ಮಹಾಗನಿ ಮೂಲತಃ ಅಮೆರಿಕಾದ ಫ್ಲೋರಿಡ,ಜಮೈಕ,ಕ್ಯೂಬಪ್ರದೇಶಗಳ ಮರ.ಭಾರತದಲ್ಲಿ ಮೊದಲಿಗೆ ಕಲ್ಕತ್ತದ ರಾಯಲ್ ಬಟಾನಿಕಲ್ ಗಾರ್ಡನ್ಸ್ನಲ್ಲಿ ಬೆಳೆಸಿದರು. ಈಗ ಭಾರತದೆಲ್ಲೆಡೆ ಸಾಲು ಮರಗಳಾಗಿ,ಸಾಮಾಜಿಕ ಅರಣ್ಯ ಕಾರ್ಯಕ್ರಮದಡಿಯಲ್ಲಿ ಹಲವೆಡೆ ಬೆಳೆಸಿರುತ್ತಾರೆ. == ಸಸ್ಯಶಾಸ್ತ್ರೀಯ ವರ್ಗೀಕರಣ == ಇದು ಮೆಲಿಯೆಸಿ ಕುಟುಂಬಕ್ಕೆ ಸೇರಿದ್ದು,ಸ್ವೆಟೆನಿಯ ಮಹಾಗನಿ ( )ಎಂದು ಸಸ್ಯಶಾಸ್ತ್ರೀಯ ಹೆಸರು. == ಸಸ್ಯದ ಗುಣಲಕ್ಷಣಗಳು == ಇದು ದೊಡ್ಡ ಪ್ರಮಾಣದ ಮರ.ಚುರುಕು ಬೆಳವಣಿಗೆ ಇದೆ.ನೇರವಾದ ಬೆಳವಣಿಗೆ.ಇದರ ದಾರುವು ನಸುಗೆಂಪು ಬಣ್ಣ ಹೊಂದಿದ್ದು ಅಲಂಕಾರಯುತವಾಗಿರುತ್ತದೆ.ಒಳ್ಳೆಯ ಹೊಳಪು ಬರುತ್ತದೆ.ಮರಗೆಲಸಕ್ಕೆ ಸುಲಭವಾಗಿದೆ. == ಉಪಯೋಗಗಳು == ಇದರ ದಾರುವು ಅಲಂಕಾರಯುತವಾಗಿರುವುದರಿಂದ ಒಳಾಂಗಣ ಅಲಂಕಾರದಲ್ಲಿ ಉಪಯೋಗಿಸಲ್ಪಡುತ್ತದೆ.ಪದರ ಹಲಗೆಗಳ ತಯಾರಿಕೆಯಲ್ಲಿ,ಪಿಠೋಪಕರಣಗಳ ತಯಾರಿಕೆಯಲ್ಲಿ ಉಪಯೋಗದಲ್ಲಿದೆ. == ಅಧಾರ ಗ್ರಂಥಗಳು == ೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