ಮಮ್ಮುಟ್ಟಿ' (ಮಲಯಾಳಂ:മമ്മൂട്ടി) (ಜನನ ಮುಹಮ್ಮದ್ ಕುಟ್ಟಿ' 1953 ಸೆಪ್ಟೆಂಬರ್ 7ರಂದು) ಭಾರತದ ನಟ ಮತ್ತು ನಿರ್ಮಾಪಕರಾಗಿದ್ದು, ಮುಖ್ಯವಾಗಿ ಮಲೆಯಾಳಂ ಸಿನೆಮಾ ದಲ್ಲಿ ತೊಡಗಿಕೊಂಡಿದ್ದಾರೆ. ಅವರು ಕೆಲವು ತಮಿಳು, ಹಿಂದಿ ಮತ್ತು ತೆಲುಗು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಮೂರು ದಶಕಗಳಿಗೂ ಹೆಚ್ಚಿನ ಕಾಲದ ಅವರ ವೃತ್ತಿಜೀವನದಲ್ಲಿ ಅವರು 300ಕ್ಕಿಂತ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ."ಶಿಕಾರಿ" ಹೆಸರಿನ ಕನ್ನಡ ಚಿತ್ರ ಇವರ ಮೊದಲ ಕನ್ನಡ ಚಲನಚಿತ್ರ . ಮಮ್ಮುಟ್ಟಿ ತಮ್ಮ ಸಾಧನೆಗಳಿಗಾಗಿ ಅನೇಕ ಪ್ರಮುಖ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಇವುಗಳಲ್ಲಿ ಮೂರು ರಾಷ್ಟ್ರೀಯ ಪ್ರಶಸ್ತಿಗಳು, ಏಳು ರಾಜ್ಯ ಪ್ರಶಸ್ತಿಗಳು ಮತ್ತು ಹತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಒಳಗೊಂಡಿವೆ. 1988ರಲ್ಲಿ ಭಾರತ ಸರ್ಕಾರವು ಭಾರತದ ಸಿನೆಮಾಕ್ಕೆ ಅವರು ನೀಡಿದ ಗಣನೀಯ ಕೊಡುಗೆಗಾಗಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ಮಮ್ಮುಟ್ಟಿ ಮಲಯಾಳಂ ಕಮ್ಯುನಿಕೇಷನ್ಸ್ ಅಧ್ಯಕ್ಷರು ಕೂಡ ಆಗಿದ್ದಾರೆ. ಇದು ಮಲಯಾಳಂ ಚಾನಲ್‌ಗಳಾದ ಕೈರಾಲಿ , ಪೀಪಲ್ . ಯನ್ನು ನಡೆಸುತ್ತಿದೆ. ಓದುಗರ ನಡುವೆ ನಡೆಸಿದ ಸಮೀಕ್ಷೆಯಲ್ಲಿ ವನಿತಾ ನಿಯತಕಾಲಿಕೆ ಮಮ್ಮುಟ್ಟಿಯನ್ನು ಕೇರಳದಲ್ಲಿ ಅತೀ ಲೈಂಗಿಕ ಆಕರ್ಷಣೆಯ ನಟ ಎಂದು ಆಯ್ಕೆ ಮಾಡಿದೆ. ಮಮ್ಮುಟ್ಟಿ ಅಕ್ಷಯ ಯೋಜನೆಯ ಸದ್ಭಾವನೆಯ ರಾಯಭಾರಿ == ಕುಟುಂಬ ಮತ್ತು ಆರಂಭಿಕ ಜೀವನ == ಮಮ್ಮುಟ್ಟಿ ಅವರು ಭಾರತದ ಕೇರಳ ರಾಜ್ಯದ ಕೊಟ್ಟಾಯಂ ಜಿಲ್ಲೆಯ ವೈಕೋಮ್ ಬಳಿಯ ಚೆಂಪುವಿನಲ್ಲಿ ಹುಟ್ಟಿ ಬೆಳೆದರು. ಮಧ್ಯಮ ವರ್ಗದ ಮುಸ್ಲಿಂ ಕುಟುಂಬದಲ್ಲಿ ಅವರು ಹುಟ್ಟಿದರು. ಅವರು ಕುಟುಂಬದ ಹಿರಿಯ ಪುತ್ರರಾಗಿದ್ದರು. ಅವರ ತಂದೆ ಇಸ್ಮೇಲ್ ಕೃಷಿಕರಾಗಿದ್ದು ಅವರ ತಾಯಿ ಫಾತಿಮಾ ಗೃಹಿಣಿಯಾಗಿದ್ದಾರೆ. ಅವರು ಪ್ರೌಢಶಾಲೆ(ಪದವಿ-ಪೂರ್ವ)ಯ ಶಿಕ್ಷಣವನ್ನು ಕೊಚ್ಚಿಯ ಮಹಾರಾಜ ಕಾಲೇಜಿನಲ್ಲಿ ಮುಗಿಸಿದರು. ನಂತರ ಅವರು ಎರ್ನಾಕುಲಂ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಶಿಕ್ಷಣವನ್ನು ಅಧ್ಯಯನ ಮಾಡಿದರು. ಮಂಜೇರಿಯಲ್ಲಿ ಅವರು ಎರಡು ವರ್ಷಗಳ ಕಾಲ ಕಾನೂನು ಅಭ್ಯಾಸ ಮಾಡಿದರು. ಅವರು 1980ರಲ್ಲಿ ಸುಲ್ಫಾತ್ ಅವರನ್ನು ವಿವಾಹವಾದರು ಮತ್ತು ಅವರಿಗೆ ಪುತ್ರಿ ಸುರುಮಿ(ಜನನ 1982 )ಮತ್ತು ಪುತ್ರ ದುಲ್ಖಾರ್ ಸಲ್ಮಾನ್(ಜನನ 1986 ಇದ್ದಾರೆ. == ನಟನಾ ವೃತ್ತಿ ಬದುಕು == === ಆರಂಭಿಕ ವೃತ್ತಿಜೀವನದ ಹಾದಿ (1971–1980) === ಮಮ್ಮುಟ್ಟಿ ಅವರ ಪ್ರಥಮ ತೆರೆಯ ಮೇಲಿನ ಅಭಿನಯವು ಹೆಚ್ಚು ಮನ್ನಣೆ ಪಡೆಯದ 1971ರ ಚಿತ್ರ ಅನುಭವಾಂಗಳ್ ಪಾಲಿಚಕಲ್‌ ನ ಅಭಿನಯವಾಗಿದೆ. ಇದನ್ನು ಕೆ.