ಮಾಂಡೂಕ್ಯೋಪನಿಷತ್ ಗಾತ್ರದಲ್ಲಿ ಅತ್ಯಂತ ಚಿಕ್ಕದಾಗಿದ್ದು ಬರೇ ೧೨ ಮಂತ್ರಗಳಿಂದ ಕೂಡಿದೆ. ಇದು ಅಥರ್ವವೇದಕ್ಕೆ ಸೇರಿದುದಾಗಿದೆ. ಇದರಲ್ಲಿಓಂ ಶಬ್ದದ ಹಿರಿಮೆ, ಅರ್ಥಶಕ್ತಿ, ಮನುಷ್ಯನಜಾಗ್ರತ್,ಸ್ವಪ್ನ,ಸುಷುಪ್ತಿ ,ತುರೀಯ ಎಂಬ ನಾಲ್ಕು ಅವಸ್ಥೆಗಳ ವಿವರಣೆ,ಬ್ರಹ್ಮ,ಹಿರಣ್ಯಗರ್ಭ,ತೈಜಸ ಎಂಬ ಸೃಷ್ಟಿಶಕ್ತಿಗಳ ಕುರಿತಾದ ನಿರ್ದಿಷ್ಟ ವಿವರಣೆಗಳಿವೆ. ಈ ಉಪನಿಷತ್ತು ಸೂಕ್ತ ಮಾನಸಿಕ ತಯಾರಿಯೊಂದಿಗೆ ಅದ್ಯಯನ ಮಾಡಿದಾಗ ಇದು ಬಹಳ ಮಹತ್ವದ್ದೂ, ಅರ್ಥಪೂರ್ಣವಾದುದೂ ಎಂದು ಅರಿವಾಗುತ್ತದೆ. ಸೂತ್ರ ಗ್ರಂಥದಂತಿದ್ದರೂ ಓಂಕಾರವೇ ಸಮಸ್ತ ವಿಶ್ವವೂ ಭೂತ ಭವಿಷ್ಯದ್ವರ್ತಮಾನಗಳೂ ಆಗಿದೆ ಎಂದು ವಿವರಿಸುವ ಈ ಉಪನಿಷತ್ತಿಗೆ ಗೌಡಪಾದರೂ ವಿಸ್ತಾರವಾದ ಕಾರಿಕೆಯನ್ನು ಬರೆದಿದ್ದಾರೆ. ಅದ್ವೈತ, ಪ್ರಪಂಚ ಎಂಬ ಪದಗಳು ಇದರಲ್ಲಿಯೇ ಮೊದಲು ಬಂದಿರುವುದು. == ಆಧಾರ == ೧.ಹಿಂದೂ ಧರ್ಮದ ಪರಿಚಯ:ಎ.ಕೆ.ಶಂಕರನಾರಾಯಣ ಭಟ್ == ಬಾಹ್ಯಸಂಪರ್ಕಗಳು == 2009-07-24 ವೇಬ್ಯಾಕ್ ಮೆಷಿನ್ ನಲ್ಲಿ. 2011-11-10 ವೇಬ್ಯಾಕ್ ಮೆಷಿನ್ ನಲ್ಲಿ., (). [೧] 2006-06-16 ವೇಬ್ಯಾಕ್ ಮೆಷಿನ್ ನಲ್ಲಿ., ಪಂಡಿತ್ ಜಸರಾಜ್ ರವರಿಂದ ಮಾಂಡೂಕ್ಯೋಪನಿಷತ್ತಿನ ಸಂಗೀತರೂಪದ ನಿರೂಪಣೆ. . (, Nikhilānanda, , ) 2009-07-24 ವೇಬ್ಯಾಕ್ ಮೆಷಿನ್ ನಲ್ಲಿ. .., 44