ಮಲಾಣಾ ಭಾರತ ದೇಶದ ಹಿಮಾಚಲ ಪ್ರದೇಶ ರಾಜ್ಯದಲ್ಲಿರುವ ಒಂದು ಪ್ರಾಚೀನ ಹಳ್ಳಿ. ಕುಲ್ಲು ಕಣಿವೆಯ ಈಶಾನ್ಯಕ್ಕಿರುವ ಪಾರ್ವತಿ ಕಣಿವೆಯ ಪಕ್ಕದಲ್ಲಿರುವ ಮಲಾಣಾ ನಾಲಾದಲ್ಲಿರುವ ಈ ಏಕಾಂಗಿ ಹಳ್ಳಿಯು, ಬಾಹ್ಯ ಜಗತ್ತಿನಿಂದ ಪ್ರತ್ಯೇಕಿಸಲ್ಪಟ್ಟಿದೆ. ಚಂದ್ರಕಣಿ ಮತ್ತು ಡಿಯೋಟಿಬ್ಬ ಶಿಖರಗಳ ನೆರಳು ಈ ಹಳ್ಳಿಯನ್ನು ಆವರಿಸಿಕೋಂಡಿದೆ. ಧಾರಾಕಾರವಾಗಿ ಹರಿಯುವ ಮಲಾಣಾ ನದಿಯ ದೂರಸ್ಥ ಪ್ರಸ್ಥಭೂಮಿಯಲ್ಲಿ ನೆಲೆಸಿರುವ ಈ ಹಳ್ಳಿಯು ಸಮುದ್ರ ಮಟ್ಟದಿಂದ 2,652 (8,701 ) ಎತ್ತರದಲ್ಲಿದೆ. ತನ್ನದೆಯಾದ ಜೀವನಶೈಲಿ ಮತ್ತು ಸಾಮಾಜಿಕ ರಚನೆ ಹೊಂದಿರುವ ಮಲಾಣಾದ ಜನರು ತಮ್ಮ ಸಂಪ್ರಾದಾಯವನ್ನು ಕಠಿಣವಾಗಿ ಪಾಲಿಸುತ್ತಾರೆ. ಮಲಾಣಾ ಹಳ್ಳಿಯು : , ಮತ್ತು , . ಮುಂತಾದ ಹಲವಾರು ಸಾಕ್ಷ್ಯಚಿತ್ರಗಳ ಭಾಗವಾಗಿದೆ. ೧೯೬೧ರ ಜನಗಣತಿಯ ಪ್ರಕಾರ ಮಲಾಣಾ ಹಳ್ಳಿಯ ಸಂಪ್ರದಾಯಕ ಭಾಷೆ ಕನಶಿಯನ್ನು ಮಾತನಾಡುವವರ ಸಂಖ್ಯೆ ೫೬೩, ಆದರೆ ಇತ್ತಿಚಿನ ದಿನಗಳಲ್ಲಿ ಮಲಾಣಾದ ಒಟ್ಟು ಜನಸಂಖ್ಯೆ ೪೦ ವರ್ಷದಲ್ಲಿ ೩ ಪಟ್ಟು ಹೆಚ್ಚಿದೆ. === ದೇವಾಲಯಗಳು === ಈ ಹಳ್ಳಿಯಲ್ಲಿ ಹಲವಾರು ಪ್ರಾಚೀನ ದೇವಾಲಯಗಳು ಇವೆ. (೧) ಜಮ್ಲು ದೇವಾಲಯ,ಕಥ್ಕುನಿ ಶೈಲಿಯಲ್ಲಿ ನಿರ್ಮಾಣಾವಾಗಿದೆ (೨) ರುಕ್ಮಿನಿ ದೇವಾಲಯ. == ಮಲಾಣಾ ಕ್ರೀಮ್ == ಇದು ಬಹುತೇಕ ತೆರೆದ ರಹಸ್ಯವಾಗಿದ್ದು ಮಲಾಣಾ ಹಳ್ಳಿಯು ಈ ರಹಸ್ಯಕ್ಕೆ ಪ್ರಸಿದ್ದಿಯಾಗಿದೆ. ಮಲಾಣಾ ಹಳ್ಳಿಯು ಮಲಾಣಾ ಕ್ರೀಮ್ಗೆ ಪ್ರಸಿದ್ದಿಯಾಗಿದೆ. ಜಗತ್ತಿನೆಲ್ಲೆಡಿ ದೊರಕುವ ಹ್ಯಾಶ್ ಗಳಲ್ಲಿ ಮಲಾಣಾ ಕ್ರೀಮ್ ಅತ್ಯುತ್ತಮವಾದದ್ದು. == ಉಲ್ಲೇಖನಗಳು == == ಬಾಹ್ಯ ಸಂಪರ್ಕಗಳು == 2017-04-30 ವೇಬ್ಯಾಕ್ ಮೆಷಿನ್ ನಲ್ಲಿ. : 2017-05-31 ವೇಬ್ಯಾಕ್ ಮೆಷಿನ್ ನಲ್ಲಿ. 2016-03-03 ವೇಬ್ಯಾಕ್ ಮೆಷಿನ್ ನಲ್ಲಿ. ://..//tt1951087/