ಎಸ್. ಸೇತುಮಾಧವನ್ ನಿರ್ದೇಶಿಸಿದ್ದರು. ಆಗ ಅವರು ಮಹಾರಾಜ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. 1973ರಲ್ಲಿ ಅವರು ಕಾಲಚಕ್ರಂ ನಲ್ಲಿ ಇನ್ನೊಂದು ಪಾತ್ರವನ್ನು ನಿರ್ವಹಿಸಿದರು. ಇದು ಕೆ.ನಾರಾಯಣನ್ ಅವರು ನಿರ್ದೇಶಿಸಿದ ಪ್ರೇಮ್ ನಜೀರ್ ಚಿತ್ರವಾಗಿದೆ. ತೆರೆಯ ಹೆಸರಾದ ಸಜಿನ್ ಎಂಬ ಹೆಸರಿನೊಂದಿಗೆ ಅವರು ನಟಿಸಿದರು. ನಂತರ ಆ ಹೆಸರನ್ನು ಕೈಬಿಟ್ಟರು. ಅವರ ಪ್ರಥಮ ಮುಖ್ಯ ಪಾತ್ರವನ್ನು 1979ರಲ್ಲಿ ದೇವಲೋಕಂ ನಲ್ಲಿ ವಹಿಸಿದಾಗ, ವೃತ್ತಿಪರ ಚಲನಚಿತ್ರ ಜೀವನವು ಆರಂಭವಾಯಿತು. ಇದನ್ನು ಹಿರಿಯ ನಿರ್ದೇಶಕ ಎಂ.ಟಿ. ವಾಸುದೇವನ್ ನಾಯರ್ ನಿರ್ದೇಶಿಸಿದ್ದರು. ಆದಾಗ್ಯೂ ಈ ಚಲನಚಿತ್ರವು ಬಿಡುಗಡೆಯನ್ನು ಕಾಣಲಿಲ್ಲ. === 1980ರ ದಶಕ === ಎಂ.ಆಜಾದ್ ನಿರ್ದೇಶನದ ಎಂ.ಟಿ.ವಾಸುದೇವನ್ ನಾಯರ್ ಚಿತ್ರಕಥೆ ಬರೆದ ವಿಲ್ಕಾನುಂಡು ಸ್ವಪ್ನಂಗಳ್ ಮಮ್ಮುಟ್ಟಿಯ ಬಿಡುಗಡೆಯಾದ ಪ್ರಥಮ ಚಿತ್ರ. ಕೆ.ಜಿ.ಜಾರ್ಜ್ ಅವರು ನಿರ್ದೇಶಿಸಿದ ಮೇಳಾ ಚಿತ್ರದಲ್ಲಿ ಸರ್ಕಸ್ ಕಲಾವಿದನ ಅವರ ಪಾತ್ರ ಮತ್ತು ಐ.ವಿ.ಶಶಿ ನಿರ್ದೇಶನದ ತ್ರಿಷ್ಣಾ ದಲ್ಲಿನ ಅವರ ಪಾತ್ರಗಳು ನಾಯಕನಟರಾಗಿ ಗಮನಸೆಳೆಯಿತು. 1982ರಲ್ಲಿ ಅವರು ಕೆ.ಜಿ. ಜಾರ್ಜ್ ನಿರ್ದೇಶನದ ಪತ್ತೇದಾರಿ ರೋಮಾಂಚಕಾರಿ ಕಥೆ ಯವನಿಕಾ (1982 )ದಲ್ಲಿ ಪೊಲೀಸ್ ಅಧಿಕಾರಿಯ ಅವರ ಪಾತ್ರ ನಿರ್ವಹಣೆಯಿಂದ ಮಮ್ಮುಟ್ಟಿ ಕಠಿಣ ಪೊಲೀಸ್ ಅಧಿಕಾರಿಯ ಪಾತ್ರವಹಿಸುವ ಪರಂಪರೆ ಆರಂಭಕ್ಕೆ ದಾರಿಕಲ್ಪಿಸಿತು. ಮುಂಬರುವ ವರ್ಷಗಳಲ್ಲಿ ಅವರು ಅನೇಕ ಸಾಹಸ ಮತ್ತು ಪತ್ತೇದಾರಿ ರೋಮಾಂಚಕಾರಿ ಚಿತ್ರಗಳಲ್ಲಿ ಈ ಪಾತ್ರವನ್ನು ಅಭಿನಯಿಸಿದರು. 1981ರಲ್ಲಿ ಅವರು ಅಹಿಂಸಾ ದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ವಿಭಾಗದಲ್ಲಿ ತಮ್ಮ ಪ್ರಥಮ ರಾಜ್ಯ ಪ್ರಶಸ್ತಿಯನ್ನು ಗಳಿಸಿದರು. 1980ರ ದಶಕದ ಮಧ್ಯಾವಧಿಯಲ್ಲಿ ಅವರು ಪದ್ಮರಾಜನ್‌ರವರ ಕೂಡೆವಿಡೆ ಮತ್ತು ಜೋಷಿಯವರ ಆ ರಾತ್ರಿ ಚಿತ್ರಗಳಲ್ಲಿ ಅಭಿನಯಿಸಿದರು. ಎಂ.ಟಿ.ವಾಸುದೇವನ್ ನಾಯರ್ ಚಿತ್ರಕಥೆ ಬರೆದ ಆಲ್‌ಕೂತತಿಲ್ ತನಿಯೆ ಮತ್ತು ಆದಿಯೋಳುಕ್ಕುಕಳ್ ಚಿತ್ರಗಳಲ್ಲಿ ಅವರ ಅಭಿನಯವು ಗುಣಮಟ್ಟದ ನಟರಾಗಿ ಅವರನ್ನು ಸ್ಥಿರಗೊಳಿಸಿತು. 