ಮಾಲ್ಟ ಮೆಡಿಟೆರೇನಿಯನ್ ಸಮುದ್ರದಲ್ಲಿನ ಒಂದು ದ್ವೀಪರಾಷ್ಟ್ರ. ಮಾಲ್ಟ ಒಟ್ಟು ಏಳು ದ್ವೀಪಗಳನ್ನು ಹೊಂದಿದೆ. ಮಾಲ್ಟ ದಕ್ಷಿಣ ಯುರೋಪ್‌ನ ಭಾಗವೆಂದು ಪರಿಗಣಿಸಲ್ಪಡುತ್ತದೆ. ಬಲು ಸಣ್ಣ ವಿಸ್ತಾರವುಳ್ಳ ಮಾಲ್ಟ ದಟ್ಟ ಜನವಸತಿಯನ್ನು ಹೊಂದಿದೆ.