ಮಾಲ್ಡೋವ ಗಣರಾಜ್ಯ ( ) ಪೂರ್ವ ಯುರೋಪ್ನ ಒಂದು ಭೂಆವೃತ ದೇಶ. ಇದರ ಪಶ್ಚಿಮಕ್ಕೆ ರೊಮಾನಿಯ ಮತ್ತು ಉಳಿದ ದಿಕ್ಕುಗಳಲ್ಲಿ ಯುಕ್ರೇನ್ ದೇಶಗಳಿವೆ. ಇಲ್ಲಿನ ಅಧಿಕೃತ ಭಾಷೆ ಮಾಲ್ಡೋವದ ಭಾಷೆ. ಇದು ರೊಮಾನಿಯದ ಭಾಷೆಯ ಮತ್ತೊಂದು ಹೆಸರು. ಐತಿಹಾಸಿಕವಾಗಿ ಈ ದೇಶವು ಮಾಲ್ಡೋವಿಯ ರಾಜ್ಯದ ಭಾಗವಾಗಿತ್ತು. ೧೮೧೨ರಲ್ಲಿ ಇದು ರಷ್ಯಾದ ಸಾಮ್ರಾಜ್ಯದ ವಶವಾಯಿತು. ಮುಂದೆ ೧೯೪೦ರಲ್ಲಿ ಇದು ಸೋವಿಯೆಟ್ ಒಕ್ಕೂಟದ ಕೈವಶವಾಯಿತು. ೧೯೯೧ರ ಆಗಸ್ಟ್ ೨೭ರಂದು ಇದು ಒಕ್ಕೂಟದಿಂದ ಸ್ವಾತಂತ್ರ್ಯ ಪಡೆಯಿತು. == ಉಲ್ಲೇಖಗಳು ==