ಮಾಂಟೆನೆಗ್ರೊ (ಮಾಂಟೆನೆಗ್ರಿನ್/ಸೆರ್ಬಿಯನ್: Црна Гора, ಟ್ಚೆರ್ನ ಘೊರ ಉಚ್ಛಾರ ), ಆಲ್ಬೇನಿಯನ್: ಮಳಿ ಇ ಜಿ) ದಕ್ಷಿಣ ಯುರೋಪ್ನ ಬಾಲ್ಕನ್ ಪ್ರದೇಶದ ಒಂದು ದೇಶ. ಇದರ ದಕ್ಷಿಣಕ್ಕೆ ಏಡ್ರಿಯಾಟಿಕ್ ಸಮುದ್ರ, ಪಶ್ಚಿಮಕ್ಕೆ ಕ್ರೊಯೇಶಿಯ, ವಾಯುವ್ಯಕ್ಕೆ ಬೊಸ್ನಿಯ ಮತ್ತು ಹೆರ್ಜೆಗೊವಿನ, ಈಶಾನ್ಯಕ್ಕೆ ಸೆರ್ಬಿಯ ಮತ್ತು ಆಗ್ನೇಯಕ್ಕೆ ಆಲ್ಬೇನಿಯಗಳಿವೆ. ಈ ದೇಶ ಮಧ್ಯ ಯುಗಗಳಿಂದ ಸೆರ್ಬಿಯದ ಭಾಗವಾಗಿದ್ದು ಆಟ್ಟೊಮಾನ್ ಸಾಮ್ರಾಜ್ಯದಿಂದ ೧೮೭೮ರಲ್ಲಿ ಸ್ವಾತಂತ್ರ್ಯ ಪಡೆಯಿತು. ೧೯೧೮ರಿಂದ ಯುಗೊಸ್ಲಾವಿಯದ ಭಾಗವಾಗಿ, ಮುಂದೆ ಸೆರ್ಬಿಯ ಮತ್ತು ಮಾಂಟೆನೆಗ್ರೊದ ಒಕ್ಕೂಟದಲ್ಲಿ ಇತ್ತು. ೨೦೦೬ರಲ್ಲಿ ನಡೆದ ಜನಾಭಿಮತದಲ್ಲಿ ಸ್ವಾತಂತ್ರ್ಯಕ್ಕೆ ಬಹುಮತ ಸಿಕ್ಕಿ ಅದೇ ವರ್ಷದ ಜೂನ್ ೩ರಂದ ಅಧಿಕೃತವಾಗಿ ತನ್ನ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು. ಹೀಗಾಗಿ ಇದು ಪ್ರಪಂಚದ ಅತ್ಯಂತ ಹೊಸ ಸಂಪೂರ್ಣವಾಗಿ ಮನ್ನಿತ ದೇಶ ಹಾಗು ಸಂಯುಕ್ತ ರಾಷ್ಟ್ರ ಸಂಸ್ಥೆಯ ೧೯೨ನೇ ಸದಸ್ಯ ರಾಷ್ಟ್ರವಾಯಿತು. == ಉಲ್ಲೇಖಗಳು ==