ಮಹಾನಂದಿನ್ ಭಾರತೀಯ ಉಪಖಂಡದ ಶಿಶುನಾಗ ರಾಜವಂಶದ ಒಬ್ಬ ರಾಜನಾಗಿದ್ದನು. ಈ ರಾಜವಂಶವು ಪ್ರಾಚೀನ ಭಾರತದ ಪಾಟಲಿಪುತ್ರ ನಗರದ ಸುತ್ತಲಿನ ಭಾಗಗಳನ್ನು ಆಳುತ್ತಿತ್ತು (ಆಧುನಿಕ ಪಟ್ನಾ, ಬಿಹಾರ್). == ಜೀವನ == ಪುರಾಣಗಳು ನಂದಿವರ್ಧನನನ್ನು ಒಂಭತ್ತನೇ ಶಿಶುನಾಗ ಅರಸನೆಂದು ಮತ್ತು ಅವನ ಮಗ ಮಹಾನಂದಿನ್‍ನನ್ನು ಹತ್ತನೇ ಮತ್ತು ಕೊನೆಯ ಅರಸನೆಂದು ಪಟ್ಟಿ ಮಾಡುತ್ತವೆ. ಮಹಾನಂದಿನ್‍ನನ್ನು ಒಬ್ಬ ಶೂದ್ರ ಹೆಂಡತಿಗೆ ಹುಟ್ಟಿದ ಅವನ ಹಾದರದ ಮಗ ಮಹಾಪದ್ಮ ನಂದನು ಕೊಂದನು. == ಉಲ್ಲೇಖಗಳು == == ಮೂಲಗಳು == , (1988) [ 1966], (4th .), , 81-208-0433-3 , . (2008) [1906], , . . (.), , , . - .. , , , 978-1-60520-492-5