1982ರಿಂದ 1986ರವರೆಗಿನ ಅವರ ಐದು ವರ್ಷಗಳ ಕಾಲದಲ್ಲಿ ಅವರು ನಾಯಕನಟರಾಗಿ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಎಂ.ಟಿ.ವಾಸುದೇವನ್ ನಾಯರ್ ಚಿತ್ರಕತೆ ಮತ್ತು ಐ.ವಿ.ಶಶಿ ನಿರ್ದೇಶನದ ಆದಿಯೋಳುಕ್ಕುಕಳ್‌ ನಲ್ಲಿನ ಕರುಣನ್ ಪಾತ್ರದಿಂದ ಅತ್ಯುತ್ತಮ ನಟ ವಿಭಾಗದಲ್ಲಿ ಅವರಿಗೆ ರಾಜ್ಯ ಪ್ರಶಸ್ತಿ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು. ಮಮ್ಮುಟ್ಟಿ ಅವರು ಬಾಲು ಮಹೇಂದ್ರ ನಿರ್ದೇಶಿಸಿದ ಯಾತ್ರಾ ಚಿತ್ರಕ್ಕಾಗಿ ರಾಜ್ಯ ವಿಶೇಷ ತೀರ್ಪುಗಾರ ಪ್ರಶಸ್ತಿ ಮತ್ತು ಅತ್ಯುತ್ತಮ ನಟ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅದರಲ್ಲಿ ಅವರು ಅರಣ್ಯಾಧಿಕಾರಿಯ ಪಾತ್ರವನ್ನು ವಹಿಸಿದ್ದರು. 80ರ ದಶಕದ ಇತರೆ ಚಲನಚಿತ್ರಗಳು ನಿರಾಕ್ಕೂಟ್ಟು (1985 ), ನಿವ್ ಡೆಲ್ಲಿ(1987 ) ಮತ್ತು ತನಿವರತನಂ(1987 ). === 1980 ಮತ್ತು 1990ರ ದಶಕದ ಕೊನೆ === 1988ರಲ್ಲಿ ಮಮ್ಮುಟ್ಟಿ ಒರು ಡೈರಿ ಕುರಿಪ್ಪು ವಿನಲ್ಲಿ ಕಾಣಿಸಿಕೊಂಡರು. ಅದರ ಹಿಂದೆಯೇ ಇನ್ನೂ ಮೂರು ಹತ್ಯೆ ನಿಗೂಢತೆಯ ಉತ್ತರಭಾಗಗಳನ್ನು ಅದೇ ಪಾತ್ರಗಳೊಂದಿಗೆ ನಿರ್ಮಿಸಲಾಯಿತು: ಜಾಗೃತಾ (1989), ಸೇತುರಾಂ ಐಯರ್ (2004) ಮತ್ತು ನೆರಾರಿಯನ್ .. (2005). ಎಲ್ಲಾ ಚಿತ್ರಗಳನ್ನು ಕೆ.ಮಧು ನಿರ್ದೇಶಿಸಿದರು. ಎಸ್.ಎನ್.ಸ್ವಾಮಿ ಚಿತ್ರಕಥೆ ಬರೆದಿದ್ದು, ಮಮ್ಮುಟ್ಟಿ ಸೇತುರಾಂ ಐಯರ್ ಪಾತ್ರವನ್ನು ನಿರ್ವಹಿಸಿದರು. ಎಂ.ಟಿ.ವಾಸುದೇವನ್ ನಾಯರ್ ಅವರ ಎರಡು ಚಿತ್ರಗಳಲ್ಲಿ ಮಮ್ಮುಟ್ಟಿ ನಟಿಸಿದ್ದಾರೆ. ಒಂದು ಚಿತ್ರ ಅಕ್ಷರಾಂಗಳ್ ನ್ನು . . ಶಶಿನಿರ್ದೇಶಿಸಿದರು. ಇನ್ನೊಂದು ಚಿತ್ರವು ಸುಕೃತಂ ಹರಿಕುಮಾರ್ ನಿರ್ದೇಶಿಸಿದರು. ಮಮ್ಮುಟ್ಟಿ ಚಿತ್ರ ಒರು ವಡಕ್ಕನ್ ವೀರಗಥಾ ದಲ್ಲಿ ಅಭಿನಯಿಸಿದರು. ಇದನ್ನು ಟಿ. ಹರಿಹರನ್ ನಿರ್ದೇಶಿಸಿದ್ದು, ಎಂ. ಟಿ. ವಾಸುದೇವನ್ ನಾಯರ್ಚಿತ್ರಕಥೆ ಬರೆದಿದ್ದಾರೆ. ಅವರ ವಿಶಿಷ್ಟ ಪರಾಕ್ರಮದಿಂದ ಕೂಡಿರುವ, ಆದರೆ ಸಂದರ್ಭಗಳ ಸುಳಿಗೆ ಸಿಕ್ಕಿ ಹೆಸರು ಕೆಡಿಸಿಕೊಂಡ ಚೆಕಾವರ್ (ಬಾಡಿಗೆ ಹೋರಾಟಗಾರ) ಚಿತ್ರಣವು ಅತ್ಯುತ್ತಮ ನಟನಿಗಿರುವ ರಾಷ್ಟ್ರೀಯ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದುಕೊಟ್ಟಿತು. ಅಡೂರ್ ಗೋಪಾಲಕೃಷ್ಣ ನಿರ್ದೇಶನದ ಮಥಿಲುಕಾಲ್‌ ನಲ್ಲಿ ಮಮ್ಮುಟ್ಟಿ ಅಭಿನಯವನ್ನು ಕೂಡ ಪ್ರಶಸ್ತಿಗಾಗಿ ಪರಿಗಣಿಸಲಾಗಿತ್ತು. ಐ. ವಿ. ಶಶಿ ನಿರ್ದೇಶನದ ಮೃಗಯಾ ದಲ್ಲಿ ಬೇಟೆಗಾರ ವರುಣ್ಣಿ ಪಾತ್ರ ಮತ್ತು ಇನ್ನೊಂದು ಚಿತ್ರ ಮಹಾಯಾನಂ ಕೂಡ ರಾಜ್ಯ ಪ್ರಶಸ್ತಿಗೆ ಪರಿಗಣಿಸಲಾಗಿತ್ತು. ಮಮ್ಮುಟ್ಟಿ ಅಮರಮ್‌ ನ ಅಭಿನಯಕ್ಕಾಗಿ ಫಿಲಂಫೇರ್ ಪ್ರಶಸ್ತಿಯನ್ನು ಗೆದ್ದಿದ್ದು, ಇದನ್ನು ಭರತನ್ ನಿರ್ದೇಶಿಸಿದ್ದಾರೆ. ಮಮ್ಮುಟ್ಟಿ ತಮ್ಮ ಎರಡನೇ ರಾಷ್ಟ್ರೀಯ ಪ್ರಶಸ್ತಿಯನ್ನು ಅಡೂರ್ ಗೋಪಾಲಕೃಷ್ಣನ್ರವರ ವಿಧೇಯನ್ ಮತ್ತು ಟಿವಿ ಚಂದ್ರನ್ಅವರ ಪೊಂಥನ್ ಮಾದಾ ಅಭಿನಯಗಳಿಗಾಗಿ ಸ್ವೀಕರಿಸಿದರು. ಎರಡೂ ಚಿತ್ರಗಳ ಪಾತ್ರಗಳಿಗಾಗಿ ಅವರು ರಾಜ್ಯ ಪ್ರಶಸ್ತಿಯನ್ನು ಕೂಡ ಸ್ವೀಕರಿಸಿದರು. ಕೊಚಿನ್ ಹನೀಫಾ ನಿರ್ದೇಶನದ ವಾತ್ಸಲ್ಯಂ ನಲ್ಲಿ ಅವರ ಅಭಿನಯವನ್ನು ಕೂಡ ರಾಜ್ಯ ಪ್ರಶಸ್ತಿಗಾಗಿ ಪರಿಗಣಿಸಲಾಗಿತ್ತು. 1999ರಲ್ಲಿ ಮಮ್ಮುಟ್ಟಿ ತಮ್ಮ ಮೂರನೇ ರಾಷ್ಟ್ರೀಯ ಪ್ರಶಸ್ತಿಯನ್ನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಎಂಬ ಇಂಗ್ಲೀಷ್ ಭಾಷೆಯ ಚಲನಚಿತ್ರಕ್ಕಾಗಿ ಗೆದ್ದುಕೊಂಡರು. ಇದು ಅಂಬೇಡ್ಕರ್, ಜೀವನಚರಿತ್ರೆಯನ್ನು ಒಳಗೊಂಡಿದ್ದು, ಜಬ್ಬಾರ್ ಪಟೇಲ್ನಿರ್ದೇಶಿಸಿದ್ದಾರೆ. ಚಲನಚಿತ್ರವನ್ನು ಭಾರತದ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಮತ್ತು ಸಾಮಾಜಿಕ ನ್ಯಾಯ ಸಚಿವಾಲಯಯವು ಪ್ರಾಯೋಜಿಸಿದೆ. === ಪ್ರಸಕ್ತ ಯುಗ, 2000–ಇಂದಿನವರೆಗೆ === 2000ದ ಪೂರ್ವದಲ್ಲಿ, ಮಮ್ಮುಟ್ಟಿ ಸಿದ್ಧಿಖಿಯವರ ಕ್ರೋನಿಕ್ ಬ್ಯಾಚೆಲರ್ , ಕೆ.ಮಧುರವರ ಸೇತುರಾಮ ಅಯ್ಯರ್ ಮತ್ತು ಬ್ಲೆಸ್ಸಿಯವರಕಾಜ್‌ಚಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. 2004ರಲ್ಲಿ ಅವರು ರಾಜ್ಯ ಪ್ರಶಸ್ತಿಯನ್ನು ಕಾಜ್‌ಚಾ ದಲ್ಲಿ ನಿರ್ವಾಹಕ ಮಾಧವನ್ ಚಿತ್ರಣಕ್ಕಾಗಿ ಗೆದ್ದಿದ್ದಾರೆ. ಎರಡು ಪ್ರಮುಖ ಗಲ್ಲಾಪೆಟ್ಟಿಗೆ ಯಶಸ್ವಿ ಚಿತ್ರಗಳಾದ ತೊಮ್ಮನುಂ ಮಕ್ಕಳುಂ ಮತ್ತು ರಾಜಾಮಾಣಿಕ್ಯಂ ನೊಂದಿಗೆ ವರ್ಷ 2005 ಅವರ ಪಾಲಿಗೆ ಅತ್ಯಂತ ಯಶಸ್ವಿಯೆಂದು ಸಾಬೀತಾಯಿತು. ಅನ್ವರ್ ರಷೀದ್ ಚೊಚ್ಚಲ ನಿರ್ದೇಶನದ ರಾಜಾ ಮಾಣಿಕ್ಯಂ ಆ ಕಾಲದ ಮಲಯಾಳಂ ಸಿನೆಮಾದ ಅತ್ಯಂತ ಯಶಸ್ವಿ ಚಿತ್ರವಾಯಿತು. 2000ಮಧ್ಯಾವಧಿಯ ಇತರೆ ಚಿತ್ರಗಳು ಜಾನಿ ಆಂಟೋನಿಯವರ ಥುರುಪ್ಪು ಗುಲಾನ್ (2006), ಶಫಿಯವರ ಮಾಯಾವಿ (2007), ಅಮುಲ್ ನೀರದ್ರವರ ಬಿಗ್ (2007), ಅನ್ವರ್ ರಷೀದ್ಅವರ ಅಣ್ಣನ್ ತಂಬಿ (2008)ಮತ್ತು ಜಯರಾಜ್ರವರ ಲೌಡ್‌ಸ್ಪೀಕರ್ (2009). 