ಮಾವಂಜಿ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಒಂದು ಸ್ಥಳ ಮತ್ತು ಕುಟುಂಬದ ಹೆಸರು. == ಭೌಗೋಳಿಕ ವ್ಯಾಪ್ತಿ == ಮಾವಂಜಿ, ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಒಂದು ಸ್ಥಳ. ಈ ಸ್ಥಳವು ಕೇರಳ ಕರ್ನಾಟಕದ ಗಡಿ ಮತ್ತು ಪಯಸ್ವಿನಿ ನದಿಗೆ ಹತ್ತಿರದಲ್ಲಿದೆ. == ಹಿನ್ನಲೆ == ಈ ಸ್ಥಳದಲ್ಲಿ ಮಾವಂಜಿ ಕುಟುಂಬದ ತರವಾಡು ಐನ್ ಮನೆ ಇದ್ದು, ಮಾವಂಜಿ-ಮದುವೆಗದ್ದೆ ಈ ಗ್ರಾಮದಲ್ಲಿರುವ ಒಂದು ಮನೆತನ. ಆನೆಗಳ ಹಿಂಡು ಈ ಸ್ಥಳದಲ್ಲಿ ದಾಳಿ ಮಾಡುವುದು ಸಾಮಾನ್ಯ ಕಳೆದ ಕೆಲವು ವರ್ಷಗಳಿಂದ. == ಆಚರಣೆ ಮತ್ತು ಸಂಸ್ಕೃತಿಗಳು == ಮಾವಂಜಿ ಸ್ಥಳ ಮತ್ತು ಕುಟುಂಬದ ಆಚರಣೆ, ಪರಿಸರದ ಸಂಸ್ಕೃತಿಗಳು. ಕಾರ್ತಿಂಗದಲ್ಲಿ ದೈವ, ದೇವರಿಗೆ ಹರಕೆ ಸಮ್ಮಾನ ಕೊಡುವುದು, ರಾತ್ರಿ ಎಡೆ ಬಳಸುವುದು ಮತ್ತು ಗುಳಿಗನ ಹರಕೆ. ಪ್ರತಿ ವರ್ಷ ದೀಪಾವಳಿ ಹಬ್ಬದಂದು ಬಲಿಯೇಂದ್ರ ಪೂಜೆ. ಕೆಡ್ಡಸ. == ದೈವಾರಧನೆ == ಮಾವಂಜಿ ಸ್ಥಳಕ್ಕೆ ಸಂಬಂಧಿಸಿದ ನಾಗ ದೇವರು, ದೈವಗಳು: ನಾಗ (8 ಕಲ್ಲುಗಳು), ಸಂತತಿ ನಾಗ (1ಕಲ್ಲು), ಶ್ರೀ ನಾಗಬ್ರಹ್ಮ(1ಕಲ್ಲು). ದೈವ ಕಟ್ಟೆಗಳು ಲೆಕ್ಕೆಸಿರಿ (ರಕ್ತೇಶ್ವರಿ ದೈವ). ಪಂಜುರ್ಲಿ. ಕೊರತಿ. ವೈನಾಟ್ ಕುಲವನ್ ಮತ್ತು ವಿಷ್ಣುಮೂರ್ತಿ ಚಾವಡಿ ಮತ್ತು ಗುಡಿ ಇಲ್ಲಿವೆ. ಮಾವಂಜಿ ಕುಟುಂಬಕ್ಕೆ ಸಂಬಂಧಿಸಿದ ದೈವಗಳು: ರುದ್ರ ಚಾಮುಂಡಿ, ಶಿರಾಡಿ ದೈವ ಈ ಮಾವಂಜಿ ಮನೆತನದ ಧರ್ಮದೈವ. ಒಂದು ಚಾವಡಿ ಒಳಗೆ ಧೂಮಾವತಿ / ಜುಮಾದಿ (ತುಳು). ರುದ್ರಾಂಡಿ / ರುದ್ರ-ಚಾಮುಂಡಿ. ಪಂಜುರ್ಲಿ. ಕುಪ್ಪೆ ಪಂಜುರ್ಲಿ. ಸತ್ಯದೇವತೆ. ಕಲ್ಕುಡ-ಕಲ್ಲುರ್ಟಿ. ಗುಳಿಗ ಕಟ್ಟೆ, ಚಾವಡಿ ಇಲ್ಲಿವೆ. ಶಿರಾಡಿ ದೈವ (ಚಾವಡಿ). ಮಾವಂಜಿ ತರವಾಡು ಮನೆಯ ಆವರಣದೊಳಗೆ ಆರಾಧನೆಗೊಳ್ಳುತ್ತಿದೆ. ಅನತಿ ದೂರದಲ್ಲಿ ಸ್ಥಳಕ್ಕೆ ಸಂಬಂಧಿಸಿದ ಬೈನಾಟಿ ದೈವ, ವಿಷ್ಣುಮೂರ್ತಿ ದೈವದ ಆರಾಧನೆ ನಡೆಯುತ್ತಿದೆ. == ಕೃಷಿ == ಅಡಿಕೆ ರಬ್ಬರ್ ಗೇರುಬೀಜ ತೆಂಗು ಕೊಕ್ಕೊ ಗದ್ದೆ ಬೇಸಾಯ == ಅಮರ-ಸುಳ್ಯ ಬಂಡಾಯ == ರೈತ ಸ್ವಾತಂತ್ರ್ಯ ಹೋರಾಟಗಾರರು ಬೆಳ್ಳಾರೆ ಬಂಗಲೆಗೆ ಹೋಗುವ ಮುನ್ನ ಇದೇ ಗದ್ದೆಯಲ್ಲಿದ್ದರು. ಇಂದು ಮದುವೆಗದ್ದೆ ಎಂದು ಕರೆಯುತ್ತಾರೆ == ಉಲ್ಲೇಖಗಳು ==