ಮಾಣಾ ಭಾರತದ ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯಲ್ಲಿನ ಒಂದು ಗ್ರಾಮವಾಗಿದೆ. ಇದು 3,200 ಮೀಟರ್ ಎತ್ತರದಲ್ಲಿ ಇದೆ. ಮಾಣಾ ಮಾಣಾ ಕಣಿವೆಮಾರ್ಗದ ಮೊದಲು ಬರುವ ಕೊನೆಯ ಹಳ್ಳಿಯಾಗಿದೆ. ಈ ಗ್ರಾಮವು ಭಾರತ ಟಿಬೇಟ್ ಗಡಿರೇಖೆಯ ಹತ್ತಿರವಿದೆ. ಹಿಂದೂ ತೀರ್ಥಯಾತ್ರಾ ಸ್ಥಳವಾದ ಬದ್ರಿನಾಥ್‌ನಿಂದ ಇದು ೩ ಕಿ.ಮೀ ದೂರದಲ್ಲಿದೆ ಮತ್ತು ಈ ಎರಡೂ ಸ್ಥಳಗಳು ಸಾಂಸ್ಕೃತಿಕವಾಗಿ ಸಂಪರ್ಕ ಹೊಂದಿವೆ. ಚಳಿಗಾಲದ ತಿಂಗಳುಗಳಲ್ಲಿ, ಇಡೀ ಜನಸಂಖ್ಯೆಯು ಕೆಳ ಸ್ಥಳಗಳಿಗೆ ಬರುತ್ತದೆ, ಏಕೆಂದರೆ ಈ ಪ್ರದೇಶವು ಹಿಮದ ಅಡಿಯಲ್ಲಿ ಆವೃತವಾಗಿರುತ್ತದೆ. == ಸಾಂಸ್ಕೃತಿಕ ಗುರುತು == ಈ ಗ್ರಾಮದ ಗ್ರಾಮಸ್ಥರು ಸಾಂಸ್ಕೃತಿಕವಾಗಿ ಬದ್ರೀನಾಥ್ ದೇವಾಲಯದ ಚಟುವಟಿಕೆಗಳು ಮತ್ತು ಮಾತಾ ಮೂರ್ತಿಯ ವಾರ್ಷಿಕ ಜಾತ್ರೆಯೊಂದಿಗೆ ಸಂಬಂಧ ಹೊಂದಿದ್ದಾರೆ. ಇವರು ಮುಂಚಿನ ದಿನಗಳಲ್ಲಿ ಟಿಬೆಟ್‌ನೊಂದಿಗೆ ವ್ಯಾಪಾರ ಮಾಡುತ್ತಿದ್ದರು. ಮಾಣಾದಲ್ಲಿ ವ್ಯಾಸ್ ಗುಫಾ ಎಂಬ ಹೆಸರಿನ ಒಂದು ಸಣ್ಣ ಗುಹೆ ಇದೆ ಮತ್ತು ಮಹರ್ಷಿ ವ್ಯಾಸರು ಈ ಗುಹೆಯಲ್ಲಿ ಮಹಾಭಾರತವನ್ನು ರಚಿಸಿದರು ಎಂದು ನಂಬಲಾಗಿದೆ. ಇನ್ನೂ ಒಂದು ಗುಹೆಯನ್ನು ಗಣೇಶ ಗುಫಾ ಎಂದು ಕರೆಯಲಾಗುತ್ತದೆ ಮತ್ತು ಪ್ರವಾಸಿಗರು ಈ ಎರಡೂ ಗುಹೆಗಳಿಗೆ ನಿಯಮಿತವಾಗಿ ಭೇಟಿ ನೀಡುತ್ತಾರೆ. == ಇತರ ಸ್ಥಳಗಳು == ಹತ್ತಿರದ ಸ್ಥಳಗಳಲ್ಲಿ ವಸುಧಾರಾ ಜಲಪಾತ, ಸತೋಪಂಥ್ ಸರೋವರ, ಭೀಮ್ ಪುಲ್, ಸರಸ್ವತಿ ದೇವಾಲಯ ಇತ್ಯಾದಿಗಳು ಸೇರಿವೆ. == ಉಲ್ಲೇಖಗಳು ==