯವಸ್ಥೆಯು ಉತಃಮ ಮತ್ತದ್ದಾಗಿದೆ. ಬಸ್‌ ಸಾರಿಗೆ ವ್ಯವಸ್ಥೆಯನ್ನು ಸಂಸ್ತೆಯು ನೊಡಿಕೊಳುತ್ಹಿದೆ, === ರೈಲು ಸಂಪರ್ಕ === ದೇಶದಲ್ಲಿ ರೈಲು ಸಂಪರ್ಕ ಇನ್ನು ಇಲ್ಲ ಆದರೆ ಇತರ ಗಲ್ಫ್ ದೇಶಗಳನ್ನು ಸಂಪರ್ಕಿಸುವ ಯೋಜನೆ ಅಭಿವ್ರದ್ಧಿಯಲ್ಲಿದೆ. === ವಿಮಾನ ನಿಲ್ದಾಣ === ಬಹ್ರೆನ್ ಅಂತರರಾಷ್ಟ್ರೀಯ ವಿಮಾನನಿಲ್ದಾಣವು ನಗರದ ಉಪನಗರವಾದ ಮುಹರ್ರಕ್ ದ್ವೇಪದಲ್ಲಿದೆ. ಗಲ್ಫ್ ಐರ್ ಲೈನ್ಸ್ನ ಕೆಂದ್ರ ಈ ನಿಲ್ದಾಣವಾಗಿದೆ. ಬಹ್ರೆನ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದಿಂದ ಪ್ರಪಂಚದ ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳಿಗೆ ಸಂಪರ್ಕ ವ್ಯವಸ್ಥೆಇದೆ. == ಶಿಕ್ಷಣ == ಮನಾಮದಲ್ಲಿ ಬಹಳ ಶಿಕ್ಷಣಕೆಂದ್ರಗಳು ಸ್ಥಾಪಿತವಾಗಿವೆ. == ಹವಾಗುಣ == ಮನಾಮದ ಹವಾಗುಣ ಶಾಖದಿಂದ ಕೂಡಿರುವ ಹಾಗೂ ಶುಷ್ಕ ಹವಾಗುಣವನ್ನು ಹೊಂದಿದೆ. ಮನಾಮದ ಬೇಸಿಗೆ ಕಾಲವು ವಿಪರೀತ ಬೇಗೆಯದಾಗಿದ್ದು ಸುಮಾರು ೪೮ °Cನಷ್ಟು ಎರಿಕೆಯಾಗುವುದು ಇದೆ ಹಾಗು ಹಠಾತ್ತಾಗಿ ೩೦° ಗೆ ಇಳಿಕೆಯಾಗುವುದೂ ಇದೆ. . ಚಳಿಗಾಲವೂ ಅಲ್ಪಾವಧಿಯದಾಗಿದ್ದು ಸುಮಾರು ೩೫° ಯಿಂದ ೧೪° ವರೆಗಿನ ತಾಪಮಾನವಿರುವುದು. == ಉಲ್ಲೇಖಗಳು ==