ಮಾಂಬಾಗಳು ವೇಗವಾಗಿ ಚಲಿಸುವ ವಿಷಪೂರಿತ ಹಾವುಗಳು. ಇವುಗಳ ಕುಲ ಡೆಂಡ್ರೋಆಸ್ಪಿಸ್ (ಇದರ ಅಕ್ಷರಶಃ ಅರ್ಥ "ಮರ ಆಸ್ಪ್") ಕುಟುಂಬ ಎಲಾಪಿಡೇ. ಪ್ರಸ್ತುತ ನಾಲ್ಕು ಉಪಲಬ್ಧ ಪ್ರಜಾತಿಗಳು ಇವೆ; ನಾಲ್ಕರಲ್ಲಿ ಮೂರು ಪ್ರಭೇದಗಳು ಮೂಲಭೂತವಾಗಿ ವೃಕ್ಷಗಳ ಮೇಲೆ ವಾಸಿಸುತ್ತವೆ ಮತ್ತು ಹಸಿರು ಬಣ್ಣ ಹೊಂದಿರುತ್ತವೆ, ಆದರೆ ಕಪ್ಪು ಮಾಂಬಾ ಎಂದು ಕರೆಯಲ್ಪಡುವ, ಡೆಂಡ್ರೋಆಸ್ಪಿಸ್ ಪಾಲಿಲೆಪಿಸ್, ಹೆಚ್ಚಾಗಿ ಭೂಮಿಯ ಮೇಲೆ ವಾಸಿಸುತ್ತವೆ ಮತ್ತು ಸಾಮಾನ್ಯವಾಗಿ ಕಂದು ಅಥವಾ ಬೂದು ಬಣ್ಣ ಹೊಂದಿರುತ್ತವೆ. ಎಲ್ಲ ಉಪ-ಸಹಾರಾ ಆಫ್ರಿಕಾದ ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತವೆ ಮತ್ತು ಎಲ್ಲ ಮಾಂಬಾಗಳ ಬಗ್ಗೆ ಅವುಗಳ ವ್ಯಾಪ್ತಿಯಲ್ಲಿ ಜನರಿಗೆ ಭಯವಿದೆ ವಿಶೇಷವಾಗಿ, ಕಪ್ಪು ಮಾಂಬಾ. ಆಫ್ರಿಕಾದಲ್ಲಿ ಮಾಂಬಾಗಳ ಬಗ್ಗೆ ಅನೇಕ ದಂತಕಥೆಗಳು ಮತ್ತು ಕಥೆಗಳು ಇವೆ. == ವರ್ತನೆ == ಮೂರು ಪ್ರಜಾತಿಯ ಹಸಿರು ಮಾಂಬಾಗಳು ವೃಕ್ಷಗಳ ಮೇಲೆ ವಾಸಿಸುತ್ತವೆ, ಆದರೆ ಕಪ್ಪು ಮಾಂಬಾ ಹೆಚ್ಚಾಗಿ ಭೂಮಿಯ ಮೇಲೆ ಇರುತ್ತದೆ. ಎಲ್ಲ ನಾಲ್ಕು ಪ್ರಜಾತಿಗಳು ಸಕ್ರಿಯ ದೈನಿಕ ಬೇಟೆಗಾರರು. ಹಕ್ಕಿಗಳು, ಮರದ ಮೇಲೆ ವಾಸಿಸುವ ಹಲ್ಲಿಗಳು, ಮತ್ತು ಸಣ್ಣ ಸಸ್ತನಿಗಳನ್ನು ಇವು ಬೇಟೆಯಾಡುತ್ತವೆ. ರಾತ್ರಿ ಸಮಯದಲ್ಲಿ ಕೆಲವು ಜಾತಿಗಳು, ವಿಶೇಷವಾಗಿ ಭೂಮಿಯ ಕಪ್ಪು ಮಾಂಬಾ, ಪೊದೆಗಳಲ್ಲಿ ಆಶ್ರಯ ಪಡೆಯುತ್ತವೆ. ಒಂದು ಮಾಂಬಾ ಅದೇ ಪೊದೆಯನ್ನು ಹಲವು ವರ್ಷಗಳು ಇಟ್ಟುಕೊಳ್ಳಬಹುದು. ಕಪ್ಪು ಮಾಂಬಾ ಸುಮಾರು ನಾಲ್ಕು ಮೀಟರುಗಳಷ್ಟು ಉದ್ದ ಬೆಳೆಯುವುದು. ಇದು ಆಫ್ರಿಕದ ವಿಷಸರ್ಪಗಳ ಪೈಕಿ ಅತ್ಯಂತ ದೊಡ್ಡದು. ತೆಳ್ಳಗೆ ಉದ್ದವಾಗಿರುವ ಇದಕ್ಕೆ ಕಿರಿದಾದ ತಲೆ, ನಯವಾದ ಫಲಕಗಳು ಇವೆ. ಕಣ್ಣುಗಳು ದೊಡ್ಡವು. ಪಾಪೆ ಗುಂಡಗಿದೆ. ಅಳಿಲು ಮತ್ತು ಮರಗಪ್ಪೆಗಳು ಇದರ ಪ್ರಧಾನ ಆಹಾರ. ಕ್ಷಣಾರ್ಧದಲ್ಲಿ ಎರಗಿ ಕಚ್ಚುವ ಸ್ವಭಾವ, ತುಂಬ ತೀಕ್ಷ್ಣವಾದ ವಿಷ-ಇವುಗಳಿಂದಾಗಿ ಕರಿಯ ಮಾಂಬ ಬಲು ಅಪಾಯಕಾರಿ. ಜೊತೆಗೆ ಕೆಣಕಿದಾಗ ಆಕ್ರಮಣ ಮಾಡುತ್ತದೆ. ಇದಕ್ಕೆ ನಾಗರಹಾವಿಗಿರುವಂಥ ಹೆಡೆಯಿಲ್ಲವಾದರೂ ಕೋಪಬಂದಾಗ ಕತ್ತನ್ನು ಗಾಳಿಯಿಂದ ಹಿಗ್ಗಿಸಬಲ್ಲುದು. ಕಲ್ಲು ಪೊಟರೆಗಳಲ್ಲಿ ಇದರ ವಾಸ. ಹಸುರು ಮಾಂಬ ಗಾತ್ರದಲ್ಲಿ ಕರಿಯದಕ್ಕಿಂತ ಚಿಕ್ಕದು. ಸಾಧಾರಣವಾಗಿ ಒಂದು ಮೀಟರ್ ಉದ್ದ ಇರುತ್ತದೆ. ಇದರ ಮೈಬಣ್ಣ ಉಜ್ವಲ ಹಸುರು. ಇದು ಸಾಮಾನ್ಯವಾಗಿ ಮರಗಿಡಗಳಲ್ಲಿ ವಾಸಿಸುತ್ತದೆ. ರೆಂಬೆಕೊಂಬೆಗಳನ್ನು ಹತ್ತಲು ಸಹಾಯಕವಾಗುವಂತೆ ಇದರ ಬಾಲಕ್ಕೆ ಸುರುಳಿ ಸುತ್ತಿಕೊಳ್ಳುವ ಸಾಮರ್ಥ್ಯ ಉಂಟು. ಕರಿಯ ಮಾಂಬಕ್ಕೆ ಹೋಲಿಸಿದರೆ ಇದು ಕಡಿಮೆ ಉಗ್ರ ಸ್ವಭಾವದ್ದು. ಮಾಂಬಾಗಳು ಮತ್ತು ಕೋಬ್ರಾಗಳದ್ದು ಒಂದೇ ಕುಟುಂಬ: ಎಲಾಪಿಡೇ. == ಸಂತಾನೋತ್ಪತ್ತಿ == ಹೆಣ್ಣು ಕಪ್ಪು ಮಾಂಬ ಹತ್ತರಿಂದ ಹದಿನೈದು ಅಂಡಾಕಾರದ ಮತ್ತು ಬಿಳಿಬಣ್ಣದ ಮೊಟ್ಟೆಗಳನ್ನು ನೆಲದ ಗುಳಿಗಳಲ್ಲಿ ಅಥವಾ ಮರದ ಪೊಟರೆಗಳಲ್ಲಿ ಇಡುತ್ತದೆ. ಮೊಟ್ಟೆಗಳು ನೂರಿಪ್ಪತ್ತರಿಂದ ನೂರಮೂವತ್ತು ದಿನಗಳಲ್ಲಿ ಒಡೆಯುತ್ತವೆ. == ಜಾತಿಗಳು == ಪ್ರಸ್ತುತ ಮಾನ್ಯವಿರುವ ಮಾಂಬಾ ಜಾತಿಗಳಲ್ಲಿ, ಮೂರು ಹಸಿರು ಮತ್ತು ಇನ್ನೊಂದು "ಕಪ್ಪು ಮಾಂಬಾ" ಎಂದು ಕರೆಯಲ್ಪಟ್ಟರೂ, ಬೂದು ಅಥವ ಕಂದು ಬಣ್ಣ ಹೊಂದಿರುತ್ತದೆ. == ==