2009 ಅಕ್ಟೋಬರ್‌ನಲ್ಲಿ ಪಜಸಿ ರಾಜಾ , Tಹರಿಹರನ್ ನಿರ್ದೇಶನದಲ್ಲಿ ಮತ್ತು ಎಂ. ಟಿ. ವಾಸುದೇವನ್ ನಾಯರ್ ಚಿತ್ರಕಥೆಯೊಂದಿಗೆ ಬಿಡುಗಡೆಯಾಯಿತು. ಮಲೆಯಾಳಂ ಸಿನೆಮಾ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಗಳಿಕೆಯ ಚಲನಚಿತ್ರ ಎಂದು ಇದು ಹೆಸರಾಗಿದೆ. 2009ರಲ್ಲಿ ಅವರು ತಮ್ಮ ಐದನೇ ಅತ್ಯುತ್ತಮ ನಟನೆಗೆ ರಾಜ್ಯ ಪ್ರಶಸ್ತಿಯನ್ನು ಪಾಲೇರಿ ಮಾಣಿಕ್ಯಂ ಅಭಿನಯಕ್ಕಾಗಿ ಗೆದ್ದುಕೊಂಡರು. ಮಮ್ಮುಟ್ಟಿಯವರನ್ನು 2009ರಲ್ಲಿ ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. ಆದರೆ ಅವರು ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಅಮಿತಾಬ್ ಬಚ್ಚನ್ ಅವರಿಗೆ ಪ್ರಶಸ್ತಿಯನ್ನು ಕಳೆದುಕೊಂಡರು. ಬಚ್ಚನ್ ಅವರಿಗೆ ಪ್ರಶಸ್ತಿ ನೀಡುವ ತೀರ್ಪುಗಾರರ ನಿರ್ಧಾರವನ್ನು ಕುಟ್ಟಿ ಶ್ರಾಂಕ್ (2009ನೇ ಸಾಲಿನ ಅತ್ಯುತ್ತಮ ಚಿತ್ರ ಪ್ರಶಸ್ತಿ ವಿಜೇತ)ನ ನಿರ್ದೇಶಕ ಶಾಜಿ ಎನ್.ಕರುಣ್ ಮತ್ತು ಪಾಲೇರಿ ಮಾಣಿಕ್ಯಂ ನಿರ್ದೇಶಕ ರಂಜಿತ್ ಟೀಕಿಸಿದ್ದಾರೆ. ಅವರ ಇತ್ತೀಚಿನ ಬಿಡುಗಡೆ ಪ್ರಾಂಚಿಯೇತನ್ ಎಂಡ್ ದಿ ಸೇಂಟ್ ಚಿತ್ರವನ್ನು ರಂಜಿತ್ನಿರ್ದೇಶಿಸಿದ್ದಾರೆ. ಇದು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಯಶಸ್ವಿಯಾಯಿತು . == ಇತರ ಭಾಷೆಗಳ ಚಿತ್ರಗಳು == ಮಮ್ಮುಟ್ಟಿ ಅವರು ಕೆಲವು ಮಲೆಯಾಳಂಯೇತರ ಚಿತ್ರಗಳಲ್ಲಿ ನಟಿಸಿದ್ದಾರೆ. ಇವುಗಳಲ್ಲಿ ತಮಿಳು, ತೆಲುಗು, ಹಿಂದಿ, ಕನ್ನಡ ಮತ್ತುಇಂಗ್ಲೀಷ್ಚಿತ್ರಗಳು ಸೇರಿವೆ. 1989ರಲ್ಲಿ ಮೌನಮ್ ಸಮ್ಮತಂ ಮೂಲಕ ತಮಿಳಿಗೆ ಚೊಚ್ಚಲ ಪ್ರವೇಶ ಮಾಡಿದರು. ಇದನ್ನು ಕೆ. ಮಧು ನಿರ್ದೇಶಿಸಿದ್ದಾರೆ. ಅವರು ಕೆ. ಬಾಲಚಂದರ್ (ಅಳಗನ್ ), ಮಣಿ ರತ್ನಂ (ತಲಪಥಿ ), ಮತ್ತು ರಾಜೀವ್ ಮೆನನ್ (' ಕಂಡುಕೊಂಡೈನ್ ಕಂಡುಕೊಂಡೈನ್/4}) ನಿರ್ದೇಶಕರು ಒಳಗೊಂಡ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕಿಲಿಪೇಚ್ಚು ಕೆಕ್ಕಾವ (1993),ಫಾಜಿಲ್‌ ನಿರ್ದೇಶಿಸಿದ್ದು, ಮಮ್ಮುಟ್ಟಿ ಸಾಹಸಪ್ರಣಯ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕೆ. ವಿಶ್ವನಾಥ್ಅವರ ತೆಲುಗು ಚಿತ್ರ ಸ್ವಾತಿ ಕಿರಣಂ (1992)ನಲ್ಲಿ ಅನಂತ ಶರ್ಮಾ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು 2012ರಲ್ಲಿ ಕನ್ನಡ ಚಿತ್ರ ಶಿಕಾರಿ ಯಲ್ಲಿ ಅಭಿನಯಿಸಿದ್ದಾರೆ ಅವರು 1989ರಲ್ಲಿ ಬಿಡುಗಡೆಯಾದ ತ್ರಿಯಾತ್ರಿ ಮೂಲಕ ಹಿಂದಿ ಚಲನಚಿತ್ರಗಳಿಗೆ ಚೊಚ್ಚಲ ಪ್ರವೇಶ ಮಾಡಿದರು. ಆದರೆ ನಾಯಕನ ಪಾತ್ರದಲ್ಲಿ ಅವರ ಪ್ರಥಮ ಚಿತ್ರವು ದರ್ತಿಪುತ್ರ ಆಗಿತ್ತು. ಅವರು ಜೀವನಚರಿತ್ರೆಯ ಚಿತ್ರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನಲ್ಲಿ ನಟಿಸಿದರು. ಇಂಗ್ಲೀಷ್ ಭಾಷೆಯಲ್ಲಿರುವ ಇದನ್ನು ಜಬ್ಬಾರ್ ಪಟೇಲ್ ನಿರ್ದೇಶಿಸಿದರು. ಅವರು ಸೌವ್ ಜೂಟ್ ಏಕ್ ಸಚ್ (2004) ಚಿತ್ರದಲ್ಲಿ ಕೂಡ ಅಭಿನಯಿಸಿದ್ದಾರೆ. ದುಬೈನಲ್ಲಿ ನಡೆದ 2006ನೇ ಪ್ರಶಸ್ತಿಗಳ ಸಮಾರಂಭದಲ್ಲಿ, ಪ್ರಶಸ್ತಿಗಳ ಸಂಘಟಕರು ದಕ್ಷಿಣ ಭಾರತ ಚಲನಚಿತ್ರವನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದ್ದಾರೆಂದು ಬಹಿರಂಗವಾಗಿ ಟೀಕಿಸಿದರು.ಬಾಲಿವುಡ್ ಚಿತ್ರೋದ್ಯಮವು ತನ್ನನ್ನು ಅಂತಾರಾಷ್ಟ್ರೀಯ ಮಟ್ಟದ್ದು ಎಂದು ಕರೆದುಕೊಳ್ಳುವುದಕ್ಕೆ ಮುಂಚಿತವಾಗಿ ದಕ್ಷಿಣ ಭಾರತ ಚಲನಚಿತ್ರೋದ್ಯಮದ ಸ್ಪರ್ಧೆಯನ್ನು ಎದುರಿಸಬೇಕು ಎಂದು ಅವರು ಹೇಳಿದರು. == ಮಾನವೀಯತೆಯ ಕಾರ್ಯಗಳು == ಮಮ್ಮುಟ್ಟಿ ಅವರು ಅರ್ಧ ಡಜನ್‌ಗೂ ಹೆಚ್ಚು ಜನೋಪಕಾರಿ ಯೋಜನೆಗಳಲ್ಲಿ ಒಳಗೊಂಡಿದ್ದು, ಅಗತ್ಯವಾದ ಜನರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿವೆ. === ನೋವು ಮತ್ತು ಉಪಶಮನ ಕೇಂದ್ರ === ಮಮ್ಮುಟ್ಟಿ ನೋವು ಮತ್ತು ಉಪಶಮನ ಆರೈಕೆ ಸೊಸೈಟಿಯ ಆಶ್ರಯದಾತರಾಗಿದ್ದಾರೆ. ಇದು ಕೇರಳದ ಧರ್ಮದತ್ತಿ ಸಂಸ್ಥೆ ಯಾಗಿದೆ. ವಿಷಮಾವಸ್ಥೆಯ ಕ್ಯಾನ್ಸರ್‌ಪೀಡಿತ ರೋಗಿಗಳ ಜೀವನ ಮಟ್ಟವನ್ನು ಸುಧಾರಿಸುವ ಗುರಿಯೊಂದಿಗೆ ಇದನ್ನು ಸ್ಥಾಪಿಸಲಾಗಿದೆ. ಭಾರತದ ಕೋಳಿಕೋಡ್‌ನಲ್ಲಿ ನೆಲೆಗೊಂಡಿರುವ ನೋವು ಮತ್ತು ಉಪಶಮನ ಆರೈಕೆ ಕೇಂದ್ರದ ಇಂಧನ ಮತ್ತು ಎಂಜಿನ್ ಅವರಾಗಿದ್ದಾರೆ. ಕೇರಳದಾದ್ಯಂತ ಕ್ಯಾನ್ಸರ್‌ನಿಂದ ನರಳುವ ಜನರಿಗೆ ನೋವು ಮತ್ತು ಉಪಶಮನದ ಆರೈಕೆ ನೀಡುವ ವಿನೂತನ ಯೋಜನೆಯನ್ನು ಮಮ್ಮುಟಿ ಮಂಡಿಸಿದ್ದಾರೆ. === ಜೀವನ್ ಜ್ಯೋತಿ === ಮಮ್ಮುಟ್ಟಿ ಅವರು ಸಾಮಾಜಿಕ ಕಾರ್ಯದ ಯೋಜನೆ ಜೀವನ್ ಜ್ಯೋತಿಯ ರಾಯಭಾರಿಯಾಗಿದ್ದಾರೆ. ಯಾವುದೇ ನೇತ್ರ ರೋಗಗಳಿಗೆ ಹೃದಯಸಂಬಂಧಿ ರೋಗಗಳಿಗೆ, ಅಸ್ಥಿಚಿಕಿತ್ಸೆ ಸಂಬಂಧಿ ರೋಗಗಳಿಗೆ ಪಿತ್ತಜನಕಾಂಗ ರೋಗಗಳು, ಮೂತ್ರಪಿಂಡ ವೈಫಲ್ಯಗಳು, ಹೇಮೋಫಿಲಿಯ ರೋಗಗಳು ಅಥವಾ ಸಮಸ್ಯೆಗಳಿಗೆ ಚಿಕಿತ್ಸೆ ಅರಸುವ ಜನರಿಗೆ ನೆರವಾಗುವ ಗುರಿಯನ್ನು ಹೊಂದಿದೆ. === ಸ್ಟ್ರೀಟ್ ಇಂಡಿಯ ಮೂವ್‌ಮೆಂಟ್ === ಮಮ್ಮುಟ್ಟಿ ಅವರು ಧರ್ಮದತ್ತಿ ಯೋಜನೆ "ಸ್ಟ್ರೀಟ್ ಇಂಡಿಯ ಮೂವ್‌ಮೆಂಟ್" ಸದ್ಭಾವನೆ ರಾಯಭಾರಿಯಾಗಿದ್ದು, ಮಕ್ಕಳ ಭಿಕ್ಷಾಟನೆ ಮತ್ತು ಮಕ್ಕಳ ದುಡಿಮೆಯ ನಿರ್ಮೂಲನದ ಗುರಿಯನ್ನು ಹೊಂದಿದೆ. ಅವರು ಈ ಅಭಿಯಾನದ ಚಟುವಟಿಕೆಗಳನ್ನು ಉತ್ತೇಜಿಸಿದ್ದು, ಇದು ಮಕ್ಕಳನ್ನು ನೋಡಿಕೊಳ್ಳುವ ಅನಾಥಾಲಯಗಳು ಮತ್ತು ಸಂಸ್ಥೆಗಳ ಜತೆ ಜಾಲಗಳನ್ನು ಹೊಂದಿದೆ. === ಕಾಜ್‌ಚಾ- ಉಚಿತ ಕಣ್ಣಿನ ಆರೈಕೆ ಮತ್ತು ಚಿಕಿತ್ಸೆ === ಕಾಜ್‌ಚಾ ಉಚಿತ ಕಣ್ಣಿನ ಆರೈಕೆ ಮತ್ತು ಚಿಕಿತ್ಸೆ ನೀಡಲು ಮಮ್ಮುಟ್ಟಿ ಅಭಿಮಾನಿಗಳ ಕಲ್ಯಾಣ ಸಂಘ ಮತ್ತು ಮಮ್ಮುಟ್ಟಿ ಟೈಮ್ಸ್ ಸಂಘಟಿಸಿದ ಸಾಹಸವಾಗಿದೆ. ಲಿಟರ್ ಫ್ಲವರ್ ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರ ಮತ್ತು ಕೇರಳದ ಕಣ್ಣಿನ ಬ್ಯಾಂಕ್ ಅಸೋಸಿಯೇಷನ್ ಸಹಯೋಗದೊಂದಿಗೆ ಇದನ್ನು ಸಂಘಟಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಮುಖ ಚಟುವಟಿಕೆಯು ಮಕ್ಕಳಿಗೆ ಉಚಿತ ಕನ್ನಡಕಗಳ ವಿತರಣೆ ಮಾಡುವುದಾಗಿದೆ. ಈ ಉದ್ದೇಶಕ್ಕೆ ಭಾರತದ ರಾಷ್ಟ್ರಪತಿ ಕಚೇರಿಯಿಂದ ಸ್ವೀಕರಿಸಿದ ವಿಶೇಷ ನಿಧಿಯನ್ನು ಬಳಸಲಾಗುವುದು. ಈ ಯೋಜನೆಗೆ ಸಂಬಂಧಿಸಿದಂತೆ ವಿವಿಧ ಸ್ಥಳಗಳಲ್ಲಿ ಉಚಿತ ಕಣ್ಣಿನ ಚಿಕಿತ್ಸಾ ಶಿಬಿರಗಳನ್ನು ನಡೆಸಲಾಯಿತು. === ಆಹಾರ ಮತ್ತು ಸಾಮಗ್ರಿಗಳ ದಾನ === 2007ರ ಓಣಂ ಸಂದರ್ಭದಲ್ಲಿ, ಮಮ್ಮುಟ್ಟಿ ಕೊಟ್ಟಾಯಂ ಜಿಲ್ಲೆಯ ಕಾಂಜಿರಪಲ್ಲಿ ಬಳಿಯ ಪರತ್ತೋಡುನ ಸಾವಿರಾರು ಕುಟುಂಬಗಳಿಗೆ ಆಹಾರಪದಾರ್ಥಗಳನ್ನು ಉಚಿತವಾಗಿ ಹಂಚಿದರು. ಕೇರಳದ ಈ ಗ್ರಾಮವು ಚಿಕನ್‌ಗುನ್ಯಾದಿಂದ ಪೀಡಿತವಾಗಿತ್ತು. ರಾಜ್ಯದಲ್ಲಿ ಹೆಚ್ಚಿನ ಜೀವಗಳನ್ನು ಬಲಿತೆಗೆದುಕೊಂಡ ಈ ಗ್ರಾಮವು ರೋಗದಿಂದ ತೀವ್ರ ಪೀಡಿತವಾಗಿತ್ತು. ಪತ್ರಿಕಾಗೋಷ್ಠಿಯೊಂದರಲ್ಲಿ ಮಮ್ಮುಟ್ಟಿ ಅದಕ್ಕೆ ಪ್ರೇರಣೆಗಳನ್ನು ವಿವರಿಸಿದರು. === ಅಕ್ಷಯ: ಮಾಹಿತಿ ತಂತ್ರಜ್ಞಾನ ಪ್ರಸಾರ === ಕೇರಳ ಸರ್ಕಾರದ ಮಾಹಿತಿ ತಂತ್ರಜ್ಞಾನ ಪ್ರಸಾರ ಯೋಜನೆಯಾದ ಅಕ್ಷಯಕ್ಕೆ ಮಮ್ಮುಟ್ಟಿ ಸದ್ಭಾವನೆ ರಾಯಭಾರಿಯಾಗಿದ್ದರು. ಅವರು 2006ರ ಫೆಬ್ರವರಿ 26ರಂದು ವಿಡಿಯೊ ಜಾಲದ ಕಾರ್ಯಕ್ರಮದ ಮೂಲಕ ಔಪಚಾರಿಕವಾಗಿ ಈ ಪಾತ್ರ ವಹಿಸಿದರು. ಈ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ಜಿಲ್ಲಾ ಮುಖ್ಯಕೇಂದ್ರಗಳಿಗೆ ಸಂಪರ್ಕ ಕಲ್ಪಿಸಲಾಗಿತ್ತು. ಮಮ್ಮುಟ್ಟಿ ಮುದ್ರಣ ಮತ್ತು ದೃಶ್ಯ ಮಾಧ್ಯಮದ ಜಾಹೀರಾತುಗಳಲ್ಲಿ ಮತ್ತು ಇತರೆ ಸಾರ್ವಜನಿಕ ವಸ್ತುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಈ ಅಭಿಯಾನದ ನೇತೃತ್ವ ವಹಿಸಿದರು. ಅದು ಅಕ್ಷಯ ಯೋಜನೆಯನ್ನು ಜನಸಾಮಾನ್ಯರಿಗೆ ತಲುಪಿಸಿತು. ಅವರು ವಿವರಿಸಿದ್ದು, == ದೂರದರ್ಶನದ ವೃತ್ತಿಜೀವನ == 2010ರಲ್ಲಿ ಮಮ್ಮುಟ್ಟಿ ಮಲಯಾಳಂ ಕಮ್ಯುನಿಕೇಷನ್ಸ್ ಅಧ್ಯಕ್ಷರಾಗಿದ್ದು, ಅದು ಕೈರಾಲಿ , ಪೀಪಲ್ ಮತ್ತು ಚಾನಲ್ ವಿಮುಂತಾದ ಮಲಯಾಳಂ ಚಾನಲ್‌ಗಳನ್ನು ನಡೆಸುತ್ತಿದೆ. ಅವರು ಟೆಲಿವಿಷನ್ ನಿರ್ಮಾಣ ಕಂಪೆನಿ ಮೆಗಾಬೈಟ್ಸ್‌ನ್ನು ರಚಿಸಿದರು. ಅದು ಕೆಲವು ಟೆಲಿವಿಷನ್ ಸರಣಿಗಳನ್ನು ನಿರ್ಮಿಸಿದೆ. ಅದರಲ್ಲಿ ಮೊದಲನೆಯದು 1990ರ ದಶಕದ ಕೊನೆಯ ಜ್ವಲಾಯಯ್ . ನಿರ್ಮಾಪಕರಾಗಿ ಇದು ಅವರ ಪ್ರಥಮ ಯೋಜನೆಯಾಗಿದೆ. ಜ್ವಲಾಯಯ್ ಮಲೆಯಾಳಂ ಟೆಲಿವಿಷನ್‌ನಲ್ಲಿ ಇತಿಹಾಸವನ್ನು ನಿರ್ಮಿಸಿತು. ಅವರು ಮಮ್ಮುಟ್ಟಿ ಟೆಕ್ನೊಟೈನ್‌ಮೆಂಟ್ ಎಂಬ ಹೆಸರಿನ ಚಲನಚಿತ್ರ ಹಂಚಿಕೆ ಕಂಪೆನಿಯನ್ನು ಕೂಡ ಆರಂಭಿಸಿದರು. ಅದು ಕೇರಳದಲ್ಲಿ ಕಾರ್ಮೆಘಮ್‌ ತಮಿಳು ಚಿತ್ರವನ್ನು ಹಂಚಿಕೆ ಮಾಡಿದೆ. ಹಂಚಿಕೆ ಹಕ್ಕುಗಳಿಂದ ಅದು ತನ್ನ ಪ್ರಥಮ ಪಾಲನ್ನು ಪಡೆಯಿತು. == ಇತರೆ ಚಟುವಟಿಕೆಗಳು == ಮಮ್ಮುಟ್ಟಿ 2006ರ ಅಕ್ಟೋಬರ್ 16ರಂದು ಕೇರಳ ಮೂಲದ ಸೌತ್ ಇಂಡಿಯನ್ ಬ್ಯಾಂಕ್‌ನ ಬ್ರಾಂಡ್ ರಾಯಭಾರಿಯಾದರು. ಅವರು ಕೇರಳ ವಾಲಿಬಾಲ್ ಲೀಗ್‌ನ ಬ್ರಾಂಡ್ ರಾಯಭಾರಿಯಾಗಿ ಕೂಡ ಕಾಣಿಸಿಕೊಂಡಿದ್ದಾರೆ. ಮಮ್ಮುಟ್ಟಿ ಮತ್ತು ದುಬೈ ಮೂಲದ ಉದ್ಯಮಿ ಯೂಸುಫ್ ಅಲಿ ದುಬೈ ಇಂಟರ್‌ನೆಟ್ ಸಿಟಿ () ಅಧಿಕಾರಿಗಳನ್ನು ಭೇಟಿ ಮಾಡಿ ಕೊಚ್ಚಿಯಲ್ಲಿ ಉದ್ದೇಶಿತ ಸ್ಮಾರ್ಟ್ ಸಿಟಿ ಯೋಜನೆಗೆ ಲಾಬಿ ಮಾಡಿದರು,. ಮಮ್ಮುಟ್ಟಿ ತಮ್ಮ ಪ್ರಥಮ ಪುಸ್ತಕ ಕಾ‌ಜ್‌ಚಾಪಾಡುನಲ್ಲಿ(ಬಹುಮಟ್ಟಿಗೆ "ದೃಷ್ಟಿಕೋನ" ಎಂದು ಅನುವಾದ),ವರ್ಷಗಳ ಕಾಲ ವಿವಿಧ ಪತ್ರಿಕೆಗಳಲ್ಲಿ ಅವರು ಬರೆದ ಸಣ್ಣ ಪ್ರಬಂಧಗಳ ಸಂಗ್ರಹವಾಗಿದೆ. == ಪ್ರಶಸ್ತಿಗಳು, ಗೌರವಗಳು ಮತ್ತು ಮನ್ನಣೆಗಳು == === ನಾಗರಿಕ ಗೌರವಗಳು === === ಗೌರವ ಪದವಿಗಳು === === ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು === === ಕೇರಳ ರಾಜ್ಯದ ಚಲನಚಿತ್ರ ಪ್ರಶಸ್ತಿಗಳು === === ಫಿಲ್ಮ್‌ಫೇರ್ ಪ್ರಶಸ್ತಿಗಳು === === ಚಿತ್ರ ವಿಮರ್ಶಕರ ಪ್ರಶಸ್ತಿಗಳು === === ಏಷ್ಯಾನೆಟ್ ಚಲನಚಿತ್ರ ಪ್ರಶಸ್ತಿಗಳು === === ವನಿತಾ ಪ್ರಶಸ್ತಿಗಳು === === ಇತರ ಪ್ರಮುಖ ಗೌರವಗಳು ಮತ್ತು ಮನ್ನಣೆಗಳು === === ಇತರೆ ಪ್ರಶಸ್ತಿಗಳು === == ಚಲನಚಿತ್ರಗಳ ಪಟ್ಟಿ == == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಮಮ್ಮುಟ್ಟಿಯ ಅಧಿಕೃತ ಜಾಲತಾಣ ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ [೧] ಮಮ್ಮುಟ್ಟಿಯ ವ್ಯಕ್ತಿಚಿತ್ರ MSIನಲ್ಲಿ ಮಮ್ಮುಟ್ಟಿ