ಮಾಜುಲಿ ಅಥವಾ ಮಾಜೋಲಿ ಅಸ್ಸಾಂ ರಾಜ್ಯದಲ್ಲಿ ಬ್ರಹಪುತ್ರ ನದಿಯಲ್ಲಿರುವ ದ್ವೀಪವಾಗಿದೆ. ೨೦೧೬ರಲ್ಲಿ ಇದು ಒಂದು ಜಿಲ್ಲೆಯೆಂದು ಘೋಷಿತವಾದ ಮೊದಲ ದ್ವೀಪವಾಯಿತು. ೨೦ನೇ ಶತಮಾನದ ಆರಂಭದಲ್ಲಿ ಇದು ೮೮೦ ಚದರ ಕಿಲೋಮೀಟರ್‌ನಷ್ಟು ವಿಸ್ತೀರ್ಣವನ್ನು ಹೊಂದಿತ್ತು, ಆದರೆ ಕ್ಷರಣಕ್ಕೆ ಗಣನೀಯವಾಗಿ ಕಳೆದುಕೊಂಡು ೨೦೧೪ರ ವೇಳೆಗೆ ಇದು ೩೫೨ ಚದರ ಕಿಲೋಮೀಟರ್‌ಗಳಷ್ಟು ಆವರಿಸಿದೆ. ಅದರ ಸುತ್ತಲಿರುವ ನದಿ ಬೆಳೆದಂತೆ ಮಾಜುಲಿ ಸಂಕುಚಿಸಿದೆ. ಪ್ರಸಕ್ತವಾಗಿ ಮಾಜುಲಿ ಗಿನೆಸ್ ವಿಶ್ವ ದಾಖಲೆಗಳ ಪುಸ್ತಕದಲ್ಲಿ ವಿಶ್ವದ ಅತಿ ದೊಡ್ಡ ನದಿ ದ್ವೀಪವೆಂದು ಪಟ್ಟಿಮಾಡಲ್ಪಟ್ಟಿದೆ. ಈ ದ್ವೀಪವು ದಕ್ಷಿಣದಲ್ಲಿ ಬ್ರಹ್ಮಪುತ್ರ ನದಿಯಿಂದ ಮತ್ತು ಉತ್ತರದಲ್ಲಿ ಸುಬನ್‍ಸಿರಿ ನದಿಯಿಂದ ಕೂಡಿಕೊಂಡು ಬ್ರಹ್ಮಪುತ್ರದ ಸಂಗಮಶಾಖೆಯಾದ ಖೇರ್‌ಕುಟಿಯಾ ಕ್ಷೂಟಿಯಿಂದ ರೂಪಗೊಂಡಿದೆ. ಜೋರ್ಹಾಟ್ ನಗರದಿಂದ ಫ಼ೆರಿಗಳ ಮೂಲಕ ಮಾಜುಲಿ ದ್ವೀಪವನ್ನು ತಲುಪಬಹುದು. ಬ್ರಹ್ಮಪುತ್ರ ನದಿ ಹಾಗೂ ಅದರ ಉಪನದಿಗಳ ಮಾರ್ಗ ಬದಲಾವಣೆಗಳ ಕಾರಣದಿಂದ ಇದು ರೂಪಗೊಂಡಿತು. ಮಾಜುಲಿ ಅಸ್ಸಾಮೀ ನವ ವೈಷ್ಣವ ಸಂಸ್ಕೃತಿಯ ವಾಸಸ್ಥಾನವಾಗಿದೆ. == ಛಾಯಾಂಕಣ == == ಉಲ್ಲೇಖಗಳು == == ಹೊರಗಿನ ಕೊಂಡಿಗಳು == . 2015-03-21 ವೇಬ್ಯಾಕ್ ಮೆಷಿನ್ ನಲ್ಲಿ. & () .