ಮಾನವತಿಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ಐದನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ಮನೋರಂಜನಿ ಎಂದು ಹೆಸರಿಸಿದ್ದಾರೆ. == ರಾಗ ಲಕ್ಷಣ ಮತ್ತು ಸ್ವರೂಪ == ಇದು ಪ್ರಥಮ "ಇಂದು" ಚಕ್ರದ ಪಂಚಮ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ. ಆರೋಹಣ ಸ ರಿ೧ ಗ೧ ಮ೦ ಪ ದ೨ ನಿ೩ ಸ ಅವರೋಹಣ ಸ ನಿ೩ ದ೨ ಪ ಮ೧ ಗ೧ ರಿ೧ ಸ ಇದು ಒಂದು ಸಂಪೂರ್ಣ ರಾಗವಾಗಿದೆ. == ಜನ್ಯ ರಾಗಗಳು == ಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ. ಘನಶ್ಯಾಮಲ,ಕುಂಜರಿ,ಇವುಗಳಲ್ಲಿ ಪ್ರಮುಖವಾದುದು. == ಜನಪ್ರಿಯ ರಚನೆಗಳು == ಎವರಿತೋ ನೆ ದೆಲ್ಪುಡು - ತ್ಯಾಗರಾಜರು, ನಿಜಭಕ್ತಿಂ - ಕೊಟೀಶ್ವರ ಅಯ್ಯರ್ ಶ್ರೀ ಹನುಮಂತಮ್ - ಬಾಲಮುರಳಿ ಕೃಷ್ಣ ಹೆಚ್ಚಾಗಿ ಕಛೇರಿಗಳಲ್ಲಿ ಹಾಡಲ್ಪಡುತ್ತವೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಯೂ ಟ್ಯೂಬ್ ನಲ್ಲಿ ಮೇಳಕರ್ತ ರಾಗಗಳು ರಾಗ ಮಾನವತಿ