ಪ್ರಪಂಚದ ಇಡೀ ಉಪ್ಪುನೀರಿನ ಸಮೂಹ ಅಂತರಸಂಪರ್ಕವನ್ನು ಹೊಂದಿದೆ. ಈ ಸಮೂಹವು ಮಧ್ಯೆ ಮಧ್ಯೆಯಲ್ಲಿ ಖಂಡಗಳಿಂದ ಭಾಗಶಃ ಐದು ಉಪಸಮೂಹಗಳಾಗಿ ಬೇರ್ಪಟ್ಟಿದೆ. ಈ ಉಪಸಮೂಹಗಳೇ ಮಹಾಸಾಗರಗಳು. ಗಾತ್ರದಲ್ಲಿ ದೊಡ್ಡದಿಂದ ಚಿಕ್ಕದಾಗಿ ಮಹಾಸಾಗರಗಳು ಈ ರೀತಿ ಇವೆ: ಪೆಸಿಫಿಕ್ ಮಹಾಸಾಗರ ಅಟ್ಲಾಂಟಿಕ್ ಮಹಾಸಾಗರ ಹಿಂದೂ ಮಹಾಸಾಗರ ದಕ್ಷಿಣ ಮಹಾಸಾಗರ ಅರ್ಕ್ಟಿಕ್ ಮಹಾಸಾಗರ == ಅಂಕಿ-ಅಂಶಗಳು == ಇಡೀ ಜಲಸಮೂಹದ ವಿಸ್ತೀರ್ಣ ೩೬೨ಮಿಲಿಯನ್ ಚದರ ಕಿ.ಮಿ.ಗಳಷ್ಟು. ಭೂಮಿಯ ಮೇಲ್ಮೈನ ಸುಮಾರು ೪೦% ನ್ನು ಆವರಿಸಿರುವ ಮಹಾಸಮುದ್ರಗಳು ಸರಾಸರಿ ೩,೭೧೧ ಮೀಟರ್ ಆಳವನ್ನು ಹೊಂದಿದೆ. ಇಲ್ಲಿರುವ ನೀರಿನ ಪ್ರಮಾಣ ಸುಮಾರು ೧,೩೪೦ ಮಿಲಿಯನ್ ಘನ ಕಿ.ಮಿ.ಗಳಷ್ಟು ಇದ್ದು ಇದು ಭೂಮಿಯ ೦.೦೨೩% ಭಾರವಾಗಿದೆ. ಪೆಸಿಫಿಕ್ ಮಹಾಸಾಗರದಲ್ಲಿರುವ ಪ್ರಪಂಚದ ಅತಿ ಆಳದ ಪ್ರದೇಶ ಮರಿಯಾನಾ ಕಂದಕ ೧೦,೯೨೩ ಮೀಟರ್ (ಸುಮಾರು ೧೧ ಕಿ.ಮಿ.) ಆಳದಲ್ಲಿದೆ.