= ಮಾಚಿಪತ್ರೆ = ವೈಜ್ಞಾನಿಕ ಹೆಸರು:ಆರ್ಟಿಮೀಸಿಯಾ ವಲ್ಗ್ಯಾರಿಸ್ == ಇತರೆ ಹೆಸರುಗಳು == ಮಗ್ವರ್ಟ್, ನದಿಮುಖದ ಮಗ್ವರ್ಟ್, ಫೆಲೋನ್ ಮೂಲಿಕೆ, ಕ್ರಿಸಾಂಥಮಂ ವೀಡ್, ಕಾಡು ಮಗ್ವರ್ಟ್, ನಾವಿಕನ ತಂಬಾಕು, ನಾಟಿ ಮ್ಯಾನ್, ಓಲ್ಡ್ ಮ್ಯಾನ್, ಸೇಂಟ್ ಜಾನ್ಸ್ ಪ್ಲಾಂಟ್. == ದೈಹಿಕ ರಚನೆ == ಮಾಚಿಪತ್ರೆ ಸಸ್ಯವು ಕನಿಷ್ಠ 1-2 ಮೀ ಉದ್ದದ ಮರದ ಮೂಲವನ್ನು ಅವಲಂಬಿಸಿರುತ್ತದೆ. 5-20 ಸೆಂ.ಮೀ ಉದ್ದ, ಗಾಢ ಹಸಿರು, ಕೆಂಪು ಇಲ್ಲವೇ ನೇರಳೆ ಛಾಯೆ ಇಲ್ಲವೇ ಕೆಳಭಾಗದಲ್ಲಿ ಬಿಳಿಯ ರೋಮವನ್ನು ಹೊಂದಿರುತ್ತವೆ. ಸಣ್ಣ ಹೂವುಗಳು ಕೆಂಪು ಹಾಗೂ ಗಾಢ ಹಳದಿ ದಳಗಳಿಂದ ಕೂಡಿರುತ್ತವೆ. ಹೂಗಳನ್ನು ಸಾಮಾನ್ಯವಾಗಿ ಆಗಸ್ಟ್ -ಅಕ್ಟೋಬರ್‍ನಲ್ಲಿ ಕಾಣಬಹುದು. == ವೈದ್ಯಕೀಯ ಉಪಯುಕ್ತತೆ == ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಔಷಧಿಗಳಲ್ಲಿ. ಮುಟ್ಟಿನ ಸಮಸ್ಯೆ ಇದರ ಎಲೆಗಳನ್ನು ಹಸಿವು ವರ್ಧಕ, ಮೂತ್ರವರ್ಧಕ, ನಿದ್ರಾಜನಕ ಎನ್ನಲಾಗುತ್ತದೆ. ಎಲೆ ಹಾಗೂ ಹೂವಿನ ಮೇಲ್ಭಾಗದ ದ್ರಾವಣವನ್ನು ಸಂಧಿವಾತ, ಗರ್ಭಾಶಯದ ಕ್ರಿಯಾತ್ಮಕ ಸ್ರಾವ, ಅಸ್ತಮಾ ಹಾಗೂ ಮೆದುಳಿನ ರೋಗಗಳಿಗೆ ಬಳಸಲಾಗುತ್ತದೆ. ಎಲೆಗಳನ್ನು ಕಾಲುನೋವಿನ ಚಿಕಿತ್ಸೆಗೂ ಬಳಸಲಾಗುತ್ತದೆ. == ಇತರೆ ಉಪಯೋಗಗಳು == ತಾಜಾ ಅಥವಾ ಒಣಗಿದ ಸಸ್ಯವನ್ನು ಕೀಟನಾಶಕವಾಗಿ ಬಳಸಲಾಗುತ್ತದೆ. ಸುವಾಸನೆಗಾಗಿ ಹಾಗೂ ಕಹಿಗಾಗಿ ಉಪಯೋಗಿಸಲಾಗುತ್ತದೆ. ಹುದುಗಿಸಿ, ಪಾನೀಯವಾಗಿ ಸೇವಿಸಲಾಗುತ್ತದೆ. == ಪ್ರತಿಬಂಧಕ == ಗರ್ಭವತಿಯರು ಇದನ್ನು ಸೇವಿಸುವುದರಿಂದ ಗರ್ಭಪಾತ ಸಂಭವಿಸಬಹುದು ಇದರ ದೀರ್ಘಕಾಲಿಕ ಬಳಕೆ ನರಮಂಡಲಕ್ಕೆ ಪರಿಣಾಮ ಬೀರಬಹುದು = ಉಲ್ಲೇಖಗಳು =